ಲಾಕ್ ಡೌನ್ ಅವಧಿಯಲ್ಲಿ ದೇಶಾದ್ಯಂತ 18 ಲಕ್ಷ ಅರ್ಜಿಗಳು ದಾಖಲು: ನ್ಯಾಯಮೂರ್ತಿ ಚಂದ್ರಚೂಡ್
ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ದೇಶದಲ್ಲಿ ಹೇರಲಾಗಿದ್ದ ಲಾಕ್ ಡೌನ್ ಅವಧಿಯಲ್ಲಿ ದೇಶಾದ್ಯಂತ ಸುಮಾರು 18 ಲಕ್ಷ ಅರ್ಜಿಗಳು ಕೋರ್ಟ್ ಗಳಲ್ಲಿ ದಾಖಲಾಗಿವೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.

ಮುಂಬೈ: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ದೇಶದಲ್ಲಿ ಹೇರಲಾಗಿದ್ದ ಲಾಕ್ ಡೌನ್ ಅವಧಿಯಲ್ಲಿ ದೇಶಾದ್ಯಂತ ಸುಮಾರು 18 ಲಕ್ಷ ಅರ್ಜಿಗಳು ಕೋರ್ಟ್ ಗಳಲ್ಲಿ ದಾಖಲಾಗಿವೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.
ಶನಿವಾರ ನಾಸಿಕ್ ನಲ್ಲಿ ಮೊದಲ ಇ-ಗವರ್ನೆನ್ಸ್ ಕೇಂದ್ರದ ವರ್ಚುವಲ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲಾಕ್ ಡೌನ್ ಹೇರಲಾಗಿದ್ದ ಮಾರ್ಚ್ ನಿಂದ ಜುಲೈ ವರೆಗೂ ದೇಶಾದ್ಯಂತ ವಿವಿಧ ಕೋರ್ಟ್ ಗಳಲ್ಲಿ ಸುಮಾರು 18 ಲಕ್ಷ ಅರ್ಜಿಗಳು ದಾಖಲಾಗಿವೆ. ಮಾರ್ಚ್ 24ರಿಂದ ಜುಲೈ 24ರವೆರೆಗೂ ದೇಶಾದ್ಯಂತ 18,03,327 ಅರ್ಜಿಗಳು ದಾಖಲಾಗಿವೆ. ಈ ಪೈಕಿ 7,90,112 ಅರ್ಜಿಗಳ ವಿಲೇವಾರಿ ಮಾಡಲಾಗಿದೆ. ಇದೇ ಅವಧಿಯಲ್ಲಿ ಮಹಾರಾಷ್ಟ್ರದ ಕೋರ್ಟ್ ಗಳಲ್ಲಿ 2,22,431 ಅರ್ಜಿಗಳು ದಾಖಲಾಗಿದ್ದು, 61,986 ಪ್ರಕರಣಗಳನ್ನು ಕೊರೋನಾ ಸಾಂಕ್ರಾಮಿಕದ ನಡುವೆಯೂ ವಿಲೇವಾರಿ ಮಾಡಲಾಗಿದೆ ಎಂದು ಹೇಳಿದರು.
ಇದೇ ವೇಳೆ ಲಾಕ್ ಡೌನ್ ಸಂದರ್ಭದಲ್ಲಿ ಹಲವು ವರ್ಚುವಲ್ ಕೋರ್ಟ್ ಗಳನ್ನು ಆರಂಭಿಸಲಾಗಿದೆ. ತೀರಾ ಅಪರೂಪದ ಮತ್ತು ಪ್ರಮುಖ ಪ್ರಕರಣಗಳ ವಿಚಾರಣೆಗಳನ್ನು ನಡೆಸಲಾಗುತ್ತಿದೆ. ಕೋರ್ಟ್ ಗಳು ಸಂಪೂರ್ಣ ಮಟ್ಟದಲ್ಲಿ ಪುನಾರಂಭವಾಗುವವರೆಗೂ ಈ ವರ್ಚುವಲ್ ಕೋರ್ಟ್ ಗಳು ಮಹತ್ತರ ಪಾತ್ರವಹಿಸಲಿದೆ. ಲಾಕ್ಡೌನ್ ಸಂದರ್ಭದಲ್ಲಿ ನ್ಯಾಯದಾನ ವಿಳಂಬವಾಗಬಾರದು ಎಂಬ ಕಾರಣಕ್ಕೆ ವರ್ಚುವಲ್ ಕೋರ್ಟ್ ಗಳನ್ನು ಆರಂಭಿಸಲಾಗಿದೆ. ಆದರೆ ವರ್ಚುವಲ್ ಕೋರ್ಟ್ ಗಳೇ ಮುಕ್ತ ಕೋರ್ಟ್ ಗಳಿಗೆ ಎಂದಿಗೂ ಪರ್ಯಾಯವಾಗಲಾರದು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


