ಕೊರೋನಾ ಭೀತಿ: ಹಣಕಾಸು ವಿಧೇಯಕ ಅಂಗೀಕಾರದ ಬಳಿಕ ಸಂಸತ್ ಅಧಿವೇಶನ ಅನಿರ್ಧಿಷ್ಟಾವಧಿ ಮುಂದೂಡಿಕೆ
ಹಣಕಾಸು ಮಸೂದೆ ಅಂಗೀಕಾರವಾದ ನಂತರ ಸಂಸತ್ತಿನ ಉಭಯ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗುವುದು ಎಂದು ಮೂಲಗಳು ತಿಳಿಸಿವೆ. ಅಧಿವೇಶನವನ್ನು ಈ ಹಿಂದೆ ಏಪ್ರಿಲ್ 3 ರಂದು ಮುಕ್ತಾಯಗೊಳಿಸಲು ನಿರ್ಧರಿಸಲಾಗಿತ್ತು.

ನವದೆಹಲಿ: ಹಣಕಾಸು ಮಸೂದೆ ಅಂಗೀಕಾರವಾದ ನಂತರ ಸಂಸತ್ತಿನ ಉಭಯ ಸದನಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಅಧಿವೇಶನವನ್ನು ಈ ಹಿಂದೆ ಏಪ್ರಿಲ್ 3 ರಂದು ಮುಕ್ತಾಯಗೊಳಿಸಲು ನಿರ್ಧರಿಸಲಾಗಿತ್ತು.
ಕೋವಿಡ್-19 ಭಯದ ಕಾರಣದಿಂದ ಅಧಿವೇಶನವು ನಿಗದಿತ ಸಮಯಕ್ಕಿಂತ ಸುಮಾರು 12 ದಿನಗಳ ಮುಂಚಿತವಾಗಿ ಮುಕ್ತಾಯವಾಗಿದೆ.
ಟಿಎಂಸಿ ಸೇರಿದಂತೆ ಹಲವು ರಾಜಕೀಯ ಪಕ್ಷದ ನಾಯಕರು ಸೋಮವಾರ ಅಧಿವೇಶನಕ್ಕೆ ಹಾಜರಾಗದಿರಲು ನಿರ್ಧರಿಸಿದ್ದು, ವಿವಿಧ ರಾಜ್ಯಗಳು ಘೋಷಿಸಿದ ಲಾಕ್‌ಡೌನ್ ಆಗಿರುವುದಲ್ಲದೆ ದೇಶಾದ್ಯಂತ ಕೊರೋನಾ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದೆ.
ಈ ನಡುವೆ ಕೊರೋನಾವೈರಸ್ ಹರಡುವಿಕೆಗೆ ಪ್ರತಿಯಾಗಿ ಕ್ಷೇತ್ರಗಳಿಗೆ ಸರ್ಕಾರವು ಯಾವಾಗ ಆರ್ಥಿಕ ಪ್ಯಾಕೇಜ್ ಘೋಷಿಸುತ್ತದೆ ಎಂದು ಕಾಂಗ್ರೆಸ್ ಸೇರಿದಂತೆ ಕೆಲವು ಪ್ರತಿಪಕ್ಷದ ಸದಸ್ಯರು ತಿಳಿಯಲು ಬಯಸಿದ್ದರಿಂದ ಸರ್ಕಾರ ಎರಡು ಮಸೂದೆಗಳನ್ನು ಪರಿಚಯಿಸಿತು ಹಾಗೆಯೇ ಇದೊಂದು ಅಸಾಧಾರಣ ಪರಿಸ್ಥಿತಿ ಎಂದು ಹೇಳಲಾಗಿದೆ.
ಬಜೆಟ್ ಅಧಿವೇಶನ ಎರಡು ಹಂತಗಳಲ್ಲಿ ನಡೆಇದ್ದು . ಮೊದಲ ಹಂತವು ಜನವರಿ 31 ರಂದು ಪ್ರಾರಂಭವಾಯಿತು ಮತ್ತು ಫೆಬ್ರವರಿ 11 ರಂದು ಕೊನೆಯಾಗಿತ್ತು.ಮಾರ್ಚ್ 2 ರಂದು ಪ್ರಾರಂಭವಾದ ಎರಡನೇ ಹಂತದ ಅಧಿವೇಶನ ಇಂದು ಮುಕ್ತಾಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


