ಪ್ರೀತಿ ಒಲ್ಲೆ ಎಂದ ಕಾಲೇಜು ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಭಗ್ನಪ್ರೇಮಿ!
ಪ್ರೀತಿಯನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ 20 ವರ್ಷದ ಯುವಕನೊಬ್ಬ 18 ವರ್ಷದ ಕಾಲೇಜು ವಿದ್ಯಾರ್ಥಿಗೆ ಇರಿದು ಬರ್ಬರ ರೀತಿಯಲ್ಲಿ ಹತ್ಯೆ ಮಾಡಿರುವ ಘಟನೆ ಇಲ್ಲಿನ ಪೆರೂರು ಬಳಿ ನಡೆದಿದೆ.

ಕೊಯಂಬತ್ತೂರು: ಪ್ರೀತಿಯನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ 20 ವರ್ಷದ ಯುವಕನೊಬ್ಬ 18 ವರ್ಷದ ಕಾಲೇಜು ವಿದ್ಯಾರ್ಥಿಗೆ ಇರಿದು ಬರ್ಬರ ರೀತಿಯಲ್ಲಿ ಹತ್ಯೆ ಮಾಡಿರುವ ಘಟನೆ ಇಲ್ಲಿನ ಪೆರೂರು ಬಳಿ ನಡೆದಿದೆ.
ಕೊಯಂಬತ್ತೂರಿನ ಪೆರೂರು ಬಳಿಯ ಅರುಮುಗಗೌಡನೂರುನಲ್ಲಿ ಶುಕ್ರವಾರ ರಾತ್ರಿ 10-30ರ ವೇಳೆಯಲ್ಲಿ ಈ ಘಟನೆ ನಡೆದಿದೆ.
ಯುವತಿ ಚಿಕಿತ್ಸೆಗೆ ಸ್ಪಂದಿಸದೆ ಕೊಯಂಬತ್ತೂರಿನ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿರುವುದಾಗಿ ಆಸ್ಪತ್ರೆಯ
ಅಧಿಕೃತ ಮೂಲಗಳು ಸ್ಪಷ್ಪಪಡಿಸಿವೆ. ಹೊಟ್ಟೆಗೆ ಹಲವು ಬಾರಿ ಇರಿತದಿಂದ ಗಾಯಗೊಂಡು ಯುವತಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪೆರೂರಿನ ತವಾತಿರು ಶಾಂತಲಿಂಗ ಅಡಿಗಲರ್ ಕಲಾ, ವಿಜ್ಞಾನ ಮತ್ತು ತಮಿಳು ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿ ಐಶ್ವರ್ಯ ಮೃತ ವಿದ್ಯಾರ್ಥಿನಿಯಾಗಿದ್ದಾರೆ. ಶಂಕಿತನನ್ನು ಸಿ. ರಾತೀಶ್ ಎನ್ನಲಾಗಿದೆ. ಮೋಟಾರ್ ವಿಂಡಿಂಗ್ ವಾರ್ಕ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಈತ ಅರುಮುಗಗೌಡನೂರುನ ಎಂಆರ್ ಗಾರ್ಡನ್ ನಿವಾಸಿಯಾಗಿದ್ದಾನೆ.ಆತನ ಪ್ರೀತಿಯನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಇರಿದು ಕೊಲೆ ಮಾಡಿದ್ದಾನೆ ಎಂದು ವರದಿಗಳಿಂದ ತಿಳಿದುಬಂದಿದೆ.
ಕೆಲ ತಿಂಗಳಿನಿಂದ ರಾತೀಶ್ ಪ್ರೀತಿಯಲ್ಲಿ ಬಿದ್ದಿರುವುದು ಯುವತಿಯ ಮನೆಯವರಿಗೆ ಗೊತ್ತಾಗಿ ಆತನೊಂದಿಗೆ ಸಂಬಂಧವನ್ನು
ಕಡಿದುಕೊಳ್ಳುವಂತೆ ಸೂಚಿಸಿದ್ದಾರೆ. ಕೂಡಲೇ ಆಕೆ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಾಳೆ. ಇದೇ ಕಾರಣಕ್ಕೆ ಆಕೆಗೆ ಇರಿದು ಆರೋಪಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ರಾತ್ರಿ ಐಶ್ವರ್ಯ ಮನೆಗೆ ಹೋದ ಶಂಕಿತ ಸಂಬಂಧವನ್ನು ಮುಂದುವರೆಸುವಂತೆ ಕೇಳಿದ್ದಾನೆ. ಈ ಮಧ್ಯೆ ಐಶ್ವರ್ಯ ತಂದೆ
ಶಕ್ತಿವೇಲು ಶಂಕಿತನಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಇದರಿಂದ ಆಕ್ರೋಶಗೊಂಡ ಶಂಕಿತ ರಾತೀಶ್ , ತಂದೆ ಹಾಗೂ ಮಗಳಿಗೆ ಚಾಕುವಿಂದ ಇರಿದು ಅಲ್ಲಿಂದ ಪರಾರಿಯಾಗಿದ್ದಾನೆ. ನಂತರ ಇಬ್ಬರನ್ನು ಕೊಯಂಬತ್ತೂರು ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆ ಇಂದು ಮೃತಪಟ್ಟಿದ್ದಾಳೆ.
ಈ ಮಧ್ಯೆ ರಾತೀಶ್ ವಿರುದ್ಧ ಪೆರೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


