ವಿಧಾನಮಂಡಲ ಅಧಿವೇಶನ ದಿನನಿಗದಿ ಬೆನ್ನಲ್ಲೇ ಕುದುರೆ ವ್ಯಾಪಾರದ ದರದಲ್ಲಿ ಏರಿಕೆ: ರಾಜಸ್ಥಾನ ಸಿಎಂ ಗೆಹ್ಲೋಟ್
ಆಗಸ್ಟ್ 14 ರಿಂದ ವಿಧಾನಸಭೆ ಅಧಿವೇಶನ ಪ್ರಾರಂಭವಾಗಲಿದೆ ಎಂದು ಘೋಷಿಸಿದ ನಂತರ ರಾಜ್ಯದಲ್ಲಿ 'ಕುದುರೆ ವ್ಯಾಪಾರದ ದರ' ಹೆಚ್ಚಾಗಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಜೈಪುರ್: ಆಗಸ್ಟ್ 14 ರಿಂದ ವಿಧಾನಸಭೆ ಅಧಿವೇಶನ ಪ್ರಾರಂಭವಾಗಲಿದೆ ಎಂದು ಘೋಷಿಸಿದ ನಂತರ ರಾಜ್ಯದಲ್ಲಿ 'ಕುದುರೆ ವ್ಯಾಪಾರದ ದರ' ಹೆಚ್ಚಾಗಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಕಳೆದ ರಾತ್ರಿ ವಿಧಾನಸಭೆ ಅಧಿವೇಶನ ದಿನಾಂಕ ಘೋಷಿಸಿದ ನಂತರ, ಕುದುರೆ ವ್ಯಾಪಾರದ ದರಗಳು ಹೆಚ್ಚಿದೆ. ಈ ಮೊದಲು ಮೊದಲ ಕಂತು 10 ಕೋಟಿ ರೂ. ಮತ್ತು ಎರಡನೆಯದು 15 ಕೋಟಿ ರೂ. ಇದ್ದಿತ್ತು. ಈಗ ಮತ್ತೆ ಏರಿಕೆಯಾಗಿದೆ, ಅಲ್ಲದೆ ಯಾರು ಕುದುರೆ ವ್ಯಾಪಾರ ಮಾಡುತ್ತಿದ್ದಾರೆಂದು ಎಲ್ಲರಿಗೂ ತಿಳಿದಿದೆ ಎಂದು ಗೆಹ್ಲೋಟ್ ಸುದ್ದಿಗಾರರಿಗೆ ತಿಳಿಸಿದರು.
ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರ ವಿರುದ್ಧ ಹೇಳಿಕೆ ನೀಡಿದ್ದನ್ನು ಗುರಿಯಾಗಿಸಿಕೊಂಡು, ಮಾಯಾವತಿ ಬಿಜೆಪಿಯ ಆಜ್ಞೆಯ ಮೇರೆಗೆ ವರ್ತಿಸಿದ್ದಾರೆ ಎಂದು ಗೆಹ್ಲೋಟ್ ಆರೋಪಿಸಿದರು. ಅದೇವೇಳೆ ಆಕೆಯ ಆರೋಪ ಸಮರ್ಥನೀಯವಲ್ಲ ಎಂದು ಗೆಹ್ಲೋಟ್ ಹೇಳಿದ್ದಾರೆ.
ಆಗಸ್ಟ್ 14 ರಿಂದ ಅಧಿವೇಶನ ನಡೆಸಲು ರಾಜ್ಯಪಾಲ ಕಲ್ರಾಜ್ ಮಿಶ್ರಾ ಒಪ್ಪಿಕೊಂಡಿದ್ದರಿಂದ ರಾಜಸ್ಥಾನ ವಿಧಾನಸಭೆ ಕಲಾಪದದ ಬಗೆಗಿನ ಗೊಂದಲಕ್ಕೆ ತೆರೆ ಬಿದ್ದಿದೆ.
ರಾಜಸ್ಥಾನ ವಿಧಾನಸಭೆ ಅಧಿವೇಶನ ಕರೆಯಲು ಅಶೋಕ್ ಗೆಹ್ಲೋಟ್ ಕ್ಯಾಬಿನೆಟ್ ರಾಜ್ಯಪಾಲರಿಗೆ ನಾಲ್ಕನೇ ಪ್ರಸ್ತಾವನೆಯನ್ನು ಕಳುಹಿಸಿದ ಒಂದೆರಡು ಗಂಟೆಗಳ ನಂತರ ರಾಜಭವನ ಪ್ರಕಟಣೆ ಬಂದಿದ್ದು, ಆಗಸ್ಟ್ 14 ಅನ್ನು ಹೊಸ ದಿನಾಂಕವೆಂದು ಉಲ್ಲೇಖಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


