ರಾಜ್ಯಸಭಾ ನೀತಿ ಸಮಿತಿ ಅಧ್ಯಕ್ಷರಾಗಿ ಬಿಜೆಪಿ ಸಂಸದ ಶಿವ ಪ್ರತಾಪ್ ಶುಕ್ಲಾ ನೇಮಕ
ರಾಜ್ಯ ಸಭೆಯ ನೀತಿ ಸಮಿತಿ ಅಧ್ಯಯಕ್ಷರಾಗಿ ಬಿಜೆಪಿ ಸಂಸದ ಶಿವ ಪ್ರತಾಪ್ ಶುಕ್ಲಾ ಅವರನ್ನು ನೇಮಕ ಮಾಡಲಾಗಿದೆ. ರಾಜ್ಯ ಸಭಾ ಪ್ರಧಾನ ಕಾರ್ಯದರ್ಶಿ ದೇಶ್ ದೀಪಕ್ ವರ್ಮಾ ತಿಳಿಸಿದ್ದಾರೆ.

ನವದೆಹಲಿ: ರಾಜ್ಯ ಸಭೆಯ ನೀತಿ ಸಮಿತಿ ಅಧ್ಯಯಕ್ಷರಾಗಿ ಬಿಜೆಪಿ ಸಂಸದ ಶಿವ ಪ್ರತಾಪ್ ಶುಕ್ಲಾ ಅವರನ್ನು ನೇಮಕ ಮಾಡಲಾಗಿದೆ. ರಾಜ್ಯ ಸಭಾ ಪ್ರಧಾನ ಕಾರ್ಯದರ್ಶಿ ದೇಶ್ ದೀಪಕ್ ವರ್ಮಾ ತಿಳಿಸಿದ್ದಾರೆ.
ಗುರುವಾರ ಬಿಡುಗಡೆ ಮಾಡಿರುವ ಸಂಸದೀಯ ಬುಲೆಟಿನ್ ನಲ್ಲಿ ಈ ವಿಷಯ ತಿಳಿಸಿದ್ದಾರೆ. ಶುಕ್ಲಾ ಅವರನ್ನು ಬಿಟ್ಟು ಇತ್ತೀಚೆಗೆ ರಾಷ್ಟ್ರಪತಿ ವೆಂಕಯ್ಯ ನಾಯ್ಡು ನೀತಿ ಸಮಿತಿಗೆ ಮೂವರನ್ನು ನೇಮಿಸಿದ್ದರು. ಡಿಎಂಕೆಯ ತಿರುಚ್ಚಿ ಶಿವ, ಟಿಆರ್ ಎಸ್ ನ ಡಾ.ಕೇಶವ ರಾವ್, ಮತ್ತು ವೈಆರ್ ಎಲ್ ಕಾಂಗ್ರೆಸ್ ವಿ ವಿಜಯ ರೆಡ್ಡಿ ಅವರನ್ನು ನೇಮಿಸಿದ್ದರು.
ಶುಕ್ಲಾ ಅವರ ನೇಮಕದಿಂದ ರಾಜ್ಯಸಭೆ ನೀತಿ ಸಮಿತಿ ಸದಸ್ಯರ ಸಂಖ್ಯೆ 11 ಕ್ಕೇರಿದೆ, ಸಂಸದ ಆನಂದ್ ಶರ್ಮಾ, ರಾಮ್ ಗೋಪಾಲ್ ಯಾದವ್,ಎಂ ನವನೀತ್ ಕೃಷ್ಣನ್, ಡೆರೆಕ್ ಓ ಬ್ರೆನ್, ರಾಮ್ ಚಂದ್ರ, ಪ್ರಸನ್ನ ಆಚಾರ್ಯ ಮತ್ತು ಬಿಜು ಅವರನ್ನು ನೇಮಿಸಲಾಗಿದೆ.
ಸಂಸದರ ವರ್ತನೆ ಮತ್ತು ಚಟುವಟಿಕೆಗಳ ವಿರುದ್ಧದ ದೂರುಗಳನ್ನು ಪರಿಶೀಲಿಸುವ ಜವಾಬ್ದಾರಿಯನ್ನು ನೈತಿಕ ಸಮಿತಿಯು ಹೊಂದಿದೆ. ಜುಲೈ 21 ರಂದು ರಾಜ್ಯಸಭೆಯಲ್ಲಿ ಬಿಜೆಪಿ ಪಕ್ಷದ ಮುಖ್ಯ ಸಚೇತಕರಾಗಿ ಶುಕ್ಲಾ ಅವರನ್ನು ನೇಮಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


