ತಂದೆಯ ಇಚ್ಛೆ ಈಡೇರಿಸಲು ಬೊಂಬೆಯನ್ನೇ ಮದುವೆಯಾದ ಪುತ್ರ!
ತಂದೆಯ ಇಚ್ಛೆಯನ್ನು ಈಡೇರಿಸುವುದಕ್ಕಾಗಿ ವ್ಯಕ್ತಿಯೋರ್ವ ಬೊಂಬೆಯ ಜೊತೆ ವಿವಾಹವಾಗಿರುವ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಡೆದಿದೆ.

ತಂದೆಯ ಇಚ್ಛೆಯನ್ನು ಈಡೇರಿಸುವುದಕ್ಕಾಗಿ ವ್ಯಕ್ತಿಯೋರ್ವ ಬೊಂಬೆಯ ಜೊತೆ ವಿವಾಹವಾಗಿರುವ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಡೆದಿದೆ.
ಶಿವ ಮೋಹನ್ ಎಂಬ ವ್ಯಕ್ತಿ ತಮ್ಮ ಇಚ್ಛೆಯನ್ನು ಈಡೇರಿಸಿಕೊಳ್ಳುವುದಕ್ಕಾಗಿ ಮರದ ಬೊಂಬೆಯ ಜೊತೆ ಮಗನ ಮದುವೆ ನಡೆಸಿದ್ದಾರೆ.
ಘುರ್ ಪುರದಲ್ಲಿ ಶಾಸ್ತ್ರೋಕ್ತವಾಗಿ ಈ ವಿವಾಹ ನಡೆದಿದ್ದು, ವಿವಾಹದ ಸಂದರ್ಭದಲ್ಲಿ ನಡೆಸಲಾಗುವ ಎಲ್ಲಾ ಶಾಸ್ತ್ರಗಳನ್ನೂ ನಡೆಸಿದ್ದಾರೆ.
ಇನ್ನು ಮಗನ ಮದುವೆಯನ್ನು ಈ ರೀತಿ ನಡೆಸುವುದರ ಹಿಂದಿನ ಕಾರಣ ಇಷ್ಟೇ ವಿಚಿತ್ರವಾಗಿದೆ.!
"ನನಗೆ 9 ಜನ ಗಂಡು ಮಕ್ಕಳು ಈ ಪೈಕಿ 8 ಜನಕ್ಕೆ ವಿವಾಹವಾಗಿದೆ. ಆದರೆ 9 ನೇ ಮಗನಿಗೆ ಆಸ್ತಿ ಇಲ್ಲ, ಬುದ್ಧಿವಂತನೂ ಅಲ್ಲ, ಹಾಗಾಗಿ ಅವನಿಗೆ ಬೊಂಬೆಯೊಂದಿಗೆ ಮದುವೆ ಮಾಡಿಸಿದೆ ಎಂದು ಹೇಳಿದ್ದಾರೆ. ಈ ವಿವಾಹಕ್ಕೆ ಸಂಬಂಧಿಕರು ಬಂದಿದ್ದರು.
ಸಾಮಾನ್ಯವಾಗಿ ದೋಷಗಳಿದ್ದರೆ ವಿವಾಹವನ್ನು ಬೊಂಬೆ ಅಥವಾ ಪ್ರಾಣಿಗಳೊಂದಿಗೆ ನೆರವೇರಿಸಿ ನಂತರ ಶಾಸ್ತ್ರೋಕ್ತ ವಿವಾಹ ನಡೆಸುವ ಸಂಪ್ರದಾಯವಿದೆ. ಆದರೆ ತಂದೆಯ ಇಚ್ಛೆ ಈಡೇರಿಸಲು ಮರದ ಬೊಂಬೆಯ ಜೊತೆ ವಿವಾಹವಾಗಿರುವ ವಿಲಕ್ಷಣ ಘಟನೆ ಇದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


