ಕೊರೋನಾ ವಿರುದ್ಧ ಹೋರಾಡುವವರಿಗೆ ಭಗವಂತ ಸುರಕ್ಷತೆ ಕೊಡಲಿ: ಕನ್ನಡದಲ್ಲಿ ಪ್ರಧಾನಿ ಯುಗಾದಿ ಶುಭ ಹಾರೈಕೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೊಸ ವರ್ಷ ಯುಗಾದಿ ಪ್ರಯುಕ್ತ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.

ನವದೆಹಲಿ:ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೊಸ ವರ್ಷ ಯುಗಾದಿ ಪ್ರಯುಕ್ತ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
ಕನ್ನಡ ಭಾಷೆಯಲ್ಲಿ ಕರ್ನಾಟಕ ಜನತೆಗೆ ಶುಭಾಶಯ ತಿಳಿಸಿರುವ ಅವರು, ಯುಗಾದಿ ಹೊಸ ವರ್ಷ ಬಂದಿದೆ! ಈ ವರ್ಷ ಆಕಾಂಕ್ಷೆಗಳನ್ನು ಈಡೇರಿಸಲಿ, ವಿಪತ್ತುಗಳಿಂದ ಹೊರಬರಲು ಹೊಸ ಚೈತನ್ಯ ತರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಪ್ರತಿಯೊಬ್ಬರಿಗೂ ಸಂತಸ ಮತ್ತು ಅದಕ್ಕಿಂತ ಮಿಗಿಲಾಗಿ ಉತ್ತಮ ಆರೋಗ್ಯದ ಆಶಿರ್ವಾದವಿರಲಿ ಎಂದಿದ್ದಾರೆ.
ದೇಶ ಕೊವಿಡ್-19 ಎಂಬ ಮಾರಕ ರೋಗವನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ನಾವು ಯುಗಾದಿ ಆಚರಿಸುತ್ತಿದ್ದೇವೆ. ಎಲ್ಲಾ ಹಬ್ಬಗಳ ಸಮಯದಂತೆ ಈ ವರ್ಷ ಪರಿಸ್ಥಿತಿ ಅನುಕೂಲವಾಗಿಲ್ಲ, ಆದರೂ ಪರಿಸ್ಥಿತಿಯನ್ನು ಎದುರಿಸಿ ಗೆಲ್ಲುವ ಶಕ್ತಿಯನ್ನು ನಮಗೆ ನೀಡಲಿದೆ. ಕೊರೋನಾ ವೈರಸ್ ವಿರುದ್ಧ ಧೈರ್ಯವಾಗಿ ಹೋರಾಡೋಣ ಎಂದಿದ್ದಾರೆ.
ಕೊರೋನಾ ಸೋಂಕಿನ ನಿವಾರಣೆಯಲ್ಲಿ ನಿರತರಾಗಿರುವವರಿಗೆ ಸುರಕ್ಷತೆ, ಆರೋಗ್ಯವನ್ನು ಭಗವಂತ ನೀಡಲಿ ಎಂದು ಪ್ರಧಾನಿ ಕೇಳಿಕೊಂಡಿದ್ದಾರೆ.<
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


