ದೇಶ

ಏರ್‌ ಇಂಡಿಯಾದ ವೇತನ ರಹಿತ ಕಡ್ಡಾಯ ರಜೆ ಅನಿವಾರ್ಯ: ಕೇಂದ್ರ ಸಚಿವ ಪುರಿ ಸಮರ್ಥನೆ

ಏರ್‌ ಇಂಡಿಯಾದಲ್ಲಿ ವೆಚ್ಚ ಕಡಿತ ಅನಿವಾರ್ಯವಾಗಿದೆ ಎಂದು ಹೇಳುವ ಮೂಲಕ ಸಿಬ್ಬಂದಿಗಳ ವೇತನ ರಹಿತ ಕಡ್ಡಾಯ ರಜೆ ನೀಡುವ ಸಂಸ್ಥೆಯ ನಿರ್ಧಾರವನ್ನು ನಾಗರಿಕ ವಿಮಾನಯಾನ ಸಚಿವ ಹರ್ದೀಪ್‌ ಸಿಂಗ್‌ ಪುರಿ ಸಮರ್ಥಿಸಿಕೊಂಡಿದ್ದಾರೆ.

ಏರ್‌ ಇಂಡಿಯಾದ ವೇತನ ರಹಿತ ಕಡ್ಡಾಯ ರಜೆ ಅನಿವಾರ್ಯ: ಕೇಂದ್ರ ಸಚಿವ ಪುರಿ ಸಮರ್ಥನೆ
ಹರದೀಪ್ ಸಿಂಗ್ ಪುರಿ
Published On :

ನವದೆಹಲಿ: ಏರ್‌ ಇಂಡಿಯಾದಲ್ಲಿ ವೆಚ್ಚ ಕಡಿತ ಅನಿವಾರ್ಯವಾಗಿದೆ ಎಂದು ಹೇಳುವ ಮೂಲಕ ಸಿಬ್ಬಂದಿಗಳ ವೇತನ ರಹಿತ ಕಡ್ಡಾಯ ರಜೆ ನೀಡುವ ಸಂಸ್ಥೆಯ ನಿರ್ಧಾರವನ್ನು ನಾಗರಿಕ ವಿಮಾನಯಾನ ಸಚಿವ ಹರ್ದೀಪ್‌ ಸಿಂಗ್‌ ಪುರಿ ಸಮರ್ಥಿಸಿಕೊಂಡಿದ್ದಾರೆ.

ಈ ಬಗ್ಗೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಚಿವ ಹರ್ದೀಪ್‌ ಸಿಂಗ್‌ ಪುರಿ ಅವರು, 'ಪ್ರತಿ ವರ್ಷವೂ ಷೇರು ಮಾರಾಟ ಮಾಡುವ ಮೂಲಕ ₹ 500 ಕೋಟಿ ಅಥವಾ 600 ಕೋಟಿ ರೂ ಹೂಡಿಕೆ ಮಾಡುವುದು ಸಮರ್ಥನೀಯವಲ್ಲ’ ಎಂದು ಹೇಳಿದ್ದಾರೆ. ಇದೇ ವೇಳೆ ಟಿಎಂಸಿ ಸಂಸದ ಡರೆಕ್ ಒ ಬ್ರಯಾನ್ ಅವರ, ‘ವೇತನ ರಹಿತ ರಜೆ ಯೋಜನೆಯು ಕಾರ್ಮಿಕ ಕಾಯ್ದೆಯ ಉಲ್ಲಂಘನೆಯಾಗಿದ್ದು, ಉನ್ನತಾಧಿಕಾರಿಗಳನ್ನು ರಕ್ಷಿಸಲು ಬೇರೆ ಸಿಬ್ಬಂದಿಯನ್ನು ಬಲಿಕೊಡಲಾಗುತ್ತಿದೆ’ ಎಂಬ ಟೀಕೆಗೆ ಉತ್ತರಿಸಿದ ಸಚಿವರು, 'ಏರ್ ಇಂಡಿಯಾ ಸಂಸ್ಥೆಯು ಸರ್ಕಾರದಿಂದ ನೆರವು ಬಯಸಿದರೆ, ಅದನ್ನು ನೀಡಲು ಸದ್ಯಕ್ಕಂತೂ ಸಾಧ್ಯವಿಲ್ಲ. ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಸಮಾಜದ ಬೇರೆ ಬೇರೆ ವರ್ಗಗಳಿಗೆ ಪರಿಹಾರ ನೀಡುವ ಬೇಡಿಕೆಯನ್ನು ಪೂರೈಸಬೇಕಿದೆ’ ಎಂದು ಹೇಳುವ ಮೂಲಕ ಸರ್ಕಾರದಿಂದ ನೆರವು ಸಿಗುವುದಿಲ್ಲ ಎನ್ನುವುದನ್ನೂ ಅವರು ತಿಳಿಸಿದ್ದಾರೆ.

ನಷ್ಟದ ಸುಳಿಯಲ್ಲಿ ಸಿಲುಕಿರುವ ಏರ್ ಇಂಡಿಯಾ ಒಟ್ಟು ನಷ್ಟ  70 ಸಾವಿರ ಕೋಟಿ ರೂ ನಷ್ಟ ಅನುಭವಿಸಿದೆ.  2018–19ರಲ್ಲಿಯೇ 8,500 ಕೋಟಿ ರೂ ನಷ್ಟ ಅನುಭವಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.