ಡಿಜಿಟಲ್ ಇಂಡಿಯಾ ಅಭಿವೃದ್ಧಿಗಾಗಿ 75 ಸಾವಿರ ಕೋಟಿ ಹೂಡಿಕೆ: ಗೂಗಲ್ ಸಿಇಒ ಸುಂದರ್ ಪಿಚೈ
ಭಾರತದ ಡಿಜಿಟಲೀಕರಣಕ್ಕಾಗಿ ಬರೋಬ್ಬರಿ 75 ಸಾವಿರ ಕೋಟಿ ರುಪಾಯಿಯನ್ನು ಹೂಡಿಕೆ ಮಾಡುವುದಾಗಿ ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.

ನವದೆಹಲಿ: ಭಾರತದ ಡಿಜಿಟಲೀಕರಣಕ್ಕಾಗಿ ಬರೋಬ್ಬರಿ 75 ಸಾವಿರ ಕೋಟಿ ರುಪಾಯಿಯನ್ನು ಹೂಡಿಕೆ ಮಾಡುವುದಾಗಿ ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.
ಡಿಜಿಟಲ್ ಇಂಡಿಯಾ ಅಭಿವೃದ್ಧಿಗಾಗಿ ಮುಂದಿನ 5-7 ವರ್ಷಗಳ ಕಾಲ ಭಾರತದಲ್ಲಿ 75 ಸಾವಿರ ಕೋಟಿ ರುಪಾಯಿಯನ್ನು ಗೂಗಲ್ ಹೂಡಿಕೆ ಮಾಡಲಿದೆ.
ನಾವು ಭಾರತದ ಡಿಜಿಟಲ್ ಆರ್ಥಿಕತೆಯನ್ನು ವೇಗಗೊಳಿಸಲು ಸಹಾಯ ಮಾಡಲು 10 ಬಿಲಿಯನ್ ಡಾಲರ್ ಡಿಜಿಟಲೀಕರಣ ನಿಧಿಯನ್ನು ಘೋಷಿಸಿದ್ದೇವೆ. ಡಿಜಿಟಲ್ ಇಂಡಿಯಾಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಬೆಂಬಲಿಸುವುದಕ್ಕೆ ಹೆಮ್ಮೆಪಡುತ್ತೇವೆ ಎಂದು ಸುಂದರ್ ಪಿಚೈ ತಿಳಿಸಿದ್ದಾರೆ.
ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತು ಗೂಗಲ್ ಸಂಸ್ಧೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ್ ಪಿಚೈ ಜೊತೆ ವರ್ಚುವಲ್ ಸಂವಾದ ನಡೆಸಿದ್ದರು. ಭಾರತೀಯ ರೈತರು ಹಾಗೂ ಯುವ ಸಮುದಾಯದ ಬದುಕನ್ನು ಬದಲಿಸಲು ತಂತ್ರಜ್ಞಾನದ ಸಾಮರ್ಥ್ಯವನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ.
ಸುಂದರ್ ಪಿಚೈ ಅವರ ಜೊತೆಗಿನ ಸಂವಾದದ ಚಿತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


