ಭಾರತದಲ್ಲಿ ಕೋವಿಡ್-19 ಗೆ ಕಾರಣವಾಗಿರುವ ವೈರಸ್ ನ ಮೊದಲ ಚಿತ್ರ ಹೀಗಿದೆ
ಕೋವಿಡ್-19 ರೋಗವನ್ನು ಸೃಷ್ಟಿಸುತ್ತಿರುವ ವೈರಸ್ ನ ಮೊದಲ ಚಿತ್ರವನ್ನು ಭಾರತೀಯ ವಿಜ್ಞಾನಿಗಳು ಪ್ರಕಟಿಸಿದ್ದಾರೆ.

ಪುಣೆ: ಕೋವಿಡ್-19 ರೋಗವನ್ನು ಸೃಷ್ಟಿಸುತ್ತಿರುವ ವೈರಸ್ ನ ಮೊದಲ ಚಿತ್ರವನ್ನು ಭಾರತೀಯ ವಿಜ್ಞಾನಿಗಳು ಪ್ರಕಟಿಸಿದ್ದಾರೆ.
ಪುಣೆಯ ವಿಜ್ಞಾನಿಗಳು ಟ್ರಾನ್ಸ್ಮಿಷನ್ ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ನ ಸಹಾಯದಿಂದ ಸೆರೆ ಹಿಡಿದಿರುವ ಈ ವಿಡಿಯೋ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ ನಲ್ಲಿ ಪ್ರಕಟವಾಗಿದೆ.
ಜ.30, 2020 ರಂದು ದೇಶದಲ್ಲಿ ವರದಿಯಾಗಿದ್ದ, ದೃಢಪಟ್ಟಿದ್ದ ಮೊದಲ ಕೊರೋನಾ ವೈರಸ್ ಪೀಡಿತರ ಗಂಟಲು ದ್ರವ (ಸ್ವ್ಯಾಬ್)ದಿಂದ ಈ ವೈರಾಣು ಚಿತ್ರವನ್ನು ಸೆರೆಹಿಡಿಯಲಾಗಿದೆ.
ಭಾರತಕ್ಕೆ ಆಗಮಿಸಿದ ಕೇರಳ ಮೂಲದ, ವುಹಾನ್ ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಮಹಿಳೆಗೆ ಕೊರೋನಾ ಸೋಂಕು ತಗುಲಿತ್ತು.
ಕೋವಿಡ್-19 ರೋಗ ಸೃಷ್ಟಿಸುವ ವೈರಾಣು ಸಾರ್ಸ್-ಸಿಒವಿ-2 ವೈರಾಣುಗಳು ಮಧ್ಯಪ್ರಾಚ್ಯ ಉಸಿರಾಟದ ಸಿಂಡ್ರೋಮ್ (ಮರ್ಸ್-ಕೋವಿ) ಮತ್ತು ತೀವ್ರ ತೀವ್ರ ಉಸಿರಾಟದ ಸಿಂಡ್ರೋಮ್ (ಎಸ್‌ಎಆರ್ಎಸ್-ಕೋವಿ) ವೈರಾಣುಗಳನ್ನು ಹೋಲುತ್ತಿದೆ.
ಈ ವೈರಾಣುಗಳು ಪ್ರೊಟಿನ್ ರಿಸೆಪ್ಟರ್ ಗಳನ್ನು, ಶುಗರ್ ರಿಸೆಪ್ಟಾರ್ ಗಳೂ ಸೇರಿ ವಿವಿಧ ರಿಸೆಪ್ಟಾರ್ ಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿವೆ ಈ ಚಿತ್ರದಿಂದ ವೈರಾಣುವಿನ ಬಗ್ಗೆ ಹೆಚ್ಚಿನ ಸಂಶೋಧನೆ ಸಾಧ್ಯ ಎಂದು ವಿಜ್ಞಾನಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


