ಜ್ಯೋತಿರಾದಿತ್ಯ ಸಿಂಧಿಯಾ ನಮ್ಮ ನಾಯಕರು, ಅವರ ಜೊತೆಯೇ ಇರುತ್ತೇವೆ: ಬಂಡಾಯ ಕಾಂಗ್ರೆಸ್ ಶಾಸಕರು
ಜ್ಯೋತಿರಾದಿತ್ಯ ಸಿಂಧಿಯಾ ಜೊತೆಗೆ ಮಧ್ಯ ಪ್ರದೇಶದಲ್ಲಿ ರಾಜೀನಾಮೆ ನೀಡಿದ್ದ 22 ಕಾಂಗ್ರೆಸ್ ಶಾಸಕರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸಿಂಧಿಯಾ ಅವರೇ ನಮ್ಮ ನಾಯಕರಾಗಿದ್ದು ಅವರ ಜೊತೆಯೇ ಯಾವಾಗಲೂ ಇರುತ್ತೇವೆ ಎಂದಿದ್ದಾರೆ.

ಬೆಂಗಳೂರು: ಜ್ಯೋತಿರಾದಿತ್ಯ ಸಿಂಧಿಯಾ ಜೊತೆಗೆ ಮಧ್ಯ ಪ್ರದೇಶ ಸರ್ಕಾರದಲ್ಲಿ ರಾಜೀನಾಮೆ ನೀಡಿದ್ದ 22 ಕಾಂಗ್ರೆಸ್ ಶಾಸಕರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸಿಂಧಿಯಾ ಅವರೇ ನಮ್ಮ ನಾಯಕರಾಗಿದ್ದು ಅವರ ಜೊತೆಯೇ ಯಾವಾಗಲೂ ಇರುತ್ತೇವೆ ಎಂದಿದ್ದಾರೆ.
ಇಂದು ಬೆಂಗಳೂರಿನಲ್ಲಿ ತಾವು ಉಳಿದುಕೊಂಡಿರುವ ರೆಸಾರ್ಟ್ ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಂಡಾಯ ಕಾಂಗ್ರೆಸ್ ಶಾಸಕ ಇಮರ್ತಿ ದೇವಿ, ಜ್ಯೋತಿರಾದಿತ್ಯ ಸಿಂಧಿಯಾ ನಮ್ಮ ನಾಯಕರು. ಅವರಿಂದ ನಾವು ಸಾಕಷ್ಟು ಕಲಿತಿದ್ದೇವೆ. ಬಾವಿಗೆ ಬೀಳು ಎಂದು ಸಿಂಧಿಯಾ ಅವರು ಹೇಳಿದರೂ ಅವರ ಜೊತೆಯೇ ನಾವು ಇರುತ್ತೇವೆ ಎಂದರು.
ಮತ್ತೊಬ್ಬ ಬಂಡಾಯ ಶಾಸಕ ಗೋವಿಂದ್ ಸಿಂಗ್ ರಜಪೂತ್, ಮುಖ್ಯಮಂತ್ರಿ ಕಮಲ್ ನಾಥ್ ಅವರು 15 ನಿಮಿಷ ಕೂಡ ನಮ್ಮ ಮಾತು ಕೇಳಿಲ್ಲ. ಹಾಗಾದರೆ ನಮ್ಮ ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ ನಾವು ಯಾರಲ್ಲಿ ಹೇಳಿಕೊಳ್ಳಬೇಕು ಎಂದರು.
ಸಚಿವರಾದ ನಂತರ ನಮಗೆ ಶಾಂತಿಯಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ನಾವು ಸುರಕ್ಷಿತವಾಗಿಲ್ಲ. ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಗುರಿಯಾಗಿಟ್ಟುಕೊಂಡರೆ ನಮ್ಮನ್ನು ಕೂಡ ಗುರಿಯಾಗಿಡುತ್ತಾರೆ. ನಮಗೆ ಭದ್ರತೆ ಬೇಕು. ಜೈಪುರದಲ್ಲಿರುವ ಶಾಸಕರು ಕೂಡ ಅತೃಪ್ತರಾಗಿದ್ದಾರೆ ಎಂದರು.
ಮಧ್ಯ ಪ್ರದೇಶಕ್ಕೆ ಹೋದ ನಂತರ ಬಿಜೆಪಿ ಸೇರುವ ಬಗ್ಗೆ ನಾವು ಚರ್ಚೆ ಮಾಡುತ್ತೇವೆ. 6 ಶಾಸಕರ ರಾಜೀನಾಮೆಯನ್ನು ಸ್ವೀಕರಿಸಿದ ನಂತರ ನಮ್ಮ ರಾಜೀನಾಮೆಯನ್ನು ಏಕೆ ಸ್ವೀಕರಿಸಿಲ್ಲ ಎಂದು ಕೋರ್ಟ್ ನಲ್ಲಿ ಕೂಡ ಪ್ರಶ್ನೆ ಮಾಡಿದ್ದೇವೆ ಎಂದು ಶಾಸಕ ತುಲ್ಸಿ ಸಿಲಾವತ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


