ಈ ವರ್ಷ ಅಮರನಾಥ ಯಾತ್ರೆ ರದ್ದು: ಅಮರನಾಥ್ ದೇವಾಲಯ ಮಂಡಳಿ ಆದೇಶ
ಪ್ರಸಕ್ತ ಸನ್ನಿವೇಶವನ್ನು ಹಿನ್ನೆಲೆಯಾಗಿಟ್ಟುಕೊಂಡು , ಶ್ರೀ ಅಮರನಾಥಜಿ ದೇವಾಲಯ ಮಂಡಳಿಯು ಈ ವರ್ಷದ ಅಮರನಾಥ ಯಾತ್ರೆಯನ್ನುರದ್ದುಗೊಳಿಸಿದೆ. ಈ ಹಿನ್ನೆಲೆಯಲ್ಲಿ 2020 ರ ಅಮರನಾಥ ಯಾತ್ರೆಯನ್ನು ರದ್ದುಗೊಳಿಸಿ ಮಂಡಳಿ ಆದೇಶ ಹೊರಡಿಸಿದೆ. ಯಾತ್ರೆ ರದ್ದತಿಯನ್ನು ಘೋಷಿಸಲು ಮಂಡಳಿ ವಿಷಾದ ವ್ಯಕ್ತಪಡಿಸಿದೆ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರದ ರಾಜಭವನ ಹೇಳಿದೆ.

ಪ್ರಸಕ್ತ ಸನ್ನಿವೇಶವನ್ನು ಹಿನ್ನೆಲೆಯಾಗಿಟ್ಟುಕೊಂಡು , ಅಮರನಾಥಜಿ ದೇವಾಲಯ ಮಂಡಳಿಯು ಈ ವರ್ಷದ ಅಮರನಾಥ ಯಾತ್ರೆಯನ್ನುರದ್ದುಗೊಳಿಸಿದೆ. ಈ ಹಿನ್ನೆಲೆಯಲ್ಲಿ 2020 ರ ಅಮರನಾಥ ಯಾತ್ರೆಯನ್ನು ರದ್ದುಗೊಳಿಸಿ ಮಂಡಳಿ ಆದೇಶ ಹೊರಡಿಸಿದೆ. ಯಾತ್ರೆ ರದ್ದತಿಯನ್ನು ಘೋಷಿಸಲು ಮಂಡಳಿ ವಿಷಾದ ವ್ಯಕ್ತಪಡಿಸಿದೆ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರದ ರಾಜಭವನ ಹೇಳಿದೆ.
ಧಾರ್ಮಿಕ ಭಾವನೆಗಳ ಘಾಸಿಯಾಗದಂತೆ ಮಂಡಳಿ ಬೆಳಿಗ್ಗೆ ಮತ್ತು ಸಂಜೆ ಆರತಿಯ ನೇರ ಪ್ರಸಾರ / ವರ್ಚುವಲ್ ದರ್ಶನವನ್ನು ಮುಂದುವರಿಸಲಿದೆ ಎಂದು ಅದು ಹೇಳಿದೆ..
ಈ ಹಿಂದೆ ನಡೆಸಿದ್ದಂತೆಯೇ ಸಾಂಪ್ರದಾಯಿಕ ಆಚರಣೆಗಳನ್ನು ಕೈಗೊಳ್ಳಲಾಗುತ್ತದೆ. ಖಾದಿ ಮುಬಾರಕ್ ಅವರಿಗೆ ಸರ್ಕಾರದಿಂದ ಅನುಕೂಲವಾಗಲಿದೆ ಎಂದು ರಾಜಭವನ ಹೇಳಿದೆ.
ಜುಲೈ 21 ರಂದು ಅಮರನಾಥ ಯಾತ್ರೆ ಆರಂಭವಾಗಲಿದೆ ಎಂದು ಕಳೆದ ಮಾಸದಲ್ಲಿ ಹೇಳಲಾಗಿತ್ತು. ಅಲ್ಲದೆ ಈ ಬಾರಿ ಕೇವಲ ಹದಿನೈದು ದಿನ ಮಾತ್ರ ಯಾತ್ರೆ ನಡೆಯಲಿದೆ ಎನ್ನಲಾಗಿತ್ತು, ಆದರೆ ಇದೀಗ ಯಾತ್ರೆ ರದ್ದಾಗಿದ್ದು ಭಕ್ತರು ಮನದಲ್ಲೇ ಅಮರನಾಥನನ್ನು ಸ್ಮರಿಸಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


