121 ವಿದೇಶಿ ತಬ್ಲಿಘಿಗಳಿಗೆ ತವರಿಗೆ ಮರಳಲು ಕೋರ್ಟ್ ಅನುಮತಿ
ಬಾಂಗ್ಲಾದೇಶದ 79 ತಬ್ಲಿಘಿಗಳು, ಕಿರ್ಗಿಜ್ ನ 42 ತಬ್ಲಿಘಿಗಳನ್ನು ಮರಳಿ ಅವರ ದೇಶಕ್ಕೆ ಹೋಗುವುದಕ್ಕೆ ದೆಹಲಿ ಕೋರ್ಟ್ ಜು.20 ರಂದು ಆದೇಶ ನೀಡಿದೆ.

ನವದೆಹಲಿ: ಬಾಂಗ್ಲಾದೇಶದ 79 ತಬ್ಲಿಘಿಗಳು, ಕಿರ್ಗಿಜ್ ನ 42 ತಬ್ಲಿಘಿಗಳನ್ನು ಮರಳಿ ಅವರ ದೇಶಕ್ಕೆ ಹೋಗುವುದಕ್ಕೆ ದೆಹಲಿ ಕೋರ್ಟ್ ಜು.20 ರಂದು ಆದೇಶ ನೀಡಿದೆ.
ಕೋವಿಡ್-19 ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಮಾರ್ಚ್ ನಲ್ಲಿ ವಿಧಿಸಿದ್ದ ನಿರ್ಬಂಧಗಳನ್ನು ಲೆಕ್ಕಿಸದೇ ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಜಗತ್ತಿನ ವಿವಿಧ ದೇಶಗಳಿಂದ ತಬ್ಲಿಘಿ ಜಮಾತ್ ಸದಸ್ಯರು ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ವೀಸಾ ನಿಯಮ ಉಲ್ಲಂಘನೆಗಾಗಿ ಪ್ರಕರಣ ದಾಖಲಿಸಲಾಗಿತ್ತು.
ಇತ್ತೀಚೆಗೆ ತಬ್ಲಿಘಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡು ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವುದಕ್ಕಾಗಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರಿಂದ ನ್ಯಾಯಾಲಯ ದಂಡ ವಿಧಿಸಿ ತಬ್ಲಿಘಿಗಳನ್ನು ವಾಪಸ್ ತಮ್ಮ ದೇಶಗಳಿಗೆ ತೆರಳಲು ಅನುಮತಿ ನೀಡಿದೆ.
121 ತಬ್ಲಿಘಿಗಳಿಗೆ ತಲಾ 5,00 ರೂಪಾಯಿ ದಂಡ ವಿಧಿಸಿರುವ ನ್ಯಾಯಾಲಯ ಬಿಡುಗಡೆಗೆ ಆದೇಶಿಸಿದೆ. ಆದರೆ ಮೂವರು ಬಾಂಗ್ಲಾದೇಶದ ತಬ್ಲಿಘಿಗಳು ಹಾಗೂ ಕಿರ್ಗಿಜ್ ನ 8 ತಬ್ಲಿಘಿಗಳು ನ್ಯಾಯಾಲಯ ನೀಡಿರುವ ಆದೇಶವನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


