ಕೋವಿಡ್-19 ಹೊಸ ಕೇಸ್ ಪತ್ತೆ: ಶ್ರೀಹರಿಕೋಟಾ ಲಾಕ್ ಡೌನ್
ಹೊಸದಾಗಿ ಕೋವಿಡ್-19 ಕೇಸ್ ಪತ್ತೆಯಾಗಿರುವುದರಿಂದ ಅತ್ಯವಶ್ಯಕ, ಮತ್ತು ತುರ್ತು ಸೇವೆಯನ್ನು ಹೊರತುಪಡಿಸಿದಂತೆಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಒಳಗಡೆ ಇರುವ ಎಲ್ಲಾ ಕಚೇರಿಗಳನ್ನು ಬಂದ್ ಮಾಡಲಾಗಿದೆ.

ಚೆನ್ನೈ: ಹೊಸದಾಗಿ ಕೋವಿಡ್-19 ಕೇಸ್ ಪತ್ತೆಯಾಗಿರುವುದರಿಂದ ಅತ್ಯವಶ್ಯಕ, ಮತ್ತು ತುರ್ತು ಸೇವೆಯನ್ನು ಹೊರತುಪಡಿಸಿದಂತೆ
ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಒಳಗಡೆ ಇರುವ ಎಲ್ಲಾ ಕಚೇರಿಗಳನ್ನು ಬಂದ್ ಮಾಡಲಾಗಿದೆ.
ಘನ ಪ್ರೊಪೆಲ್ಲಂಟ್ ಸ್ಪೇಸ್ ಬೂಸ್ಟರ್ ಪ್ಲಾಂಟ್ ನ (ಎಸ್ ಪಿಆರ್ ಒಬಿ ) ಮತ್ತೊಬ್ಬ ಉದ್ಯೋಗಿ ಮತ್ತು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್ಎಫ್) ಹೊಂದಿಕೊಂಡಂತ ಭದ್ರತಾ ಸಿಬ್ಬಂದಿಯೊಬ್ಬರಿಗೆ ಸೋಮವಾರ ಪಾಸಿಟಿವ್ ಕಂಡುಬಂದಿದೆ. ಈ ಹಿಂದೆ ಶಾರ್ ಹೌಸಿಂಗ್ ಕಾಲೋನಿಯಿಂದ ಐದು ಕೇಸ್ ಗಳು ವರದಿಯಾಗಿದ್ದವು.
ಪ್ರಕರಣಗಳು ಹೆಚ್ಚಾಗುವುದು ಕಂಡುಬರುತ್ತಿದ್ದಂತೆ ಇಸ್ರೋ ಶ್ರೀಹರಿಕೋಟಾವನ್ನು ಲಾಕ್ ಡೌನ್ ಮಾಡಿದ್ದು, ಕನಿಷ್ಠ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಲಾಗಿದೆ. ಬೆಂಗಳೂರಿನಲ್ಲಿರುವ ಕೇಂದ್ರ ಕಚೇರಿಯೊಂದಿಗೆ ಸಮಾಲೋಚಿಸಿದ ಬಳಿಕ ಎಸ್ ಡಿಎಸ್ ಸಿ ಶಾರ್ ನಿರ್ದೇಶಕರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.
ಏಪ್ರಿಲ್ ಕಳೆದ ವಾರದಿಂದ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಶ್ರೀಹರಿಕೋಟಾದಲ್ಲಿರುವ ಕಾರ್ಮಿಕರಲ್ಲಿಯೂ ಸೋಂಕಿನ
ಭೀತಿ ಕಾಡುತ್ತಿದೆ. ಮುಂದಿನ ಆದೇಶದವರೆಗೂ ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಅತ್ಯವಶ್ಯಕ ಸೇವೆ ವಿಭಾಗ ಕನಿಷ್ಠ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಆದೇಶ ಹೊರಡಿಸಲಾಗಿದೆ. ಅಗತ್ಯ ಸೇವೆ ಹೊರತುಪಡಿಸದಂತೆ ಎಲ್ಲಾ ವಿಭಾಗದ ನೌಕರರು ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ ಎಂದು ಹಿರಿಯ ಆಡಳಿತಾಧಿಕಾರಿ ಎ. ಧನಲಕ್ಷ್ಮಮ್ಮ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


