ದೇಶ

ಗಡಿಯಲ್ಲಿ ಚೀನಾ ತಂಟೆ: ಕ್ಷಿಪ್ರ ರಾಫೆಲ್ ನಿಯೋಜನೆ ಬಗ್ಗೆ  ಐಎಎಫ್ ಹಿರಿಯ ಅಧಿಕಾರಿಗಳ ಮಹತ್ವದ ಚರ್ಚೆ

ಭಾರತ- ಚೀನಾ ಗಡಿ ಪ್ರದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಈಶಾನ್ಯ ಲಡಾಖ್ ನ ಎಲ್ಎಸಿ ಬಳಿ ರಾಫೆಲ್ ನ ಕ್ಷಿಪ್ರ ಕಾರ್ಯಾಚರಣೆ ಸ್ಟೇಷನ್ ನ್ನುನ್ ಸ್ಥಾಪಿಸುವ ಸಂಬಂಧ ಐಎಎಫ್ ನ ಹಿರಿಯ ಅಧಿಕಾರಿಗಳು ಈ ವಾರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ.

ಗಡಿಯಲ್ಲಿ ಚೀನಾ ತಂಟೆ: ಕ್ಷಿಪ್ರ ರಾಫೆಲ್ ನಿಯೋಜನೆ ಬಗ್ಗೆ  ಐಎಎಫ್ ಹಿರಿಯ ಅಧಿಕಾರಿಗಳ ಮಹತ್ವದ ಚರ್ಚೆ
ರಫೇಲ್
Published On :

ನವದೆಹಲಿ: ಭಾರತ- ಚೀನಾ ಗಡಿ ಪ್ರದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಈಶಾನ್ಯ ಲಡಾಖ್ ನ  ಎಲ್ಎಸಿ ಬಳಿ ರಾಫೆಲ್ ನ ಕ್ಷಿಪ್ರ ಕಾರ್ಯಾಚರಣೆ ಸ್ಟೇಷನ್ ನ್ನುನ್ ಸ್ಥಾಪಿಸುವ ಸಂಬಂಧ ಐಎಎಫ್ ನ ಹಿರಿಯ ಅಧಿಕಾರಿಗಳು ಈ ವಾರ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ. 

ಜು.22 ರಿಂದ 2 ದಿನಗಳು ನಡೆಯಲಿರುವ ಈ ಸಭೆಯಲ್ಲಿ ಕಮಾಂಡರ್ಸ್ ಕಾನ್ಫರೆನ್ಸ್ ನಲ್ಲಿ ಭದ್ರತೆಗೆ ಸಂಬಂಧಿಸಿದ ಹಲವು ವಿಷಯಗಳು ಚರ್ಚೆಯಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಏರ್ ಚೀಫ್ ಮಾರ್ಷಲ್ ಆರ್ ಕೆಎಸ್ ಭದೌರಿಯಾ ತಮ್ಮ 7 ಕಮಾಂಡರ್-ಇನ್-ಚೀಫ್ ಗಳೊಂದಿಗೆ ಚೀನಾ ಗಡಿಯಲ್ಲಿನ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈ ವೇಳೆ ತಿಂಗಳಾಂತ್ಯಕ್ಕೆ ಬರಲಿರುವ ರಾಫೆಲ್ ಜೆಟ್ ಗಳ ನಿಯೋಜನೆಯ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ. 

ಈಗಾಗಲೇ ಅಡ್ವಾನ್ಸ್ಡ್ ಹಾಗೂ ಫಾರ್ವರ್ಡ್ ಬೇಸ್ ಗಳಲ್ಲಿ ಹಗಲಿರುಳು ಕಾರ್ಯಾಚರಣೆ ನಡೆಸುತ್ತಿರುವ ಮಿರಾಜ್ 2000, ಸುಖೋಯ್-30, ಮಿಗ್-29 ಫೈಟರ್ ಗಳನ್ನು ಭಾರತೀಯ ಸೇನೆ ನಿಯೋಜನೆ ಮಾಡಿದೆ. ಚೀನಾ ಗಡಿ ಭಾಗದಲ್ಲಿರುವ ಫಾರ್ವರ್ಡ್ ಬೇಸ್ ಗಳಲ್ಲಿ ಅತ್ಯಾಧುನಿಕ ಅಪಾಚೆ ಅಟಾಕ್ ಹೆಲಿಕಾಫ್ಟರ್ ಗಳನ್ನೂ ಸಹ ನಿಯೋಜನೆ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.