ಕನ್ನಿಕಾ ಕಪೂರ್ ಪಾರ್ಟಿಯಲ್ಲಿ ಪಾಲ್ಗೊಂಡ ವಸುಂಧರ ರಾಜೇ ಮತ್ತು ಪುತ್ರ ಸಂಸದ ದುಶ್ಯಂತ್ ಸಿಂಗ್ ಈಗ ಸ್ವಯಂ ನಿರ್ಬಂಧದಲ್ಲಿ!
ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿ ಸಂಸದ ದುಶ್ಯಂತ್ ಸಿಂಗ್ ಮತ್ತು ಅವರ ತಾಯಿ,ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೆ ಸ್ವಯಂ ನಿರ್ಬಂಧ ವಿಧಿಸಿಕೊಂಡಿದ್ದಾರೆ. ಹಾಗೆಯೇ ಈ ಸುದ್ದಿ ತಿಳಿಯುತ್ತಿದ್ದಂತೆ ಸಂಸತ್ ಅಧಿವೇಶನ ಕೂಡ ಮೊಟಕಾಗುವ ಸಾಧ್ಯತೆ ಇದೆ.

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿ ಸಂಸದ ದುಶ್ಯಂತ್ ಸಿಂಗ್ ಮತ್ತು ಅವರ ತಾಯಿ,ರಾಜಸ್ಥಾನ ಮಾಜಿ ಸಿಎಂ ವಸುಂಧರಾ ರಾಜೆ ಸ್ವಯಂ ನಿರ್ಬಂಧ ವಿಧಿಸಿಕೊಂಡಿದ್ದಾರೆ. ಹಾಗೆಯೇ ಈ ಸುದ್ದಿ ತಿಳಿಯುತ್ತಿದ್ದಂತೆ ಸಂಸತ್ ಅಧಿವೇಶನ ಕೂಡ ಮೊಟಕಾಗುವ ಸಾಧ್ಯತೆ ಇದೆ.
"ಲಖನೌದಲ್ಲಿದ್ದಾಗ, ನಾನು ನನ್ನ ಮಗ ದುಶ್ಯಂತ್ ಮತ್ತು ಅಳಿಯನೊಂದಿಗೆ ಭೋಜನಕೂಟದಲ್ಲಿ ಭಾಗವಹಿಸಿದ್ದೆ. ದುರದೃಷ್ಟವಶಾತ್ ಕೋವಿಡ್ 19 ಸೋಂಕಿತರಾದ ಗಾಯಕಿ ಕನ್ನಿಕಾ ಕಪೂರ್ ಸಹ ಬಾಗವಹಿಸಿದ್ದರು. . ಸಾಕಷ್ಟು ಎಚ್ಚರಿಕೆಯಿಂದ, ನನ್ನ ಮಗ ಮತ್ತು ನಾನು ತಕ್ಷಣ ಸ್ವಯಂ ನಿರ್ಬಂಧ ಹಾಕಿಕೊಂಡಿದ್ದೇವೆ. ಮತ್ತು ನಾವು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ. "
ಲಖನೌನಲ್ಲಿ ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್ ಖಾಸಗಿ ಹೋಟೆಲ್ ನಲ್ಲಿ ಪಾರ್ಟಿ ಆಯೋಜಿಸಿದ್ದರು. ಅವರ ಪಾರ್ಟಿಯಲ್ಲಿ ವಸುಂಧರಾ ರಾಜೆ ಹಾಗೂ ಅವರ ಪುತ್ರ ಸೇರಿ ಸುಮಾರು ಐನೂರು ಮಂದಿ ಗಣ್ಯರು ಭಾಗವಹಿಸಿದ್ದರು.
ಝಲ್ವಾರ್ ಸಂಸದರಾದ ದುಶ್ಯಂತ್ ಸಿಂಗ್ ಅವರು ಮರುದಿನ ಸಂಸತ್ತಿಗೆ ಹಾಜರಾಗಿದ್ದರು ಮತ್ತು ಗುರುವಾರ ಕೇಂದ್ರ ಸಭಾಂಗಣದಲ್ಲಿ ಸುರೇಂದ್ರ ನಗರ್, ನಿಶಿಕಾಂತ್ ಮತ್ತು ಮನೋಜ್ ತಿವಾರಿ ಅವರೊಂದಿಗೆ ಕುಳಿತಿದ್ದರು ಎಂದು ವರದಿಯಾಗಿದೆ.
ಗಾಯಕಿ ಕನ್ನಿಕಾ ಕಪೂರ್ ಕೋವಿಡ್ -19 ಸೋಂಕಿನಿಂದಾಗಿ ಲಖನೌ ಆಸ್ಪತ್ರೆಯಲ್ಲಿ ಚಿಕಿತ್ಸೆ ಹೊಂದುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


