'ನಿಮ್ಮ ಸಲಹೆ,ಅಭಿಪ್ರಾಯ ನೀಡಿ',ಮನ್ ಕಿ ಬಾತ್ ನಲ್ಲಿ ಮಾತನಾಡಲು ವಿಷಯಗಳಿಗೆ ನಾಗರಿಕರನ್ನು ಕೇಳಿದ ಮೋದಿ
ತಮ್ಮ ತಿಂಗಳ ಕೊನೆಯ ಭಾನುವಾರ ಪ್ರಸಾರವಾಗುವ ಮನ್ ಕಿ ಬಾತ್ ನಲ್ಲಿ ಮಾತನಾಡಲು ಆಲೋಚನೆ ಮತ್ತು ವಿಷಯಗಳನ್ನು ನೀಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶವಾಸಿಗಳನ್ನು ಕೋರಿದ್ದಾರೆ.

ನವದೆಹಲಿ: ತಮ್ಮ ತಿಂಗಳ ಕೊನೆಯ ಭಾನುವಾರ ಪ್ರಸಾರವಾಗುವ ಮನ್ ಕಿ ಬಾತ್ ನಲ್ಲಿ ಮಾತನಾಡಲು ಆಲೋಚನೆ ಮತ್ತು ವಿಷಯಗಳನ್ನು ನೀಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶವಾಸಿಗಳನ್ನು ಕೋರಿದ್ದಾರೆ.
ಈ ತಿಂಗಳ ಮನ್ ಕಿ ಬಾತ್ ಜೂನ್ 28ಕ್ಕೆ ಪ್ರಸಾರವಾಗಲಿದೆ. ಅದಕ್ಕೆ ಇನ್ನು ಎರಡು ವಾರ ಬಾಕಿ ಇರುವಾಗಲೇ ನಿಮ್ಮ ಆಲೋಚನೆಗಳು, ವಿಷಯಗಳನ್ನು ನನ್ನ ಜೊತೆ ಹಂಚಿಕೊಳ್ಳಿ. ಇದರಿಂದ ನನಗೆ ಮತ್ತಷ್ಟು ಹೆಚ್ಚು ವಿಷಯಗಳ ಬಗ್ಗೆ ಮಾತನಾಡಲು ಕಮೆಂಟ್, ಫೋನ್ ಕಾಲ್ ಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತದೆ. ಕೋವಿಡ್-19 ಜೊತೆಗೆ ಸಾಕಷ್ಟು ಇನ್ನೂ ಹಲವು ವಿಷಯಗಳು ನಿಮ್ಮ ಬಳಿ ಇರಬಹುದು ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಜನರು ಸಲಹೆ, ಅಭಿಪ್ರಾಯಗಳನ್ನು ಯಾವ ರೀತಿ ಕೊಡಬಹುದು ಎಂದು ಸಂಖ್ಯೆಯೊಂದನ್ನು ನೀಡಿದ್ದು ಅದರಲ್ಲಿ ನಾಗರಿಕರು ರೆಕಾರ್ಡ್ ಮಾಡಿರುವ ಸಂದೇಶಗಳನ್ನು ಕಳುಹಿಸಬಹುದು.ನಮೊ ಆಪ್ ಅಥವಾ ಮೈಗವರ್ಮೆಂಟ್ ಮೂಲಕ ಸಹ ಕಳುಹಿಸಬಹುದು ಎಂದಿದ್ದಾರೆ.
ಕಳೆದ ತಿಂಗಳ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ ಮುಖ್ಯವಾಗಿ ಕೊರೋನಾ ವೈರಸ್ ವಿರುದ್ಧ ಹೋರಾಟ, ಕೊರೋನಾ ವಾರಿಯರ್ಸ್ ಶ್ರಮ, ಕೊರೋನಾ ಸೋಂಕಿನಿಂದ ಗುಣಮುಖರಾದವರ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


