ದೇಶ

ಹಿಮಾಚಲ ಪ್ರದೇಶ ಶಾಲೆಗೆ ಗಾಲ್ವಾನ್ ಹುತಾತ್ಮ ವೀರಯೋಧನ ಹೆಸರು!

ಚೀನಾ ಯೋಧರೊಂದಿಗಿನ ಸಂಘರ್ಷದಲ್ಲಿ ವೀರಮರಣನಪ್ಪಿದ ಸೆಪೋಯ್ ಅಂಕುಶ್ ಠಾಕೂರ್ ಅವರ ಹೆಸರನ್ನು ಹಿಮಾಚಲ ಪ್ರದೇಶದಲ್ಲಿನ ಶಾಲೆಗೆ ಮರುನಾಮಕರಣ ಮಾಡಲಾಗಿದೆ.

ಹಿಮಾಚಲ ಪ್ರದೇಶ ಶಾಲೆಗೆ ಗಾಲ್ವಾನ್ ಹುತಾತ್ಮ ವೀರಯೋಧನ ಹೆಸರು!
ಹುತಾತ್ಮ ಯೋಧನಿಗೆ ಪುಶ್ಪ ನಮನ ಸಲ್ಲಿಸಿದ ಹಿಮಾಚಲ ಪ್ರದೇಶ ಸಿಎಂ
Published On :

ಶಿಮ್ಲಾ: ಚೀನಾ ಯೋಧರೊಂದಿಗಿನ ಸಂಘರ್ಷದಲ್ಲಿ ವೀರಮರಣನಪ್ಪಿದ ಸೆಪೋಯ್ ಅಂಕುಶ್ ಠಾಕೂರ್ ಅವರ ಹೆಸರನ್ನು ಹಿಮಾಚಲ ಪ್ರದೇಶದಲ್ಲಿನ ಶಾಲೆಗೆ ಮರುನಾಮಕರಣ ಮಾಡಲಾಗಿದೆ.

ಸಿಎಂ ಜೈರಾಮ್ ಠಾಕೂರ್ ಅವರು ಕೊರೋಹ್ತಾ ಗ್ರಾಮದಲ್ಲಿರುವ ಹುತಾತ್ಮ ಯೋಧ ಸೆಪೋಯ್ ಅಂಕುಶ್ ಠಾಕೂರ್ ಅವರ ಮನೆಗೆ ತೆರಳಿ ಅವರ ಕುಟುಂಬಸ್ಥರನ್ನು ಭೇಟಿ ಮಾಡಿದರು. ಈ ವೇಳೆ ಕುಟುಂಬಸ್ಖರನ್ನು ಸಂತೈಸಿದ ಅವರು ಕುಟುಂಬಸ್ಥರಿಗೆ 20 ಲಕ್ಷ ರೂ ಪರಿಹಾರ ನೀಡುವುದಾಗಿ ಆಶ್ವಾಸನೆ ನೀಡಿದರು. 

ಯೋಧ ಸೆಪೋಯ್ ಅಂಕುಶ್ ಠಾಕೂರ್ ಬಲಿದಾನವನ್ನು ದೇಶ ಎಂದಿಗೂ ಮರೆಯುವುದಿಲ್ಲ. ಅವರ ಕುರಿತಂತೆ ದೇಶ ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ ಎಂದು ಹೇಳಿದರು. ಅಂತೆಯೇ ಇದೇ ಸಂದರ್ಭದಲ್ಲಿ ಸ್ಥಳೀಯ ಶಾಸಕರು ತಮ್ಮ ಗ್ರಾಮದಲ್ಲಿ ಯೋಧನ ಪ್ರತಿಮೆ ನಿರ್ಮಾಣ ಮಾಡಲಾಗುತ್ತದೆ. ಅಂತೆಯೇ ಯೋಧನ ಗ್ರಾಮಕ್ಕೆ ಸಾಗುವ ರಸ್ತೆಗಳನ್ನು ಕೂಡವೇ ದುರಸ್ತಿ ಮಾಡಲಾಗುತ್ತದೆ ಎಂದು ಹೇಳಿದರು. 

ಇನ್ನು ಶಾಲಾ ಮಕ್ಕಳ ನೆನಪಿನಲ್ಲಿ ವೀರಯೋಧನ ನೆನಪು ಅಚ್ಚಳಿಯುವಂತೆ ಮಾಡಿದ ಹಿಮಾಚಲ ಪ್ರದೇಶ ಸರ್ಕಾರದ ನಡೆಗೆ ಇದೀಗ ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.