ದೇಶ

ಕೋವಿಡ್-19: ವಿಶ್ವದಲ್ಲಿ ಭಾರತಕ್ಕೆ 4ನೇ ಸ್ಥಾನ, ಐದು ನಗರಗಳಲ್ಲಿ ದೇಶದ ಶೇ.50 ರಷ್ಟು ಕೊರೋನಾ ಪ್ರಕರಣ!

ಜಗತ್ತಿನಾದ್ಯಂತ ಆತಂಕದ ಅಲೆ ಸೃಷ್ಟಿಸಿರುವ ಮಾರಕ ಕೊರೋನಾ ವೈರಸ್ ಪ್ರಕರಣ ಹೆಚ್ಚಾಗಿರುವ ದೇಶಗಳ ಪೈಕಿಯಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ.ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 308, 993 ಆಗಿದ್ದು, ಅಮೆರಿಕಾ, ಬ್ರೆಜಿಲ್ ಮತ್ತು ರಷ್ಯಾ ದೇಶಕ್ಕಿಂತ ಹಿಂದಿದೆ.

ಕೋವಿಡ್-19: ವಿಶ್ವದಲ್ಲಿ ಭಾರತಕ್ಕೆ 4ನೇ ಸ್ಥಾನ, ಐದು ನಗರಗಳಲ್ಲಿ ದೇಶದ ಶೇ.50 ರಷ್ಟು ಕೊರೋನಾ ಪ್ರಕರಣ!
ಕೋವಿಡ್-19 ರೋಗಿಗಳು
Published On :

ನವದೆಹಲಿ: ಜಗತ್ತಿನಾದ್ಯಂತ ಆತಂಕದ ಅಲೆ ಸೃಷ್ಟಿಸಿರುವ ಮಾರಕ ಕೊರೋನಾ ವೈರಸ್ ಪ್ರಕರಣ ಹೆಚ್ಚಾಗಿರುವ ದೇಶಗಳ ಪೈಕಿಯಲ್ಲಿ ಭಾರತ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ.ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 308, 993 ಆಗಿದ್ದು, ಅಮೆರಿಕಾ, ಬ್ರೆಜಿಲ್ ಮತ್ತು ರಷ್ಯಾ ದೇಶಕ್ಕಿಂತ ಹಿಂದಿದೆ.

ದೇಶದಲ್ಲಿನ ಒಟ್ಟು ಕೋವಿಡ್ -19 ಪ್ರಕರಣಗಳ ಪೈಕಿ  ಶೇ. 32 ರಷ್ಟು ಮಹಾರಾಷ್ಟ್ರದಿಂದಲೇ ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಸುಮಾರು 1 ಲಕ್ಷ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಶೇ. 45 ರಷ್ಟು ಕೋವಿಡ್- ಪ್ರಕರಣಗಳು ಮುಂಬೈ ಹಾಗೂ ತಮಿಳುನಾಡು ರಾಜ್ಯಗಳಿಂದಲೇ ವರದಿಯಾಗಿದೆ.

ಅತಿ ಹೆಚ್ಚು ಕೊರೋನಾ ಭಾದಿತ ನಗರಗಳ ಪೈಕಿಯಲ್ಲಿ ಮುಂಬೈ, ಪುಣೆ, ಠಾಣೆ , ದೆಹಲಿ, ಗುಜರಾತಿನ ಅಹಮಾದಾಬಾದ್, ತಮಿಳುನಾಡಿನ ಚೆನ್ನೈ, ರಾಜಸ್ಥಾನದ ಜೈಪುರ ಉನ್ನತ ಸ್ಥಾನದಲ್ಲಿವೆ. ದೇಶದಲ್ಲಿನ ಒಟ್ಟು ಕೋವಿಡ್- 19 ಪ್ರಕರಣಗಳ ಅರ್ಧದಷ್ಟು ಪ್ರಕರಣಗಳು ಮುಂಬೈ, ದೆಹಲಿ, ಅಹಮದಾಬಾದ್, ಚೆನ್ನೈ ಮತ್ತು ಥಾಣೆಗಳಿಂದಲೇ ಬಂದಿದೆ.

ದೇಶದಲ್ಲಿ ಕೊರೋನಾದಿಂದ ಅತಿ ಹೆಚ್ಚು ಹದಗೆಟ್ಟಿರುವ ನಗರಗಳಲ್ಲಿ ವಾಣಿಜ್ಯ ನಗರಿ ಮುಂಬೈ ಪ್ರಥಮ ಸ್ಥಾನದಲ್ಲಿದೆ. ಇಲ್ಲಿ 55, 451 ಪ್ರಕರಣ ದಾಖಲಾಗಿದ್ದು, ಸುಮಾರು 2 ಸಾವಿರ ಜನರು ಮೃತಪಟ್ಟಿದ್ದಾರೆ. ಸ್ವೀಡನ್, ನೆದರ್ ಲ್ಯಾಂಡ್, ಈಜಿಪ್ಟ್, ಯುಎಇ ಮುಂತಾದ ದೇಶಗಳಲ್ಲಿ ವರದಿಯಾದ ಒಟ್ಟು ಪ್ರಕರಣಗಳಿಗಿಂತ ಮುಂಬೈನಲ್ಲಿಯೇ ಹೆಚ್ಚಿನ ಸೋಂಕಿನ ಪ್ರಕರಣ ಕಂಡುಬಂದಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಲ್ಲಿಯವರೆಗೂ ಕೊರೋನಾದಿಂದ 1, 214 ಮಂದಿ ಮೃತಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 36, 824ಕ್ಕೆ ಏರಿಕೆ ಆಗಿದೆ. 13, 398 ರೋಗಿಗಳು ಗುಣಮುಖರಾಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.