ಆತ ನನ್ನ ಒಬ್ಬನೇ ಮಗ, ದೇಶಕ್ಕೆ ಪ್ರಾಣ ಅರ್ಪಿಸಿದ್ದಾನೆ: ಹುತಾತ್ಮ ವೀರ ಯೋಧ ಸಂತೋಷ್ ತಂದೆ
ನಮಗೆ ಇದ್ದದ್ದು ಒಬ್ಬನೇ ಮಗ. ಆತನನ್ನು ಕಳೆದುಕೊಂಡಿರುವುದಕ್ಕೆ ದುಃಖವಾಗುತ್ತಿದೆ. ಆದರೆ ನನ್ನ ಮಗ ದೇಶಕ್ಕಾಗಿ ತನ್ನ ಪ್ರಾಣಾರ್ಪಣೆ ಮಾಡಿದ್ದಕ್ಕೆ ಹೆಮ್ಮೆ ಇದೆ ಎಂದು ಗಲ್ವಾನ್ ನಲ್ಲಿ ಚೀನಾ ಯೋಧರ ದಾಳಿಗೆ ಬಲಿಯಾದ ಕರ್ನಲ್ ಸಂತೋಷ್ ಬಾಬಿ ಪೋಷಕರು ಹೇಳಿದ್ದಾರೆ.

ಹೈದರಾಬಾದ್: ನಮಗೆ ಇದ್ದದ್ದು ಒಬ್ಬನೇ ಮಗ. ಆತನನ್ನು ಕಳೆದುಕೊಂಡಿರುವುದಕ್ಕೆ ದುಃಖವಾಗುತ್ತಿದೆ. ಆದರೆ ನನ್ನ ಮಗ ದೇಶಕ್ಕಾಗಿ ತನ್ನ ಪ್ರಾಣಾರ್ಪಣೆ ಮಾಡಿದ್ದಕ್ಕೆ ಹೆಮ್ಮೆ ಇದೆ ಎಂದು ಗಲ್ವಾನ್ ನಲ್ಲಿ ಚೀನಾ ಯೋಧರ ದಾಳಿಗೆ ಬಲಿಯಾದ ಕರ್ನಲ್ ಸಂತೋಷ್ ಬಾಬಿ ಪೋಷಕರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾನುವಾರವಷ್ಟೇ ನನ್ನ ಜೊತೆಗೆ ಫೋನ್ ನಲ್ಲಿ ಮಾತನಾಡಿದ್ದ. ಗಡಿ ವಿವಾದ ಕುರಿತು ಮಾಧ್ಯಮದಲ್ಲಿ ಬರುವುದಕ್ಕೂ ವಾಸ್ತವಕ್ಕೂ ವ್ಯತ್ಯಾಸವಿದೆ ಎಂದಿದ್ದ. ಹೈದರಾಬಾದ್'ಗೆ ಆತ ವರ್ಗವಾಗಿದ್ದ. ಆದರೆ, ಲಾಕ್'ಡೌನ್ ಕಾರಣ ವರ್ಗ ತಡವಾಯಿತು. ಮುಂದಿನ ತಿಂಗಳು ಬರುವುದಾಗಿ ಹೇಳಿದ್ದೆ ಎಂದು ಕಣ್ಣೀರಿಟ್ಟರು.
ಇದೇ ವೇಳೆ ಮಾತನಾಡಿದ ಸಂತೋಷ್ ತಂದೆ ಉಪೇಂದ್ರ ಅವರು, ನಾನು ಯೋಧ ಆಗಬೇಕುಎಂದುಕೊಂಡಿದ್ದೆ. ಆದರೆ, ಆಗಲಿಲ್ಲ. ನಮ್ಮಮಗ ಸೇನೆ ಸೇರುವ ತನ್ನ ಕನಸು ಈಡೇರಿಸಿಕೊಂಡಿದ್ದ. ಆತ ಯಾವಾಗಲೂ ಚಿನ್ನದ ಪದಕ ಗೆಲ್ಲುತ್ತಿದ್ದ. ತನಗೆ ಏನಾದರೂ ಆದರೆ, ಅದನ್ನು ಅರಗಿಸಿಕೊಳ್ಳುವ ಶಕ್ತಿ ತಂದುಕೊಳ್ಳಿ ಎಂದು ಮಗ ಹೇಳುತ್ತಿದ್ದ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


