ಕೊರೋನಾ ವೈರಸ್: 'ಉಗುಳು ದಾಳಿ' ಕೋರರ ಬಗ್ಗೆ ಎಚ್ಚರವಿರಲಿ...!
ಕೊರೊನಾ ವೈರಸ್ ಸೋಂಕು ಕೋವಿಡ್ -19 ಹರಡುವುದನ್ನು ತಡೆಯಲು ಇಡೀ ಜಗತ್ತು ಕಠಿಣ ಕ್ರಮಗಳನ್ನ ಜಾರಿಗೊಳಿಸುತ್ತಿದ್ದರೆ... ಇತ್ತ ಕಿಡಿಗೇಡಿಗಳು ಹೊಸ ಸಮಸ್ಯೆ ಸೃಷ್ಟಿಸುತ್ತಿದ್ದಾರೆ.

ನವದೆಹಲಿ: ಕೊರೊನಾ ವೈರಸ್ ಸೋಂಕು ಕೋವಿಡ್ -19 ಹರಡುವುದನ್ನು ತಡೆಯಲು ಇಡೀ ಜಗತ್ತು ಕಠಿಣ ಕ್ರಮಗಳನ್ನ ಜಾರಿಗೊಳಿಸುತ್ತಿದ್ದರೆ... ಇತ್ತ ಕಿಡಿಗೇಡಿಗಳು ಹೊಸ ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಜಾರಿಗೊಳಿಸುವ ಪೊಲೀಸರು, ಒಂಟಿಯಾಗಿ ಒಡಾಡುವ ಮಹಿಳೆಯ ಮೇಲೆ ಉಗುಳು ದಾಳಿ ನಡೆಸಿ ಸೋಂಕು ಹಬ್ಬಿಸಿ, ಭಯ ಭೀತಗೊಳಿಸುವ ಕೃತ್ಯಗಳು ವಿಶ್ವದ ಹಲವೆಡೆ ವರದಿಯಾಗಿವೆ.
ಅಮೆರಿಕಾದಿಂದ ಆಸ್ಟ್ರೇಲಿಯಾವರೆಗೆ ಉಗುಳು ದಾಳಿ ಪ್ರಕರಣಗಳು ವರದಿಯಾಗಿವೆ. ಆದರೆ ಈ ದಾಳಿಗೆ ಒಳಗಾಗುತ್ತಿರುವುದು ಮಾತ್ರ ಕರ್ತವ್ಯ ನಿರತ ಪೊಲೀಸರು. ಒಂಟಿಯಾಗಿ ಸಂಚರಿಸುವ ಮಹಿಳೆಯರು. ಸೋಂಕು ಹರಡದಂತೆ ಸರ್ಕಾರಗಳು ಜಾರಿಗೊಳಿಸಿರುವ ಲಾಕ್ ಡೌನ್ ನಿರ್ಬಂಧಗಳನ್ನು ಜಾರಿಗೊಳಿಸುತ್ತಿರುವ ಪೊಲೀಸರ ಮೇಲೆ ಹಲವೆಡೆ ಉಗುಳು ದಾಳಿಗಳು ನಡೆದಿವೆ.
ಕೊರೊನಾ ವೈರಸ್ ಸಾಂಕ್ರಾಮಿಕವಾಗಿರುವ ಭಯಾನಕ ಸಂದರ್ಭದಲ್ಲಿ ಉದ್ದೇಶ ಪೂರ್ವಕವಾಗಿ ಉಗುಳಿದ ಅಥವಾ ಕೆಮ್ಮಿದ ಎಂಬ ಆರೋಪದ ಮೇಲೆ ಬ್ರಿಟನ್ ನಲ್ಲಿ ೧೪ ವರ್ಷದ ಬಾಲಕನನ್ನು ಬಂಧಿಸಲಾಗಿದೆ. ಕಳೆದ ವಾರ ಆರೋಪ ಹೊರಿಸಲಾಗಿದ್ದು, ಈ ವಾರ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಿದೆ.
35 ವರ್ಷದ ವ್ಯಕ್ತಿಯೊಬ್ಬ ವಾಯುವ್ಯ ಇಂಗ್ಲೆಂಡ್‌ನ ಕಾರ್ಲಿಸ್ಲೆ ಎಂಬಲ್ಲಿ ಮೂವರು ಪೊಲೀಸ್ ಅಧಿಕಾರಿಗಳ ಮೇಲೆ ಉಗುಳಿ, ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾನೆ. ಪೊಲೀಸ್ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ತನ್ನ ಹಾಸ್ಟೆಲ್ ಗೆ ಕರೆಸಿಕೊಂಡ ದುಷ್ಕರ್ಮಿ. ಪೊಲೀಸ್ ಅಧಿಕಾರಿಗಳ ಮೇಲೆ ಉಗುಳಿ, ಹಲ್ಲೆ ನಡೆಸಿದ್ದಾನೆ ಎಂದು ಬಿಬಿಸಿ ವರದಿ ಮಾಡಿದೆ.
ಕ್ಯಾಲಿಫೋರ್ನಿಯಾದಲ್ಲಿ ಮಹಿಳೆಯೊಬ್ಬರು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹದಿಹರೆಯದ ಹುಡುಗನಿಗೆ ಸೂಚಿಸಿದಾಗ ಕುಪಿತ ಗೊಂಡ ಹುಡುಗ ಉದ್ದೇಶ ಪೂರ್ವಕವಾಗಿ ಆಕೆಯ ಮುಖದ ಹತ್ತಿರ ಕೆಮ್ಮಿದ್ದಾನೆ ಎಂದು ದೂರಲಾಗಿದೆ. ಅಮೆರಿಕಾದ ನೆರೆಹೊರೆ ಕಣ್ಗಾವಲು ಅ್ಯಪ್ ನಲ್ಲಿ ತನಗಾಗಿರುವ ತೊಂದರೆ ವಿವರಿಸಿರುವ ಮಹಿಳೆ, ಹುಡುಗ ತನ್ನನ್ನು ಹೇಗೆ ತಳ್ಳಿದ, ನಂತರ ಮತ್ತೊಬ್ಬ ವ್ಯಕ್ತಿಜೊತೆ ಬಂದು ಅವಾಚ್ಯವಾಗಿ ನಿಂದಿಸಿ ತನ್ನ ಮೇಲೆ ಹೇಗೆ ಉಗಿದ ಎಂಬುದನ್ನು ಆಕೆ ವಿವರಿಸಿದ್ದಾಳೆ.
ಇಂತಹದ್ದೇ ದಾಳಿಗಳು ಅಸ್ಟ್ರೇಲಿಯಾದಲ್ಲೂ ವರದಿಯಾಗಿವೆ. ಈ ದಾಳಿಗಳು ಜನಾಂಗೀಯ ಸ್ವರೂಪದಲ್ಲಿವೆ. ದಾಳಿ ಕೋರರನ್ನು ಬಂಧಿಸಿ ಅವರ ವಿರುದ್ದ ಹಲ್ಲೆ ಆರೋಪ ಹೊರಿಸಲಾಗಿದೆ.
ಭಾರತದಲ್ಲೂ ಕೂಡ, ಇಂತಹ ಕೃತ್ಯ ನಡೆದಿದೆ
ನವದೆಹಲಿಯ ವಿಜಯ್ ವಿಹಾರ ಪ್ರದೇಶದಲ್ಲಿ ಕಳೆದ ವಾರ ಒಂಟಿಯಾಗಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯೊಬ್ಬರ ಮೇಲೆ ಕೊರೊನಾ ವೈರಸ್ ಸೋಂಕಿತ ಎಂದು ಹೇಳಿಕೊಂಡ 40 ವರ್ಷದ ವ್ಯಕ್ತಿಯೊಬ್ಬ ಮುಖದ ಉಗುಳಿದ್ದಾನೆ. ಸಂತ್ರಸ್ಥ ಮಹಿಳೆ ಮಣಿಪುರದರಾಗಿದ್ದು, ಈ ದಾಳಿಯನ್ನು ಜನಾಂಗೀಯ ದಾಳಿ ಎಂದು ಹಲವು ಸೋಷಿಯಲ್ ಮೀಡಿಯಾ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಪೊಲೀಸರು ಈ ಘಟನೆ ಕತ್ತಲು ಆವರಿಸಿದ ರಸ್ತೆಯೊಂದರಲ್ಲಿ ನಡೆದಿದೆ. ರಸ್ತೆಯಲ್ಲಿ ಮಹಿಳೆ ನಡೆದು ಹೋಗುತ್ತಿದ್ದಾಗ ಸ್ಕೂಟರ್ ನಲ್ಲಿ ಬಂದ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ. ಘಟನೆ ನಡೆದಾಗ ಮಹಿಳೆ ಒಂಟಿಯಾಗಿದ್ದರು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


