ದೇಶ

ಜನತಾ ಕರ್ಫ್ಯೂ: ಇದು ಸಮರದ ಆರಂಭ ಮಾತ್ರ- ಪ್ರಧಾನಿ ಮೋದಿ

ಇಂದು ಜಾರಿಗೊಳಿಸಲಾಗಿದ್ದ 14 ತಾಸುಗಳ ಜನತಾ ಕರ್ಫ್ಯೂ ಕೊರೋನಾವೈರಸ್ ವಿರುದ್ಧದ ಸಮರದ ಆರಂಭ ಮಾತ್ರ, ಯಾವುದೇ ಸವಾಲ್ ಗಳನ್ನು ಒಗ್ಗಟ್ಟಾಗಿ ಸೋಲಿಸುವುದಾಗಿ ದೇಶವಾಸಿಗಳು ಸಾಕ್ಷಿಕರಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಜನತಾ ಕರ್ಫ್ಯೂ: ಇದು ಸಮರದ ಆರಂಭ ಮಾತ್ರ- ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
Published On :

ನವದೆಹಲಿ: ಇಂದು ಜಾರಿಗೊಳಿಸಲಾಗಿದ್ದ 14 ತಾಸುಗಳ ಜನತಾ ಕರ್ಫ್ಯೂ ಕೊರೋನಾವೈರಸ್ ವಿರುದ್ಧದ ಸಮರದ ಆರಂಭ ಮಾತ್ರ,  ಯಾವುದೇ ಸವಾಲ್ ಗಳನ್ನು ಒಗ್ಗಟ್ಟಾಗಿ ಸೋಲಿಸುವುದಾಗಿ ದೇಶವಾಸಿಗಳು ಸಾಕ್ಷಿಕರಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಂದಿನ ಜನತಾ ಕರ್ಫ್ಯೂ ರಾತ್ರಿ 9 ಗಂಟೆಗೆ ಮುಕ್ತಾಯವಾಗಲಿದೆ. ಆದರೆ, ಹಾಗೆಂದ ಮಾತ್ರ ಸಂಭ್ರಮಾಚರಣೆ ಪಡಬೇಕಿಲ್ಲ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಜನತಾ ಕರ್ಫ್ಯೂವನ್ನು  ಯಶಸ್ಸು ಎಂದು ಪರಿಗಣಿಸಬಾರದು, ಇದು ಧೀರ್ಘ ಕಾಲದ ಸಮರದ ಆರಂಭವಾಗಿದೆ ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ಕೊರೋನಾವೈರಸ್  ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಅದರ ನಿಯಂತ್ರಣ ಕುರಿತು ಜನರಲ್ಲಿ ಅರಿವು ಹಾಗೂ ದೇಶವನ್ನು ಕೊರೋನಾ ವೈರಸ್ ಮುಕ್ತಗೊಳಿಸಲು ಸೇವೆ ಸಲ್ಲಿಸುತ್ತಿರುವವರಿಗೆ ಕೃತಜ್ಞತೆ ಸಲ್ಲಿಸಲು ಜನತಾ ಕರ್ಫ್ಯೂವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.