ದೆಹಲಿಯಲ್ಲಿ ಕೊವಿಡ್-19 ಪರೀಕ್ಷೆ ದರ 2,400 ರೂ. ಗೆ ಇಳಿಕೆ
ದೆಹಲಿಯಲ್ಲಿ ಕೊವಿಡ್ -19 ಪರೀಕ್ಷೆ ದರವನ್ನು 4,500 ರೂ.ಗಳಿಂದ 2,400 ರೂ.ಗೆ ಇಳಿಸಲಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಬುಧವಾರ ತಿಳಿಸಿದೆ.

ನವದೆಹಲಿ: ದೆಹಲಿಯಲ್ಲಿ ಕೊವಿಡ್ -19 ಪರೀಕ್ಷೆ ದರವನ್ನು 4,500 ರೂ.ಗಳಿಂದ 2,400 ರೂ.ಗೆ ಇಳಿಸಲಾಗಿದೆ ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಬುಧವಾರ ತಿಳಿಸಿದೆ.
ಹೊಸ ದರಗಳು ಗುರುವಾರದಿಂದ ಅನ್ವಯವಾಗಲಿದ್ದು, ‘ಸಾಮಾನ್ಯ ಜನರಿಗೆ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೊವಿಡ್-19 ಪರೀಕ್ಷಾ ದರವನ್ನು 2,400 ರೂ. ನಿಗದಿಪಡಿಸಲು ನಿರ್ಧರಿಸಿದ್ದಾರೆ ಎಂದು ಗೃಹ ಸಚಿವಾಲಯದ ವಕ್ತಾರರು ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ.
ಜೂನ್ 18ರಿಂದ ಐಸಿಎಂಆರ್ ಅನುಮೋದಿಸಿದ ಹೊಸ ರಾಪಿಡ್ ಆಂಟಿಜೆನ್ ವಿಧಾನದ ಮೂಲಕ ಕೊವಿಡ್-19 ಪರೀಕ್ಷೆಗಳನ್ನು ನಡೆಸಲಾಗುವುದು. ಈ ಕಿಟ್ ಗಳಿಗೆ ದೆಹಲಿ ಸರ್ಕಾರ ಆದ್ಯತೆ ನೀಡಲಿದೆ. ದೆಹಲಿಯಾದ್ಯಂತ 169 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಅಲ್ಲದೆ, ದೆಹಲಿಯ ಕಂಟೈನ್ ಮೆಂಟ್ ವಲಯಗಳಲ್ಲಿ ಸಂಪರ್ಕ ಮ್ಯಾಪಿಂಗ್ ಸುಧಾರಿಸಲು ಆರೋಗ್ಯ ಸಮೀಕ್ಷೆಗಳನ್ನು ಆರಂಭಿಸಲಾಗಿದೆ. 242 ಕಂಟೈನ್ ಮೆಂಟ್ ವಲಯಗಳಲ್ಲಿ ಒಟ್ಟು 2,30,466 ಜನರ ಪೈಕಿ 1, 77,692 ಜನರ ಸಮೀಕ್ಷೆಯನ್ನು ಜೂನ್ 15-16 ರ ನಡುವೆ ನಡೆಸಲಾಗಿದ್ದು, ಉಳಿದವರಿಗೆ ಜೂನ್ 20ರೊಳಗೆ ಪರೀಕ್ಷೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


