ದೇಶ

ಅವಧಿಗೂ ಮುನ್ನ ಸಂಜಯ್ ದತ್ ಬಿಡುಗಡೆಯಾಗುತ್ತಾರೆ, ನನಗೇಕಿಲ್ಲ: ರಾಜೀವ್ ಹಂತಕ ಪೆರಿವಲನ್

ಪೆರಾರಿವಲನ್ ತನ್ನನ್ನು ಬಿಡುಗಡೆಗೊಳಿಸುವಂತೆ ಮುಂಬಯಿ ಹೈಕೋರ್ಟ್ ಮೊರೆ ಹೋಗಿದ್ದಾನೆ. ಅಕ್ರಮ ಶಸ್ತ್ರ ಕಾಯ್ದೆಯಡಿ ನಟ ಸಂಜಯ್ ದತ್ ಅವರನ್ನು ಹೇಗೆ ಬೇಗ ಬಿಡುಗಡೆಗೊಳಿಸಲಾಗಿದೆ ಎಂದು ಪ್ರಶ್ನಿಸಿದ್ದಾನೆ.

ಅವಧಿಗೂ ಮುನ್ನ ಸಂಜಯ್ ದತ್ ಬಿಡುಗಡೆಯಾಗುತ್ತಾರೆ, ನನಗೇಕಿಲ್ಲ: ರಾಜೀವ್ ಹಂತಕ ಪೆರಿವಲನ್
ಪೆರಾರಿವಲನ್
Published On :

ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಕಳೆದ 29 ವರ್ಷದಿಂದ ಜೈಲುವಾಸ ಅನುಭವಿಸುತ್ತಿದ್ದಾನೆ.

ಪೆರಾರಿವಲನ್ ತನ್ನನ್ನು ಬಿಡುಗಡೆಗೊಳಿಸುವಂತೆ ಮುಂಬಯಿ ಹೈಕೋರ್ಟ್  ಮೊರೆ ಹೋಗಿದ್ದಾನೆ. ಅಕ್ರಮ ಶಸ್ತ್ರ ಕಾಯ್ದೆಯಡಿ ನಟ ಸಂಜಯ್ ದತ್ ಅವರನ್ನು ಹೇಗೆ ಬೇಗ ಬಿಡುಗಡೆಗೊಳಿಸಲಾಗಿದೆ ಎಂದು ಪ್ರಶ್ನಿಸಿದ್ದಾನೆ.

ಆರ್ ಟಿ ಇ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದ ಪೆರಾರಿವಲನ್ ಸಂಜಯ್ ದತ್ ಬಿಡುಗಡೆ ಸಂಬಂಧ ನಡೆದ ಕಾನೂನು ಪ್ರಕ್ರಿಯೆ ಬಗ್ಗೆ ಮಾಹಿತಿ ಕೋರಿದ್ದ, ಹೀಗಾಗಿ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾನೆ.

ಸಂಜಯ್ ದತ್ ಮತ್ತು ಪೆರಾರಿವಲನ್ ಇಬ್ಬರನ್ನು ಶಸ್ತ್ರಾಸ್ತ್ರ ಕಾಯಿದೆಯಡಿ ಬಂಧಿಸಲಾಗಿತ್ತು. ಕೇಂದ್ರದ ಅನುಮತಿ ಪಡೆಯದೇ ಮಹಾರಾಷ್ಟ್ರ ಸರ್ಕಾರ ಸಂಜಯ್ ದತ್ ರನ್ನು ಬಿಡುಗಡೆ ಮಾಡಿತ್ತು, ಆದರೆ ಪೆರಾರಿವಲನ್  ಬಿಡುಗಡೆಗೆ ಕೇಂದ್ರ ಸರ್ಕಾರದ ಅನುಮತಿ ಇನ್ನೂ ಸಿಕ್ಕಿಲ್ಲ ಎಂದು ಕೆ ಶಿವಕುಮಾರ್ ಹೇಳಿದ್ದಾರೆ.

ಸಂಜಯ್ ದತ್ ಬಿಡುಗಡೆಗೆ ಸಂಬಂಧಿಸಿದ ದಾಖಲೆಗಳು ನಮಗೆ ಹೆಚ್ಚಿನ ಸ್ಪಷ್ಟತೆಯನ್ನು ನೀಡುತ್ತದೆ ಎಂದು ಅವರು ಹೇಳಿದರು.

ಯೆರಾವಾಡ ಸೆಂಟ್ರಲ್ ಜೈಲಿನಿಂದ ದತ್ ಬಿಡುಗಡೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಮತ್ತು ಪತ್ರವ್ಯವಹಾರ ಇತ್ಯಾದಿಗಳನ್ನು ಪೆರರಿವಾಲನ್ ಕೋರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.