ಕೊರೋನಾ ವೈರಸ್: ಕೋವಿಡ್ 19 ಸೋಂಕು ಹೆಚ್ಚಳ ಹಿನ್ನಲೆ, ಕಾಶ್ಮೀರದ 20 ಗ್ರಾಮಗಳು ರೆಡ್ ಜೋನ್ ಆಗಿ ಘೋಷಣೆ
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕಾಶ್ಮೀರದ ಸುಮಾರು 20 ಗ್ರಾಮಗಳನ್ನು ರೆಡ್ ಜೋನ್ ಆಗಿ ಘೋಷಣೆ ಮಾಡಲಾಗಿದೆ.

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕಾಶ್ಮೀರದ ಸುಮಾರು 20 ಗ್ರಾಮಗಳನ್ನು ರೆಡ್ ಜೋನ್ ಆಗಿ ಘೋಷಣೆ ಮಾಡಲಾಗಿದೆ.
ಬಂಡಿಪೋರಾ ಜಿಲ್ಲೆಯ ಪಂಡಿ ಮೊಹಲಾ ಹಾಜಿನ್, ಚಂದರ್‌ಗೀರ್ ಹಾಜಿನ್, ಪುಲ್ವಾಮಾ ಜಿಲ್ಲೆಯ ಬಟಗುಂಡ್ ಹಾಜಿನ್, ಗುಡೂರ, ಚಂದಗಂ, ಪಿಂಗ್ಲೆನಾ, ಪರಿಗಂ, ಅಭಮಾ, ಸಾಂಗರ್‌ವಾನಿ, ಖೈಗಮ್ ಮತ್ತು ಗ್ಯಾಂಡರ್ ಬಾಲ್ ಜಿಲ್ಲೆಯ ವಾಸ್ಕುರಾ, ಶೋಪಿಯಾನ್ ಜಿಲ್ಲೆಯ ಸೆಡ್ಯೂ, ಮತ್ತು ರಾಮನಗ್ರಿ ಸೇರಿದಂತೆ ಒಟ್ಟು 20 ಗ್ರಾಮಗಳನ್ನು ರೆಡ್ ಜೋನ್ ಎಂದು ಘೋಷಣೆ ಮಾಡಿ ಸಂಪೂರ್ಣ ದಿಗ್ಬಂಧನ ಹೇರಲಾಗಿದೆ.
ಇದು ಮಾತ್ರವಲ್ಲದೇ ಶ್ರೀನಗರದ ಮೆಹಜೂರ್ ನಗರ, ನಾಟಿಪೋರಾ, ಲಾಲ್ ಬಜಾರ್, ಈದ್ಗಾ ಮತ್ತು ಶಾಲ್ಟೆಂಗ್ ಮತ್ತು ಬದಗಾಮ್ ಜಿಲ್ಲೆಯ ಚಡೂರಾ ಗ್ರಾಮವನ್ನೂ ಕೂಡ ರೆಡ್ ಜೋನ್ ಎಂದು ಘೋಷಣೆ ಮಾಡಲಾಗಿದೆ.
ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವರೆಗೂ 49 ಮಂದಿ ವೈರಸ್ ಸೋಂಕಿಗೆ ತುತ್ತಾಗಿದ್ದು, ಈ ಪೈಕಿ ಇಂದು ಒಂದೇ ದಿನ 11 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಜಮ್ಮುವಿನಲ್ಲಿ ಮೂರು, ಕಾಶ್ಮೀರದಲ್ಲಿ 8 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


