ಕೊರೊನಿಲ್ ಕೋವಿಡ್ ಗುಣಪಡಿಸಲಿದೆ ಎಂದು ನಾವೆಂದೂ ಹೇಳಿಲ್ಲ:ಯುಟರ್ನ್ ಹೊಡೆದ ಪತಂಜಲಿ ಸಂಸ್ಥೆ
ಹರಿದ್ವಾರ ಮೂಲದ ಪತಂಜಲಿ ಸಂಸ್ಥೆ ತಾನು ಕೊರೋನಾವೈರಸ್ ಸೋಂಕಿಗೆ ಔಷಧಿ ತಯಾರಿಸಿದ್ದಾಗಿ ಎಲ್ಲಿಯೂ ಹೇಳಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ. ಆಯುಷ್ ಸಚಿವಾಲಯ ನೀಡಿದ ನೋಟಿಸ್‌ಗೆ ಉತ್ತರವಾಗಿ ಪತಂಜಲಿ ಸಂಸ್ಥೆ ಈ ಹೇಳಿಕೆ ನೀಡಿದೆ.

ನವದೆಹಲಿ: ಹರಿದ್ವಾರ ಮೂಲದ ಪತಂಜಲಿ ಸಂಸ್ಥೆ ತಾನು ಕೊರೋನಾವೈರಸ್ ಸೋಂಕಿಗೆ ಔಷಧಿ ತಯಾರಿಸಿದ್ದಾಗಿ ಎಲ್ಲಿಯೂ ಹೇಳಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ. ಆಯುಷ್ ಸಚಿವಾಲಯ ನೀಡಿದ ನೋಟಿಸ್‌ಗೆ ಉತ್ತರವಾಗಿ ಪತಂಜಲಿ ಸಂಸ್ಥೆ ಈ ಹೇಳಿಕೆ ನೀಡಿದೆ.
"ಪತಂಜಲಿ ಕರೋನಾ ಔಷಧಿ ತಯಾರಿಸುವುದಾಗಿ ಎಂದಿಗೂ ಹೇಳಿಕೊಂಡಿಲ್ಲ. ಬದಲಿಗೆ, ಕರೋನಾ ರೋಗಿಗಳನ್ನು ಈ ಔಷಧಿಯಿಂದ ಗುಣಪಡಿಸಲಾಗಿದೆ.ಆಯುಷ್ ಸಚಿವಾಲಯ ನೀಡಿದ ಪರವಾನಗಿ ಅಡಿಯಲ್ಲಿ ಇದನ್ನು ತಯಾರಿಸಲಾಗಿದೆ" ಎಂದು ಪತಂಜಲಿ ಆಯುರ್ವೇದ ಸಿಇಒ ಆಚಾರ್ಯ ಬಾಲಕೃಷ್ಣ ಅವರು ನೋಟಿಸ್‌ಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ.
"ನಾವು ತುಳಸಿ ಗಿಲೋಯ್ ಅಶ್ವಗಂಧರ ಸಂಯೋಜನೆ ಹೊಂದಿದ ಸುಧಾರಿತ ಔಷಧಿ ತಯಾರಿಸಿದ್ದೇವೆ. ಮತ್ತು ಈ ಔಷಧಿ ಕೋವಿಡ್ ರೋಗಿಗಳ ಮೇಲೆ ಕ್ಲಿನಿಕಲ್ ಪ್ರಯೋಗ ಮಾಡಲಾಗಿ ಅವರು ಗುಣಹೊಂದಿದ್ದಾರೆ. ನಮ್ಮ ವಿರುದ್ಧ ಪಿತೂರಿ ನಡೆಸಲಾಗಿದೆ ಮತ್ತು ಆಯುಷ್ ಸಚಿವಾಲಯವು ಬಯಸಿದರೆ ನಾವು ಇನ್ನೊಮ್ಮೆ ಈ ಪ್ರಯೋಗ ಕೈಗೊಳ್ಳಲು ಸಿದ್ದವಿದ್ದೇವೆ."
ಇತ್ತೀಚೆಗೆ , ಪತಂಜಲಿ ಆಯುರ್ವೇದ, ನಿಮ್ಸ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ,ಕೊರೋನಾ ರೋಗಿಗಳನ್ನು ಗುಣಪಡಿಸುವುದಾಗಿ ಹೇಳಲಾಗಿದ್ದ ಕೊರೊನಿಲ್ ಮತ್ತು ಶ್ವಾಸರಿ ವಾಟಿ ಎಂಬ ಔಷಧವನ್ನು ಪತಂಜಲಿ ಸಂಸ್ಥೆ ಬಿಡುಗಡೆಮಾಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


