ದೇಶ

ಸಾಲುಮರದ ತಿಮ್ಮಕ್ಕನ ನೆನೆದ ಟೀಂ ಇಂಡಿಯಾ ಕ್ರಿಕೆಟಿಗ, ಕಾರಣ ಏನು ಗೊತ್ತಾ?

ಟೀಂ ಇಂಡಿಯಾದ ಕ್ರಿಕೆಟಿಗರೊಬ್ಬರು ಕರ್ನಾಟಕದ ಸಾಲುಮರದ ತಿಮ್ಮಕ್ಕರನ್ನು ನೆನೆದು ಟ್ವೀಟ್ ಮಾಡಿದ್ದು, ಈ ಟ್ವೀಟ್ ಇದೀಗ ವ್ಯಾಪಕ ವೈರಲ್ ಆಗಿದೆ.

ಸಾಲುಮರದ ತಿಮ್ಮಕ್ಕನ ನೆನೆದ ಟೀಂ ಇಂಡಿಯಾ ಕ್ರಿಕೆಟಿಗ, ಕಾರಣ ಏನು ಗೊತ್ತಾ?
ಸಾಲು ಮರದ ತಿಮ್ಮಕ್ಕ-ಹರ್ಭಜನ್ ಸಿಂಗ್
Published On :

ನವದೆಹಲಿ: ಟೀಂ ಇಂಡಿಯಾದ ಕ್ರಿಕೆಟಿಗರೊಬ್ಬರು ಕರ್ನಾಟಕದ ಸಾಲುಮರದ ತಿಮ್ಮಕ್ಕರನ್ನು ನೆನೆದು ಟ್ವೀಟ್ ಮಾಡಿದ್ದು, ಈ ಟ್ವೀಟ್ ಇದೀಗ ವ್ಯಾಪಕ ವೈರಲ್ ಆಗಿದೆ.

ಹೌದು.. ಟೀಂ ಇಂಡಿಯಾದ ಟರ್ಬೊನೇಟರ್ ಹರ್ಭಜನ್ ಸಿಂಗ್ ಮತ್ತೆ ಕರ್ನಾಟಕವನ್ನು ನೆನೆಪು ಮಾಡಿಕೊಂಡಿದ್ದು, ಸಾಲು ಮರದ ತಿಮ್ಮಕ್ಕ ಅವರ ಫೋಟೋವನ್ನು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿಕೊಂಡು, ‘ಇವರು ಇಲ್ಲಿಯವರೆಗೂ 73 ಸಾವಿರಕ್ಕೂ ಅಧಿಕ ಸಸಿಗಳನ್ನು ನೆಟ್ಟು ಅವುಗಳನ್ನು ಹೆಮ್ಮರವಾಗಿ ಬೆಳೆಸಿದ್ದಾರೆ. ಇವರ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ಕೇವಲ ಒಂದೇ ಒಂದು ಸಸಿಯನ್ನಾದರೂ ನಾವು ನೆಡೋಣ. ಧನ್ಯವಾದಗಳು ಅಜ್ಜಿ’ ಎಂದು ಹರ್ಭಜನ್​ ಟ್ವಿಟ್​ ಮಾಡಿದ್ದಾರೆ.

ಹೀಗೆ ಹರ್ಭಜನ್​ ತಿಮ್ಮಕ್ಕ ಅವರ ಫೋಟೋ ಹಾಕಿಕೊಳ್ಳುತ್ತಿದ್ದಂತೆ, ಸಾಕಷ್ಟು ಕನ್ನಡಿಗರು ಅವರ ಬಗ್ಗೆ ಟ್ವಿಟ್​ ಮಾಡುವ ಮೂಲಕವೇ ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಪದ್ಮಶ್ರೀ ಪ್ರಶಸ್ತಿ ಪಡೆದ ಹೆಮ್ಮೆಯ ಕನ್ನಡಿಗರು ಎಂದು ಕೆಲವರು ಕಮೆಂಟ್​ ಮಾಡಿದರೆ, ನಿಮ್ಮ ಈ ಒಂದು ಟ್ವಿಟ್​ನಿಂದ ಕರ್ನಾಟಕದ ತಿಮ್ಮಕ್ಕ ವಿಶ್ವಖ್ಯಾತಿ ಪಡೆದುಕೊಳ್ಳಲಿದ್ದಾರೆ. ಧನ್ಯವಾದಗಳು ಎಂದು ಪ್ರತಿಕ್ರಿಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.