ದೇಶ

ಜಗತ್ತಿನ ಎಲ್ಲ ಜನರ ಆರೋಗ್ಯಕ್ಕಾಗಿ ತಿರುಮಲದಲ್ಲಿ 26 ರಿಂದ ಮೂರು ದಿನಗಳ ಧನ್ವಂತರಿ ಮಹಾಯಾಗ

ಜಗತ್ತಿನ ಎಲ್ಲ ಜನರ ಆರೋಗ್ಯರಕ್ಷಣೆಗಾಗಿ ಈ ತಿಂಗಳ 26 ರಿಂದ 28ರವರೆಗೆ ಧನ್ವಂತರಿ ಮಹಾಯಾಗ ನಡೆಸಲಾಗುವುದು ಎಂದು ತಿರುಮಲ ತಿರುಪತಿ ದೇವಸ್ಥಾನ ಶುಕ್ರವಾರ ಪ್ರಕಟಿಸಿದೆ.

ಜಗತ್ತಿನ ಎಲ್ಲ ಜನರ ಆರೋಗ್ಯಕ್ಕಾಗಿ ತಿರುಮಲದಲ್ಲಿ 26 ರಿಂದ ಮೂರು ದಿನಗಳ ಧನ್ವಂತರಿ ಮಹಾಯಾಗ
ತಿರುಪತಿ ವೆಂಕಟೇಶ್ವರ
Published On :

ತಿರುಮಲ: ಜಗತ್ತಿನ ಎಲ್ಲ ಜನರ ಆರೋಗ್ಯರಕ್ಷಣೆಗಾಗಿ ಈ ತಿಂಗಳ 26 ರಿಂದ 28ರವರೆಗೆ ಧನ್ವಂತರಿ ಮಹಾಯಾಗ ನಡೆಸಲಾಗುವುದು ಎಂದು ತಿರುಮಲ ತಿರುಪತಿ ದೇವಸ್ಥಾನ ಶುಕ್ರವಾರ ಪ್ರಕಟಿಸಿದೆ. 

ತಿರುಮಲದಲ್ಲಿನ ಧರ್ಮಗಿರಿ ವೇದ ಪಾಠ ಶಾಲೆಯಲ್ಲಿ ಶ್ರೀನಿವಾಸ ಶಾಂತ್ಯೋತ್ಸವ ಸಹಿತ ಧನ್ವಂತರಿ ಯಾಗ ನಡೆಸಲಾಗುವುದು ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ. 

ಚೀನಾದಲ್ಲಿ ಹುಟ್ಟಿದ ಕೊರೋನಾ ವೈರಸ್‌ನಿಂದ ಇಡೀ ಜಗತ್ತು ಭಯ ಭೀತಗೊಂಡಿದೆ. ಎಲ್ಲಾ ಕಾಯಿಲೆಗಳನ್ನು ಗುಣಪಡಿಸುವ ಅತ್ಯಂತ ಶಕ್ತಿಶಾಲಿಯಾದ ಧನ್ವಂತರಿ ಶ್ರೀ ಮಹಾ ವಿಷ್ಣುವಿನ ಒಂದು ರೂಪವಾಗಿದ್ದಾನೆ. ಈ ಯಾಗ ನಡೆಸುವ ಮೂಲಕ ಮಾನವನಿಗೆ ಒದಗಿರುವ ಸಂಕಷ್ಟ ತರುವ ವ್ಯಾಧಿಗಳು ಪರಿಹಾರಗೊಳ್ಳಲಿವೆ ಎಂದು ನಂಬಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.