ಕೊರೋನಾ ವೈರಸ್ ಸೋಂಕಿತ ರೋಗಿಯೊಂದಿಗೆ ಸಂಪರ್ಕ, 6 ವೈದ್ಯರು, 4 ದಾದಿಯರು ಕ್ವಾರಂಟೈನ್ ಗೆ!
ಕೊರೋನಾ ವೈರಸ್ ಸೋಂಕಿತ ರೋಗಿಯೊಂದಿಗೆ ಸಂಪರ್ಕ ಹೊಂದಿದ ಪರಿಣಾಮ ದೆಹಲಿ ಆಸ್ಪತ್ರೆಯ 6 ವೈದ್ಯರು, 4 ದಾದಿಯರನ್ನು ಕ್ವಾರಂಟೈನ್ ಗೆ ಹಾಕಿರುವ ಘಟನೆ ಭಾನುವಾರ ನಡೆದಿದೆ.

ನವದೆಹಲಿ: ಕೊರೋನಾ ವೈರಸ್ ಸೋಂಕಿತ ರೋಗಿಯೊಂದಿಗೆ ಸಂಪರ್ಕ ಹೊಂದಿದ ಪರಿಣಾಮ ದೆಹಲಿ ಆಸ್ಪತ್ರೆಯ 6 ವೈದ್ಯರು, 4 ದಾದಿಯರನ್ನು ಕ್ವಾರಂಟೈನ್ ಗೆ ಹಾಕಿರುವ ಘಟನೆ ಭಾನುವಾರ ನಡೆದಿದೆ.
ದೆಹಲಿಯ ಡಾ.ರಾಮ್ ಮನೋಹರ್ ಲೋಹಿಯಾ (ಆರ್ ಎಂಎಲ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕು ಪೀಡಿತ ರೋಗಿಯನ್ನು ಸಂಪರ್ಕಿಸಿದ ಕಾರಣ ಆಸ್ಪತ್ರೆಗೆ ಸೇರಿದ 6 ವೈದ್ಯರು, 4 ದಾದಿಯರನ್ನು 14 ದಿನಗಳ ಕ್ವಾರಂಟೈನ್ ಗೆ ಹಾಕಲಾಗಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ಮಾಧ್ಯಮಗಳಿಗೆ ಮಾಹಿತಿ ನೀಡಿದೆ.
ಮೂಲಗಳ ಪ್ರಕಾರ ಆಸ್ಪತ್ರೆಗೆ ದಾಖಲಾಗಿದ್ದ ಕೊರೋನಾ ವೈರಸ್ ಸೋಂಕಿತ ರೋಗಿಯೊಬ್ಬರೊಂದಿಗೆ ಆರ್ ಎಂಎಲ್ ಆಸ್ಪತ್ರೆಯ 6 ವೈದ್ಯರು, 4 ದಾದಿಯರು ಯಾವುದೇ ಮುಂಜಾಗ್ರಾತ ಪರಿಕರಗಳಿಲ್ಲದೇ ಅರಿವಿಲ್ಲದೇ ಸಂಪರ್ಕಕ್ಕೆ ಬಂದಿದ್ದಾರೆ. ಹೀಗಾಗಿ ಇವರಿಗೂ ವೈರಸ್ ಸೋಂಕು ತಾಗಿರುವ ಸಾಧ್ಯತೆ ಮೇರೆಗೆ ಎಲ್ಲ 6 ವೈದ್ಯರು ಮತ್ತು 4 ದಾದಿಯರನ್ನು ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಇಂತಹ ತಪ್ಪು ಮರುಕಳಿಸದಂತೆ ಎಚ್ಚರಿಕೆ ವಹಿಸುವುದಾಗಿ ಆಸ್ಪತ್ರೆ ಆಡಳಿತ ಮಂಡಳಿ ಭರವಸೆ ನೀಡಿದೆ.
Related Article
ಕಾರ್ಮಿಕರಿಂದ ಮನೆ ಮಾಲೀಕರು 1 ತಿಂಗಳು ಬಾಡಿಗೆ ಪಡೆಯುವಂತಿಲ್ಲ: ಕೇಂದ್ರ ಸರ್ಕಾರ
ಕೊರೋನಾ ವೈರಸ್: ಕೋವಿಡ್ 19 ದಾಳಿಗೆ ಜನರು ಮಾತ್ರರಲ್ಲ, ಇಂಟರ್ ನೆಟ್ ಗೂ ಭಾರಿ ಪೆಟ್ಟು, ಕಾರಣ ಏನು ಗೊತ್ತಾ?
ಕೊರೋನಾ ವಿರುದ್ಧದ ಸಮರದಲ್ಲಿ ಗೆಲುವು ದಾಖಲಿಸಿದ ಕಲಿಗಳು!
ಎಲ್ಪಿಜಿಗೆ ಹೆಚ್ಚಿದ ಬೇಡಿಕೆ: 15 ದಿನಗಳ ನಂತರವೇ ಬುಕ್ಕಿಂಗ್ ಸ್ವೀಕಾರ- ಸಿಂಗ್
ಕೋವಿಡ್-19: ಸಚಿವರ ಸಮಿತಿಯಿಂದ ದೇಶದಲ್ಲಿನ ಪರಿಸ್ಥಿತಿ ಪರಾಮರ್ಶೆ, ವಲಸೆ ಕಾರ್ಮಿಕರ ಬಗ್ಗೆ ಚರ್ಚೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


