ದೇಶ

ಜಮ್ಮು-ಕಾಶ್ಮೀರದ ಆವಂತಿಪೊರಾದಲ್ಲಿ ಎನ್ ಕೌಂಟರ್: ಓರ್ವ ಉಗ್ರನ ಹತ್ಯೆ

ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್ ಕೌಂಟರ್ ನಡೆದು ಓರ್ವ ಉಗ್ರ ಹತನಾದ ಘಟನೆ ಜಮ್ಮು-ಕಾಶ್ಮೀರದ ಆವಂತಿಪೊರಾದ ಸೈಮೊಹ್ ಪ್ರದೇಶದಲ್ಲಿ ಮಂಗಳವಾರ ನಸುಕಿನ ಜಾವ ನಡೆದಿದೆ.

ಜಮ್ಮು-ಕಾಶ್ಮೀರದ ಆವಂತಿಪೊರಾದಲ್ಲಿ ಎನ್ ಕೌಂಟರ್: ಓರ್ವ ಉಗ್ರನ ಹತ್ಯೆ
ಭದ್ರತಾಪಡೆ ಪೊಲೀಸರ ಕಾರ್ಯಾಚರಣೆ
Published On :

ಜಮ್ಮು: ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್ ಕೌಂಟರ್ ನಡೆದು ಓರ್ವ ಉಗ್ರ ಹತನಾದ ಘಟನೆ ಜಮ್ಮು-ಕಾಶ್ಮೀರದ ಆವಂತಿಪೊರಾದ ಸೈಮೊಹ್ ಪ್ರದೇಶದಲ್ಲಿ ಮಂಗಳವಾರ ನಸುಕಿನ ಜಾವ ನಡೆದಿದೆ.

ಸದ್ಯ ಎನ್ ಕೌಂಟರ್ ನಡೆದ ಪ್ರದೇಶದಲ್ಲಿ ಭದ್ರತಾ ಪಡೆ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಹತ್ಯೆಗೀಡಾದ ಉಗ್ರ ಯಾವ ಸಂಘಟನೆಗೆ ಸೇರಿದವನು ಎಂದು ಗುರುತು ಪತ್ತೆಯಾಗಿಲ್ಲ.

ಇನ್ನೂ ಒಂದೆರಡು ಭಯೋತ್ಪಾದಕರು ಸಿಕ್ಕಿಹಾಕಿಕೊಂಡಿರುವ ಶಂಕೆಯಿದೆ. ಕಳೆದ ರಾತ್ರಿ ಉಗ್ರರ ಇರುವಿಕೆ ಬಗ್ಗೆ ನಿಖರ ಮಾಹಿತಿ ಪಡೆದ ಆವಂತಿಪೊರಾ ಪೊಲೀಸರ ಜಂಟಿ ಕಾರ್ಯಪಡೆ, ಸೇನೆಯ 42 ಆರ್ ಆರ್ ಮತ್ತು ಸಿಆರ್ ಪಿಎಫ್ ತಂಡ ಶೋಧ ಕಾರ್ಯ ಆರಂಭಿಸಿ ಪ್ರದೇಶವನ್ನು ಸುತ್ತುವರಿದರು.

ಪೊಲೀಸರು ಶಂಕಿತ ಸ್ಥಳಕ್ಕೆ ತಲುಪಿದಾಗ ಭಯೋತ್ಪಾದಕರು ಇದ್ದಕ್ಕಿದ್ದಂತೆ ಗುಂಡಿನ ದಾಳಿ ನಡೆಸಲಾರಂಭಿಸಿದರು. ಅದಕ್ಕೆ ಪ್ರತಿಯಾಗಿ ಪೊಲೀಸರು ಗುಂಡಿನ ದಾಳಿ ಆರಂಭಿಸಿದರು. ಇದಕ್ಕೂ ಮುನ್ನ ಉಗ್ರರನ್ನು ಶರಣಾಗುವಂತೆ ಪೊಲೀಸರು ಕೇಳಿಕೊಂಡಿದ್ದರು, ಅದಕ್ಕೆ ನಿರಾಕರಿಸಿ ಗುಂಡಿನ ಮಳೆಗೈಯಲಾರಂಭಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.