13 ತಿಂಗಳಲ್ಲಿ 25 ಶಾಲೆಗಳಲ್ಲಿ ಕೆಲಸ; ಒಂದೇ ವರ್ಷದಲ್ಲಿ 1 ಕೋಟಿ ರೂ ವೇತನ ಪಡೆದ ಶಿಕ್ಷಕಿ ವೊಲೀಸ್ ವಶಕ್ಕೆ
ಉತ್ತರ ಪ್ರದೇಶದ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ಒಂದೇ ವರ್ಷದಲ್ಲಿ ಬರೊಬ್ಬರಿ 1 ಕೋಟಿ ರೂ ವೇತನ ಪಡೆಯುವ ಮೂಲಕ ಪೊಲೀಸರ ಅತಿಥಿಯಾಗಿದ್ದಾರೆ.

ಲಖನೌ: ಉತ್ತರ ಪ್ರದೇಶದ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ಒಂದೇ ವರ್ಷದಲ್ಲಿ ಬರೊಬ್ಬರಿ 1 ಕೋಟಿ ರೂ ವೇತನ ಪಡೆಯುವ ಮೂಲಕ ಪೊಲೀಸರ ಅತಿಥಿಯಾಗಿದ್ದಾರೆ.
ಹೌದು.. ದುರ್ಬಲ ವರ್ಗದ ಬಾಲಕಿಯರಿಗಾಗಿ ಉತ್ತರ ಪ್ರದೇಶ ಸರ್ಕಾರ ಸ್ಥಾಪಿಸಿರುವ ಕಸ್ತೂರ್ ಬಾ ಬಾಲಿಕಾ ವಿದ್ಯಾಲಯದಲ್ಲಿ (ಕೆಜಿಬಿವಿ) ಕೆಲಸ ಮಾಡುತ್ತಿದ್ದ ಶಿಕ್ಷಕಿ ಒಂದೇ ವರ್ಷದಲ್ಲಿ ಕೋಟ್ಯಧಿಪತಿಯಾಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. 25 ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ (ಕೆಜಿಬಿವಿ) ಕೆಲಸ ಮಾಡಿ 13 ತಿಂಗಳ ಅವಧಿಯಲ್ಲಿ 1 ಕೋಟಿ ರೂ. ಸಂಬಳ ಸಂಗ್ರಹಿಸಿದ ಶಿಕ್ಷಕಿ ಅನಾಮಿಕಾ ಶುಕ್ಲಾ ಎನ್ನುವರನ್ನು ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಶಿಕ್ಷಕರ ದತ್ತಾಂಶ ಸಂಗ್ರಹದ ವೇಳೆ ಈ ಸ್ಫೋಟಕ ವಿಷಯ ಬೆಳಕಿಗೆ ಬಂದಿದ್ದು, 2020ರ ಫೆಬ್ರವರಿವರೆಗೆ 13 ತಿಂಗಳಿನಿಂದ ಅನಾಮಿಕಾ ಶುಕ್ಲಾ 25 ಕಡೆಗಳಲ್ಲಿ ಏಕಕಾಲಕ್ಕೆ ಕರ್ತವ್ಯ ನಿರ್ವಹಿಸಿದ ಅಂಶ ಬಹಿರಂಗವಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ಹಾಜರಾತಿಯ ರಿಯಲ್ ಟೈಮ್ ಮಾನಿಟರಿಂಗ್ ನಡೆಯುತ್ತಿದ್ದರೂ ಶುಕ್ಲಾ ಈ ರೀತಿ ವಂಚನೆ ಮಾಡಿರುವುದು ಅಚ್ಚರಿ ಮೂಡಿಸಿದೆ.
ಏಕಕಾಲದಲ್ಲಿ 25 ಶಾಲೆಗಳಲ್ಲಿ ಕೆಲಸ
ಮೈನ್‌ಪುರಿ ಮೂಲದ ಶುಕ್ಲಾ ದಾಖಲೆಗಳ ಪ್ರಕಾರ ಎಲ್ಲ ಶಾಲೆಗಳಲ್ಲೂ ಏಕಕಾಲದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಹಲವು ವರ್ಷಗಳಿಂದ ಈ ಶಾಲೆಗಳ ಶಿಕ್ಷಕರ ಹಾಜರಾತಿ ಪುಸ್ತಕದಲ್ಲಿ ಈಕೆಯ ಹೆಸರಿದೆ. ಶಿಕ್ಷಕಿಯ ವಿರುದ್ಧ ಕಳೆದ ಮಾರ್ಚ್‌ನಲ್ಲಿ ಬಂದ ದೂರಿನ ಅನ್ವಯ ತನಿಖೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ವಿಷಯ ಬೆಳಕಿಗೆ ಬಂದ ನಂತರ ಯುಪಿ ಶಿಕ್ಷಣ ಸಚಿವ ಡಾ.ಸತೀಶ್ ದ್ವಿವೇದಿ ಅವರು ಅನಾಮಿಕಾ ಶುಕ್ಲಾ ವಿರುದ್ಧ ತನಿಖೆ ಮತ್ತು ಎಫ್‌ಐಆರ್‌ಗೆ ಆದೇಶಿಸಿದ್ದರು. ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಶಿಕ್ಷಕಿ ಅಧಿಕಾರಿಗಳ ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿದ್ದರು. ಇದೀಗ ವಂಚತಿ ಶಿಕ್ಷಕಿ ಪೊಲೀಸರ ಅತಿಥಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


