ರಾಜಕೀಯ ಪೈಪೋಟಿಯನ್ನು ಮರೆತು ಚೀನಾವನ್ನು ಎದುರಿಸುವ ಸಮಯ ಬಂದಿದೆ: ಶಿವಸೇನೆ
ರಾಜಕೀಯ ಪಕ್ಷಗಳು ತಮ್ಮ ತಮ್ಮ ಪಕ್ಷಬೇಧವನ್ನು ಮರೆತು ಚೀನಾವನ್ನು ಎದುರಿಸುವ ವಿಷಯದ ಬಗ್ಗೆ ಮಾತನಾಡುವ ಸಮಯ ಈಗ ಬಂದಿದೆ ಎಂದು ಶಿವಸೇನೆ ಹೇಳಿದೆ.

ಮುಂಬೈ: ರಾಜಕೀಯ ಪಕ್ಷಗಳು ತಮ್ಮ ತಮ್ಮ ಪಕ್ಷಬೇಧವನ್ನು ಮರೆತು ಚೀನಾವನ್ನು ಎದುರಿಸುವ ವಿಷಯದ ಬಗ್ಗೆ ಮಾತನಾಡುವ ಸಮಯ ಈಗ ಬಂದಿದೆ ಎಂದು ಶಿವಸೇನೆ ಹೇಳಿದೆ.
ಚೀನಾದಿಂದ ಕಾಂಗ್ರೆಸ್ ಹಣ ಪಡೆಯುತ್ತಿದೆ ಎಂದು ಆರೋಪಿಸಿದ ಬಿಜೆಪಿ ಬಗ್ಗೆ ತನ್ನ ಮುಖವಾಣಿಯಾದ ಸಾಮ್ನಾ ದಲ್ಲಿ ಬರೆದಿರುವ ಶಿವಸೇನೆ "ಚೀನಾ ಗಲ್ವಾನ್ ಕಣಿವೆಯಲ್ಲಿ ಹೊಸ ಹೊಸ ನಿರ್ಮಾಣ ಕಾರ್ಯ ಪ್ರಾರಂಭಿಸಿದೆ. ಚೀನಾದ ಸೈನಿಕರು ಅರುಣಾಚಲ ಮತ್ತು ಸಿಕ್ಕಿಂ ಮೂಲಕ ಬರುತ್ತಿದ್ದಾರೆ. ಆದ್ದರಿಂದ ರಾಜಕೀಯ ಪೈಪೋಟಿ ಮರೆತು ಒಂದುಗೂಡಿಸುವ ಸಮಯ ಇದಾಗಿದೆ. ರಾಜಕೀಯ ಪಕ್ಷಬೇಧ ಮರೆತು ನಾವೀಗ ಚೀನಾ ವಿರುದ್ಧ ಹೋರಾಡಬೇಕು, ಆ ಬಗ್ಗೆ ಮಾತನಾಡಬೇಕು" ಸಂಪಾದಕೀಯ ಬರಹದಲ್ಲಿ ಹೇಳಿದೆ.
ಚೀನಾದ ನೀತಿಯನ್ನು ವಿವರಿಸಿದ ಶಿವಸೇನೆ, "ಚೀನಾ ನಿರಂತರವಾಗಿ ಇಂತಹ ಕುತಂತ್ರ ನಡೆಸುತ್ತಿದ್ದು ಇದು ಭಾರತದ ತಲೆನೋವು ಹೆಚ್ಚುವಂತೆ ಮಾಡಿದೆ.ಏನನ್ನೋ ಹೇಳಿ ಇನ್ನೇನನ್ನೋ ಮಾಡುವುದು ಚೀನಾ ನೀತಿ. . ಚೀನಾವು ಯುದ್ಧವನ್ನು ಬಯಸುವುದಿಲ್ಲ ಆದರೆ ಯುದ್ಧವನ್ನು ಮಾಡುವಂತೆ ಭಾರತವನ್ನು ಪ್ರಚೋದಿಸುವುದು ಅವರ ನೀತಿ. ಅದಕ್ಕಾಗಿ ಗಡಿಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಿದೆ.
"ಚೀನಾ ತನ್ನ ಸೈನ್ಯ ಮತ್ತು ವಾಹನಗಳನ್ನು ಗಲ್ವಾನ್ ಕಣಿವೆಯಿಂದ ಹಿಂತೆಗೆದುಕೊಳ್ಳಲು ಸಜ್ಜಾಗಿದೆ. ಆದರೆ ಅದೇ ಸಮಯದಲ್ಲಿ, ಚೀನಾದ ಸೈನ್ಯವು ಲಡಾಖ್‌ನ ಡೆಪ್ಸಾಂಗ್ ಸೆಕ್ಟರ್‌ನಲ್ಲಿ ಹೊಸ ಡೇರೆಗಳನ್ನು ಸ್ಥಾಪಿಸಿದೆ. ಕ್ಯಾನನ್ ಮತ್ತು ಟ್ಯಾಂಕರ್ ಗಳನ್ನು ನಿಯೋಜಿಸಿದೆ. ಇದರರ್ಥ ಚೀನಾ ಹೊಸ ಜಾಗವನ್ನು ಒಳಗೆಳೆದುಕೊಳ್ಳಲು ಹವಣಿಸಿದೆ. ಅಲ್ಲದೆ ಅದು ನಮ್ಮ ಗಡಿಯಿಂದ ಹಿಂದೆ ಸರಿಯಲು ಸಿದ್ದವಿಲ್ಲ. ಚೀನಾ ಯುದ್ಧವನ್ನು ಬಯಸುವುದಿಲ್ಲ ಆದರೆ ಅದು ಭಾರತದ ಮೇಲೆ ಯುದ್ಧದ ಬೆದರಿಕೆಯನ್ನು ಒಡ್ಡುತ್ತಿದೆ" ಶಿವಸೇನೆ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


