ದೇಶ

ಕೋವಿಡ್-19 ಡ್ಯೂಟಿ ಮುಗಿಸಿ 20 ದಿನಗಳ ನಂತರ ಮನೆಗೆ ವಾಪಸ್ಸಾದ ವೈದ್ಯೆಗೆ ಅಭೂತಪೂರ್ವ ಸ್ವಾಗತ: ಮೋದಿ ಮೆಚ್ಚುಗೆ

ಕೋವಿಡ್-19 ಡ್ಯೂಟಿ ಮುಗಿಸಿ 20 ದಿನಗಳ ನಂತರ ಮನೆಗೆ ವಾಪಸ್ಸಾದ ವೈದ್ಯೆಗೆ ಕುಟುಂಬಸ್ಥರು ಹಾಗೂ ನೆರೆಹೊರೆಯವರಿಂದ ಅಭೂತಪೂರ್ವ ಸ್ವಾಗತ ನೀಡಲಾಗಿದೆ. ಮನಕಲುಕುವ ಈ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಕೋವಿಡ್-19 ಡ್ಯೂಟಿ ಮುಗಿಸಿ 20 ದಿನಗಳ ನಂತರ ಮನೆಗೆ ವಾಪಸ್ಸಾದ ವೈದ್ಯೆಗೆ ಅಭೂತಪೂರ್ವ ಸ್ವಾಗತ: ಮೋದಿ ಮೆಚ್ಚುಗೆ
ವೈದ್ಯೆಗೆ ಸ್ವಾಗತ, ಪ್ರಧಾನಿ ಮೋದಿ ಚಿತ್ರ
Published On :

ನವದೆಹಲಿ: ಕೋವಿಡ್-19 ಡ್ಯೂಟಿ ಮುಗಿಸಿ 20 ದಿನಗಳ ನಂತರ ಮನೆಗೆ ವಾಪಸ್ಸಾದ ವೈದ್ಯೆಗೆ ಕುಟುಂಬಸ್ಥರು ಹಾಗೂ ನೆರೆಹೊರೆಯವರಿಂದ ಅಭೂತಪೂರ್ವ ಸ್ವಾಗತ  ನೀಡಲಾಗಿದೆ. ಮನಕಲುಕುವ ಈ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಕೋವಿಡ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯೆ 20 ದಿನಗಳ ಕಾಲ ಕೆಲಸ ಮಾಡಿ ಮನೆಗೆ ವಾಪಾಸ್ಸಾದ ಬಳಿಕ ಆಕೆಯ ಕುಟುಂಬಸ್ಥರು ಮತ್ತು ನೆರೆಹೊರೆಯವರು ಸ್ವಾಗತಿಸಿರುವ ವಿಡಿಯೋವನ್ನು ಚಂಡೀಗಢ ಬಿಜೆಪಿ ಕಾರ್ಯದರ್ಶಿ ದೀಪಕ್ ಮಲ್ಹೋತ್ರಾ ಟ್ವೀಟ್ ಮಾಡಿದ್ದರು.

ಆ ವಿಡಿಯೋವನ್ನು ಶೇರ್ ಮಾಡಿರುವ ಮೋದಿ, ಇದು ಭಾರತದ ಸ್ಪೂರ್ತಿ, ಕೋವಿಡ್-19 ವಿರುದ್ಧ ಧೈರ್ಯದಿಂದ ಹೋರಾಡುತ್ತೇವೆ. ಈ ನಿಟ್ಟಿನಲ್ಲಿ ಮಂಚೂಣಿಯಲ್ಲಿ ಕೆಲಸ ಮಾಡುವವರ ಬಗ್ಗೆ ನಾವು ಯಾವಾಗಲೂ ಹೆಮ್ಮೆ ಪಡುತ್ತೇವೆ ಎಂದು ಮೋದಿ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.