ಪ್ರವಾಸೋದ್ಯಮ ಸಚಿವರಿಗೆ ಸೋಂಕು: ಉತ್ತರಾಖಂಡ್ ಸಿಎಂ ಸೇರಿ ಎಲ್ಲಾ ಸಚಿವರಿಗೂ ಹೋಮ್ ಕ್ವಾರಂಟೈನ್
ಉತ್ತರಾಖಂಡದ ಪ್ರವಾಸೋದ್ಯಮ ಸಚಿವ ಸಪ್ತಲ್ ಮಹಾರಾಜ್ ಅವರಿಗೆ ತಮ್ಮ ಹೆಂಡತಿಯಿಂದ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರ ಪತ್ನಿಗೆ ಕೊರೋನಾ ಪಾಸಿಟಿವ್ ಬಂದ ಮಾರನೇ ದಿನವೇ ಅಂದರೆ ಭಾನುವಾರ ಸಚಿವರಿಗೂ ಕೊರೋನಾ ಹರಡಿದೆ.

ನವದೆಹಲಿ: ಉತ್ತರಾಖಂಡದ ಪ್ರವಾಸೋದ್ಯಮ ಸಚಿವ ಸಪ್ತಲ್ ಮಹಾರಾಜ್ ಅವರಿಗೆ ತಮ್ಮ ಹೆಂಡತಿಯಿಂದ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರ ಪತ್ನಿಗೆ ಕೊರೋನಾ ಪಾಸಿಟಿವ್ ಬಂದ ಮಾರನೇ ದಿನವೇ ಅಂದರೆ ಭಾನುವಾರ ಸಚಿವರಿಗೂ ಕೊರೋನಾ ಹರಡಿದೆ.
ಸಚಿವ ಸಪ್ತಲ್ ಮಹಾರಾಜ್ ಒಳಗೊಂಡಂತೆ, ಅವರ ಸಂಪರ್ಕ ಹೊಂದಿದ್ದ 22 ಮಂದಿ, ಅವರ ಮಗ ಮತ್ತು ಸೊಸೆಗೂ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಲಾಕ್ ಡೌನ್ ವೇಳೆ ಪ್ರವಾಸೋದ್ಯಮ ಸಚಿವ ಸಪ್ತಲ್ ಮಹಾರಾಜ್ ಅವರನ್ನು ಭೇಟಿ ಮಾಡಲು ಕೆಲವರು ದೆಹಲಿಯಿಂದ ಆಗಮಿಸಿದ್ದರು. ಹೀಗಾಗಿ ಡೆಹ್ರಾಡೂನ್ ಆಡಳಿತ ಮಂಡಳಿಯು ಸಚಿವರ ಖಾಸಗಿ ನಿವಾಸವನ್ನು ಕ್ವಾರಂಟೈನ್ಗೆ ಒಳಪಡಿಸಿದೆ.
ಪ್ರಾಥಮಿಕ ವರದಿ ಪ್ರಕಾರ, ಸಚಿವರ ಸಿಬ್ಬಂದಿಯನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಸಪ್ತಲ್ ಮಹಾರಾಜ್ ಮತ್ತು ಅವರ ಪತ್ನಿ ಸೇರಿ ಸುಮಾರು 40 ಮಂದಿಯನ್ನು ಐಸೋಲೇಶನ್ನಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.
ಕಳೆದ ಶುಕ್ರವಾರ ಸಚಿವ ಮಹಾರಾಜ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದರು. ಈಗ ಮಹಾರಾಜ್ಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆ, ಸಭೆಯಲ್ಲಿ ಭಾಗಿಯಾಗಿದ್ದ ಸಿಎಂ ಸೇರಿ ಎಲ್ಲಾ ಸಚಿವರು ಸಹ ಹೋಂ
ಕ್ವಾರಂಟೈನ್ನಲ್ಲಿ ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


