2014ರಿಂದ 15,000 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತೀಯ ಪೌರತ್ವ ನೀಡಿದ ಮೋದಿ ಸರ್ಕಾರ
2014 ರಿಂದೀಚೆಗೆ 15,036 ಬಾಂಗ್ಲಾದೇಶದ ಪ್ರಜೆಗಳು ಸೇರಿದಂತೆ ಐದು ನೆರೆರಾಷ್ಟ್ರಗಳ ಸುಮಾರು 19,000 ಜನರಿಗೆ ಭಾರತ ಪೌರತ್ವ ನೀಡಲಾಗಿದೆ ಎಂದು ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.

ನವದೆಹಲಿ: 2014 ರಿಂದೀಚೆಗೆ 15,036 ಬಾಂಗ್ಲಾದೇಶದ ಪ್ರಜೆಗಳು ಸೇರಿದಂತೆ ಐದು ನೆರೆರಾಷ್ಟ್ರಗಳ ಸುಮಾರು 19,000 ಜನರಿಗೆ ಭಾರತ ಪೌರತ್ವ ನೀಡಲಾಗಿದೆ ಎಂದು ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.
ಬಾಂಗ್ಲಾದೇಶ, ಪಾಕಿಸ್ತಾನ, ಮಯನ್ಮಾರ್, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನಕ್ಕೆ ಸೇರಿದ ನಾಗರಿಕರು ಭಾರತೀಯ ಪೌರತ್ವ ಪಡೆದಿದ್ದಾರೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರೈ ಹೇಳಿದರು.
ಭಾರತೀಯ ಪೌರತ್ವ ಪಡೆದ 18,999 ಜನರಲ್ಲಿ ಒಟ್ಟು 15,036 ಜನರು ಬಾಂಗ್ಲಾದೇಶದವರು ಎಂದು ಲಿಖಿತ ಉತ್ತರದಲ್ಲಿ ಅವರು ತಿಳಿಸಿದರು.
ಭಾರತ-ಬಾಂಗ್ಲಾಭೂ ಗಡಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ 2015 ರಲ್ಲಿ 14,864 ಬಾಂಗ್ಲಾದೇಶೀಯರಿಗೆ ಪೌರತ್ವ ನೀಡಲಾಗಿದೆ. ಇದರೊಡನೆ ಪೌರತ್ವ ಕಾಯ್ದೆ 1955 ರ ಸೆಕ್ಷನ್ 7 ರ ಅಡಿಯಲ್ಲಿ ಅತಿ ಹೆಚ್ಚು ಸಂಖ್ಯೆಯ ಬಾಂಗ್ಲಾದೇಶೀ .ನಾಗರಿಕರಿಗೆ ಭಾರತೀಯ ಪೌರತ್ವ ದೊರೆತಂತಾಗಿದೆ.
2014 ರಿಂದ 2019 ರವರೆಗೆ ಒಟ್ಟು 2,935 ಪಾಕಿಸ್ತಾನಿ, 914 ಅಫಘಾನ್ ಮತ್ತು 113 ಶ್ರೀಲಂಕಾದ ನಾಗರಿಕರು ಮತ್ತು ಒಬ್ಬ ಮಯನ್ಮಾರ್ ಪ್ರಜೆಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂದು ರೈ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


