ದೆಹಲಿ: ಮೊಹಲ್ಲಾ ಕ್ಲಿನಿಕ್‌ನ ಮತ್ತೋರ್ವ ವೈದ್ಯರಲ್ಲಿ ಕೊರೋನಾ ವೈರಸ್ ಸೋಂಕು ದೃಢ
ಈಶಾನ್ಯ ದೆಹಲಿಯ ಮೊಹಲ್ಲಾ ಕ್ಲಿನಿಕ್‌ನ ಮತ್ತೋರ್ವ ವೈದ್ಯರಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ.

ನವದೆಹಲಿ: ಈಶಾನ್ಯ ದೆಹಲಿಯ ಮೊಹಲ್ಲಾ ಕ್ಲಿನಿಕ್‌ನ ಮತ್ತೋರ್ವ ವೈದ್ಯರಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ.
ಈಶಾನ್ಯ ದೆಹಲಿಯ ಬಾಬರ್‌ಪುರದಲ್ಲಿರುವ ಮೊಹಲ್ಲಾ ಕ್ಲಿನಿಕ್‌ನ ವೈದ್ಯರಿಗೆ ಸೋಂಕು ದೃಢಪಟ್ಟಿದೆ ಎಂದು ಮಂಗಳವಾರ ಮೂಲಗಳು ತಿಳಿಸಿವೆ.
ವೈದ್ಯರಲ್ಲಿ ಕೊರೊನಾವೈರಸ್ ಪಾಸಿಟಿವ್ ವರದಿ ಬಂದ ನಂತರ, ಮೊಹಲ್ಲಾ ಚಿಕಿತ್ಸಾಲಯದ ಹೊರಗೆ ನೋಟಿಸ್ ಹಾಕಲಾಗಿದ್ದು, ಮಾರ್ಚ್ 12-20ರ ನಡುವೆ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ ರೋಗಿಗಳು ಮುಂದಿನ 15 ದಿನಗಳವರೆಗೆ ತಮ್ಮ ಮನೆಯಲ್ಲಿ ಕಟ್ಟುನಿಟ್ಟಾಗಿ ಸ್ವಯಂ-ಸಂಪರ್ಕ ತಡೆಯಲ್ಲಿ ಇರಬೇಕು ಎಂದು ವಿನಂತಿಸಲಾಗಿದೆ.
ಕಳೆದ ವಾರ, ಈಶಾನ್ಯ ದೆಹಲಿಯ ಮೌಜ್‌ಪುರದ ಮೊಹಲ್ಲಾ ಆಸ್ಪತ್ರೆಯ ವೈದ್ಯರು, ಅವರ ಪತ್ನಿ ಮತ್ತು ಹದಿಹರೆಯದ ಮಗಳಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಅವರೊಂದಿಗೆ ಸಂಪರ್ಕಕ್ಕೆ ಬಂದ 900 ಕ್ಕೂ ಹೆಚ್ಚು ಜನರನ್ನು 14 ದಿನಗಳ ಸಂಪರ್ಕತಡೆಯಲ್ಲಿ ಇರಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


