ಬಿಜೆಪಿಗೆ ಸೇರಿದ ಸಿಂಧಿಯಾಗೆ ಎದುರಾಯ್ತು ಹೊಸ ಸಂಕಷ್ಟ!
ಬಿಜೆಪಿಗೆ ಸೇರ್ಪಡೆಯಾದ ಬೆನ್ನಲ್ಲೇ ಜ್ಯೋತಿರಾದಿತ್ಯ ಸಿಂಧಿಯಾಗೆ ಸಂಕಷ್ಟ ಎದುರಾಗಿದೆ.

ಭೋಪಾಲ್: ಬಿಜೆಪಿಗೆ ಸೇರ್ಪಡೆಯಾದ ಬೆನ್ನಲ್ಲೇ ಜ್ಯೋತಿರಾದಿತ್ಯ ಸಿಂಧಿಯಾಗೆ ಸಂಕಷ್ಟ ಎದುರಾಗಿದೆ. ಮಧ್ಯಪ್ರದೇಶದ ಆರ್ಥಿಕ ಅಪರಾಧಗಳ ವಿಭಾಗ(ಎಇಡಬ್ಲ್ಯು) ಸಿಂಧಿಯಾ ವಿರುದ್ಧ ದಾಖಲಾಗಿದ್ದ ಹಳೆಯ ಪ್ರಕರಣವೊಂದಕ್ಕೆ ಮರು ಜೀವ ನೀಡಲಾಗಿದೆ.
ಭೂಮಿ ಮಾರಾಟಕ್ಕೆ ಸಂಬಂಧಪಟ್ಟ ಪ್ರಕರಣ ಇದಾಗಿದ್ದು, ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಅವರ ಕುಟುಂಬದವರ ವಿರುದ್ಧ ಫೋರ್ಜರಿ, ನಕಲಿ ದಾಖಲೆಗಳನ್ನು ನೀಡಿದ ಆರೋಪ ಕೇಳಿಬಂದಿತ್ತು. ಈಗ ಈ ಪ್ರಕರಣಕ್ಕೆ ಮರುಜೀವ ಬಂದಿದೆ.
ಸುರೇಂದ್ರ ಶ್ರೀವಾಸ್ತವ ಅವರು ನೀಡಿದ್ದ ದೂರಿನಲ್ಲಿರುವ ಮಾಹಿತಿಗಳನ್ನು ಮರುಪರಿಶೀಲನೆ ಮಾಡಲು ಆದೇಶ ನೀಡಲಾಗಿದೆ ಎಂದು ಇಒಡಬ್ಲ್ಯು ಹೇಳಿದ್ದಾರೆ.
ಸುರೇಂದ್ರ ಶ್ರೀವಾಸ್ತವ ಅವರು ಮಾ.12 ರಂದು ಸಿಂಧಿಯಾ ವಿರುದ್ಧ ಹೊಸ ದೂರು ನೀಡಿದ್ದು, ಮಹಲ್ಗೌನ್ ನ ಬಳಿ 6,000 ಚದರ ಅಡಿಗಿಂತಲೂ ಸ್ವಲ್ಪ ಕಡಿಮೆ ಇರುವ ಭೂಮಿಯನ್ನು ತಮಗೆ, 2009 ರಲ್ಲಿದ್ದ ಮೂಲ ಒಪ್ಪಂದಕ್ಕಿಂತ ಭಿನ್ನವಾದ, ನಕಲಿ ದಾಖಲೆ ನೋಂದಾವಣೆ ಡಾಕ್ಯುಮೆಂಟ್ ಮಾಡಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2014 ರ ಮಾ.26 ರಂದು ಕೇಸ್ ದಾಖಲಿಸಲಾಗಿತ್ತು. ಆದರೆ 2018 ರಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಲಾಗಿತ್ತು. ಈಗ ಮತ್ತೊಮ್ಮೆ ಪ್ರಕರಣ ದಾಖಲಾಗಿರುವುದರಿಂದ ವಾಸ್ತವಾಂಶಗಳನ್ನು ತಿಳಿಯಲು ಮತ್ತೊಮ್ಮೆ ಪರಿಶೀಲನೆ ನಡೆಸಲು ಆದೇಶಿಸಲಾಗಿದೆ ಎಂದು ಇಒಡಬ್ಲ್ಯೂ ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


