ದೇಶ

1-2 ತಿಂಗಳಲ್ಲಿ ಪ್ರತಿ ದಿನ 10 ಲಕ್ಷ ಕೋವಿಡ್-19 ಟೆಸ್ಟ್: ಹರ್ಷವರ್ಧನ್ 

1-2 ತಿಂಗಳುಗಳಲ್ಲಿ ಪ್ರತಿ ದಿನ 10 ಲಕ್ಷ ಕೋವಿಡ್-19 ಸೋಂಕು ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ.

1-2 ತಿಂಗಳಲ್ಲಿ ಪ್ರತಿ ದಿನ 10 ಲಕ್ಷ ಕೋವಿಡ್-19 ಟೆಸ್ಟ್: ಹರ್ಷವರ್ಧನ್ 
1-2 ತಿಂಗಳಲ್ಲಿ ಪ್ರತಿ ದಿನ 10 ಲಕ್ಷ ಕೋವಿಡ್-19 ಟೆಸ್ಟ್: ಹರ್ಷವರ್ಧನ್
Published On :

ನವದೆಹಲಿ: 1-2 ತಿಂಗಳುಗಳಲ್ಲಿ ಪ್ರತಿ ದಿನ 10 ಲಕ್ಷ ಕೋವಿಡ್-19 ಸೋಂಕು ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ. 

ಭಾರತದಲ್ಲಿ ಈಗ ದಿನಂಪ್ರತಿ 5 ಲಕ್ಷ ಸೋಂಕು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಮುಂದಿನ ಒಂದು ಅಥವಾ ಎರಡು ತಿಂಗಳಲ್ಲಿ ಈ ಸಂಖ್ಯೆಯನ್ನು ದುಪ್ಪಟ್ಟು ಮಾಡುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಕೋವಿಡ್-19 ಗೆ ಸಂಬಂಧಿಸಿದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆ ತಂತ್ರಜ್ಞಾನಗಳ (ಸಿಎಸ್ಐಆರ್) ಸಂಗ್ರಹವನ್ನು ಬಿಡುಗಡೆ ಮಾಡಿ ಮಾತನಾಡಿರುವ ಹರ್ಷವರ್ಧನ್, ಕೋವಿಡ್-19 ನಿಂದ ಚೇತರಿಕೆ ಕಾಣುವವರ ಪ್ರಮಾಣ ಶೇ.64 ರಷ್ಟಿದ್ದು ವಿಶ್ವದಲ್ಲೇ ಅತ್ಯುತ್ತಮವಾದುದ್ದಾಗಿದೆ. ಇನ್ನು ಮರಣ ಪ್ರಮಾಣ ಕೇವಲ ಶೇ.2.2 ರಷ್ಟಿದೆ ಎಂದು ತಿಳಿಸಿದ್ದಾರೆ. 
ಕೋವಿಡ್-19 ನ್ನು ಎದುರಿಸುವುದಕ್ಕಾಗಿ ವೈದ್ಯಕೀಯ ಸಮುದಾಯದ ಜೊತೆಗೆ ಶ್ರಮಿಸುತ್ತಿರುವ ವೈಜ್ಞಾನಿಕ ಸಮುದಾಯವನ್ನೂ ಸಚಿವರು ಪ್ರಶಂಸಿದ್ದಾರೆ. 

ಬಹುತೇಕ ವೆಂಟಿಲೇಟರ್ ಗಳನ್ನು ದೇಶದಲ್ಲೇ ತಯಾರಿಸಲಾಗುತ್ತಿದೆ. ಭಾರತ ಹೈಡ್ರಾಕ್ಸಿಕ್ಲೋರೊಕ್ವಿನ್ ಔಷಧವನ್ನು 150 ದೇಶಗಳಿಗೆ ರಫ್ತು ಮಾಡುತ್ತಿದೆ. ಏಪ್ರಿಲ್ ನಲ್ಲಿ ದಿನವೊಂದಕ್ಕೆ 6,000 ಪರೀಕ್ಷೆಗಳಷ್ಟೇ ನಡೆಯುತ್ತಿತ್ತು. ಈಗ ದಿನವೊಂದಕ್ಕೆ 5 ಲಕ್ಷ ಸೋಂಕು ಪರೀಕ್ಷೆ ನಡೆಸಲಾಗುತ್ತಿದೆ ಎಂದು ಹರ್ಷವರ್ಧನ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.