ಬೆಂಗಳೂರಿನಿಂದ ಪರಾರಿಯಾಗಿದ್ದ ಕೊರೋನಾ ಸೋಂಕಿತ ಮಹಿಳೆ ತಂದೆಯ ವಿರುದ್ಧ ಎಫ್ಐಆರ್ ದಾಖಲು
ಮಾಹಿತಿ ಮರೆಮಾಚಿ ಆರೋಗ್ಯ ಅಧಿಕಾರಿಗಳಿಗೆ ಪ್ರತಿರೋಧ ತೋರಿದ ಕೊರೋನಾ ವೈರಸ್ ಪಾಸಿಟಿವ್ ಮಹಿಳೆಯ ತಂದೆಯ ವಿರುದ್ಧ ದೇಶದಲ್ಲಿಯೇ ಮೊದಲ ಬಾರಿಗೆ ಆಗ್ರಾದಲ್ಲಿ ಎಫ್ ಐಆರ್ ದಾಖಲಿಸಲಾಗಿದೆ

ಆಗ್ರಾ: ಮಾಹಿತಿ ಮರೆಮಾಚಿ ಆರೋಗ್ಯ ಅಧಿಕಾರಿಗಳಿಗೆ ಪ್ರತಿರೋಧ ತೋರಿದ ಕೊರೋನಾ ವೈರಸ್ ಪಾಸಿಟಿವ್ ಮಹಿಳೆಯ ತಂದೆಯ ವಿರುದ್ಧ ದೇಶದಲ್ಲಿಯೇ ಮೊದಲ ಬಾರಿಗೆ ಆಗ್ರಾದಲ್ಲಿ ಎಫ್ ಐಆರ್ ದಾಖಲಿಸಲಾಗಿದೆ
ಕೊರೋನಾ ವೈರಸ್ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ 25 ವರ್ಷದ ಬೆಂಗಳೂರಿನ ಮಹಿಳೆ ಹಾಗೂ ಆಕೆಯ ತಂದೆಯ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಮುಖ್ಯ ವೈದ್ಯಾಧಿಕಾರಿಗಳಿಗೆ ಆಗ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶಿಸಿದ್ದಾರೆ.
ಆಕೆಯ ಪತಿಗೆ ಕೊರೋನಾ ವೈರಸ್ ಪಾಸಿಟಿವ್ ಕಂಡುಬಂದಿತ್ತು.
ಆದಾಗ್ಯೂ, ಮಹಿಳೆ ಕುಟುಂಬ ಸದಸ್ಯರು ಆಕೆ ತಪಾಸಣೆಗೊಳಗಾಗಿ ಪ್ರತ್ಯೇಕ ಕೊಠಡಿಯಲ್ಲಿ ಇರಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಬೆಂಗಳೂರಿನಿಂದ ಪರಾರಿಯಾಗಿದ್ದ ಆ ಮಹಿಳೆಯಲ್ಲಿ ಕೋವಿಡ್- 19 ಪಾಸಿಟಿವ್ ಇರುವುದು ಶುಕ್ರವಾರ ದೃಢಪಟ್ಟಿತ್ತು.
ಮಾರ್ಚ್ 6 ರಂದು ಆ ಮಹಿಳೆ ತನ್ನ ಪತ್ನಿಯೊಂದಿಗೆ ಯುರೋಪ್ ಗೆ ಹನಿಮೂನ್ ಗೆ ತೆರಳಿದ್ದರು. ಮಾರ್ಚ್ 9 ರಂದು ದೆಹಲಿಗೆ ಬಂದಿದ್ದು, ನಂತರ ತನ್ನ ಪೋಷಕರನ್ನು ಭೇಟಿಯಾಗಲು ಆಗ್ರಾಕ್ಕೆ ತೆರಳಿದ್ದಳು. ಮಾರ್ಚ್ 7 ರಂದು ಆಕೆಯ ಪತಿ ತಪಾಸಣೆಗೊಳಗಾಗಿದ್ದು, ಪಾಸಿಟಿವ್ ಇರುವುದು ದೃಢಪಟ್ಟಿತ್ತು.
ಇದರಿಂದ ಭೀತಿಗೊಂಡ ಆ ಮಹಿಳೆ ತಪಾಸಣೆ ಹಾಗೂ ಪ್ರತ್ಯೇಕ ಕೊಠಡಿಯಲ್ಲಿ ಇರುವುದರಿಂದ ತಪ್ಪಿಸಿಕೊಳ್ಳಲು ಬೆಂಗಳೂರಿನಿಂದ ಆಗ್ರಾಕ್ಕೆ ಪರಾರಿಯಾಗಿದ್ದಳು ಎಂಬುದಾಗಿ ಆಗ್ರಾದ ಅಧಿಕಾರಿಗಳು ಹೇಳಿದ್ದಾರೆ.
ಮಾರ್ಚ್ 13 ರಂದು ಸಂಬಂಧಿತ ಅಧಿಕಾರಿಗಳು ಆಗ್ರಾದಲ್ಲಿನ ಆಕೆಯ ಮನೆಗೆ ತೆರಳಿದ್ದಾಗ ದೆಹಲಿ ಮೂಲಕ ಬೆಂಗಳೂರಿಗೆ ಆ ಮಹಿಳೆ ತೆರಳಿರುವುದಾಗಿ ಸುಳ್ಳು ಹೇಳಿದ್ದರು. ನಂತರ ಆಕೆಯ ಪೋನ್ ಪರಿಶೀಲಿಸಿದಾಗ ಆಕೆ ಆಗ್ರಾದಲ್ಲಿನ ತನ್ನ ಮನೆಯಲ್ಲಿಯೇ ಇರುವುದು ಕಂಡುಬಂದಿತ್ತು ಎಂದು ಆಗ್ರಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಿಂಗ್ ಹೇಳಿದ್ದಾರೆ.
ನಂತರ ಆ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ರಕ್ತದ ಮಾದರಿಯನ್ನು ಎರಡನೇ ಸುತ್ತಿಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಐಪಿಸಿ ಸೆಕ್ಷನ್ 269 ( ಜೀವಕ್ಕೆ ಅಪಾಯಕಾರಿಯಾದ ರೋಗದ ಸೋಂಕು ಹರಡುವ ಸಾಧ್ಯತೆ ಇರುವಾಗ ನಿರ್ಲಕ್ಷ್ಯ ) ಹಾಗೂ ಸೆಕ್ಷನ್ 270ರ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


