ಇತಿಹಾಸದಲ್ಲಿಯೇ ಇದೇ ಮೊದಲು: ಭಕ್ತರಿಲ್ಲದೆಯೇ ವಿಶ್ವವಿಖ್ಯಾತ ಪೂರಿ ಜಗನ್ನಾಥ ಸ್ವಾಮಿ ರಥಯಾತ್ರೆಗೆ ಚಾಲನೆ!
ರಥಯಾತ್ರೆಗೆ ಕುರಿತು ಸುಪ್ರೀಂಕೋರ್ಟ್ ತನ್ನ ನಿಲುವು ಬದಲಿಸಿಕೊಂಡು ಷರತ್ತುಬದ್ಧ ಒಪ್ಪಿಗೆ ನೀಡುತ್ತಿದ್ದಂತೆಯೇ ವಿಶ್ವವಿಖ್ಯಾತ ಪೂರಿ ಜಗನ್ನಾಥ ರಥಯಾತ್ರೆಗೆ ಮಂಗಳವಾರ ಚಾಲನೆ ದೊರಕಿದೆ.

ನವದೆಹಲಿ: ರಥಯಾತ್ರೆಗೆ ಕುರಿತು ಸುಪ್ರೀಂಕೋರ್ಟ್ ತನ್ನ ನಿಲುವು ಬದಲಿಸಿಕೊಂಡು ಷರತ್ತುಬದ್ಧ ಒಪ್ಪಿಗೆ ನೀಡುತ್ತಿದ್ದಂತೆಯೇ ವಿಶ್ವವಿಖ್ಯಾತ ಪೂರಿ ಜಗನ್ನಾಥ ರಥಯಾತ್ರೆಗೆ ಮಂಗಳವಾರ ಚಾಲನೆ ದೊರಕಿದೆ.
ಈ ರಥಯಾತ್ರೆ ಒಂದು ವಾರಗಳ ಕಾಲ ನಡೆಯಲಿದ್ದು, ರಥಯಾತ್ರೆಗೆ ನಿನ್ನೆಯಷ್ಟೇ ಸುಪ್ರೀಂಕೋರ್ಟ್ ಷರತ್ತುಬದ್ಧ ಅನುಮತಿ ನೀಡಿತ್ತು.
ಇಂದು ಚಾಲನೆ ದೊರೆತಿರುವ ಈ ರಥಯಾತ್ರೆಯಲ್ಲಿ ಕೇವಲ ದೇವಸ್ಥಾನದ ಸಿಬ್ಬಂದಿ ಮತ್ತು ಪುರೋಹಿತರು ಮಾತ್ರ ಭಾಗವಿಸಿದ್ದು, ಪೂಜಾ ಕಾರ್ಯಕ್ರಮಗಳು ಆರಂಭವಾಗುವುದಕ್ಕೂ ಮುಂಚೆಯೇ ದೇವಸ್ಥಾನದ ಸಂಕೀರ್ಣವನ್ನು ಸ್ಯಾನಿಟೈಸ್ ಮಾಡಲಾಗಿದೆ.
ಇಂದು ಬೆಳಿಗ್ಗೆಯಿಂದಲೇ ಸಾಂಪ್ರದಾಯಿಕ ಪೂಜೆಗಳು ಆರಂಭವಾಗಿದ್ದು, ದೇವಸ್ಥಾನವನ್ನು ವರ್ಣರಂಜಿತವಾಗಿ ಸಜ್ಜುಗೊಳಿಸಲಾಗಿದೆ. ದೇವಸ್ಥಾನದ ಆವರಣದಲ್ಲಿ ಪುರೋಹಿತರು ಸಾಂಪ್ರದಾಯಿಕ ಸಂಗೀತ ನುಡಿಸುತ್ತಿದ್ದು, ತಾಳಮದ್ದಳೆಗಳ ಶಬ್ಧಕ್ಕೆ ನೃತ್ಯ ಮಾಡುತ್ತಾ ಬಾಲಭದ್ರ ಪ್ರತಿಮೆಯನ್ನು ರಥದಲ್ಲಿ ತಂದು ಪ್ರತಿಷ್ಟಾಪಿಸಿದ್ದಾರೆ.
ಪ್ರತಿಮೆ ಸ್ಥಾಪನೆ ಬಳಿಕ ಪ್ರತೀಯೊಂದು ರಥದ ಬಳಿಯೂ ಸಾಕಷ್ಟು ಜನರು ಸುತ್ತುವರೆದಿರುವುದು ಕಂಡು ಬಂದಿದ್ದು, ರಥಯಾತ್ರೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.
ಜಗನ್ನಾಥ ರಥಯಾತ್ರೆ ದೇಶದ ಪ್ರತೀಯೊಬ್ಬರಿಗೂ ಸಂತೋಷ, ಅದೃಷ್ಟ ಹಾಗೂ ಆರೋಗ್ಯವನ್ನು ನೀಡಲಿ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


