ಐಸಿಎಸ್ಇ, ಐಎಸ್ ಸಿಯ 10, 12 ನೇ ತರಗತಿಗಳ ಫಲಿತಾಂಶ ಜುಲೈ 10 ರ ಮಧ್ಯಾಹ್ನ 3ಕ್ಕೆ
ಐಸಿಎಸ್ಇ ಹಾಗೂ ಐಎಸ್ ಸಿ ಪರೀಕ್ಷಾ ಫಲಿತಾಂಶ ಜು.10 ರಂದು ಮಧ್ಯಾಹ್ನ 3 ಗಂಟೆಗೆ ಪ್ರಕಟವಾಗಲಿದೆ.

ನವದೆಹಲಿ: ಐಸಿಎಸ್ಇ, ಐಎಸ್ ಸಿಯ 10-12ನೇ ತರಗತಿಗಳ ಪರೀಕ್ಷಾ ಫಲಿತಾಂಶ ಜು.10 ರಂದು ಮಧ್ಯಾಹ್ನ 3 ಗಂಟೆಗೆ ಪ್ರಕಟವಾಗಲಿದೆ.
ಐಸಿಎಸ್ಇ ಕೌನ್ಸಿಲ್ ನ ವೆಬ್ ಸೈಟ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದ್ದು ಫಲಿತಾಂಶವನ್ನು cisce.org ಹಾಗೂ results.cisce.org ವೆಬ್ ಸೈಟ್ ಗಳಲ್ಲಿ ಆನ್ ಲೈನ್ ನಲ್ಲಿ ಪ್ರಕಟವಾಗುತ್ತದೆ, ಫಲಿತಾಂಶಗಳನ್ನು ಕೌನ್ಸಿಲ್ ನ CAREERS ಪೋರ್ಟಲ್ ಮೂಲಕ, ಎಸ್ಎಂಎಸ್ ಮೂಲಕ ವೀಕ್ಷಿಸಬಹುದು ಎಂದು ತಿಳಿದುಬಂದಿದೆ.
ಸಿಐಎಸ್ ಸಿಇ, ಅಂಗಸಂಸ್ಥೆ ಶಾಲೆಗಳು ತಮ್ಮ ಶಾಲಾ ವಿದ್ಯಾರ್ಥಿಗಳ ಫಲಿತಾಂಶವನ್ನು ಯೂನೀಕ್ ಐಡಿ ಹಾಗೂ ಪಾಸ್ವರ್ಡ್ ಮೂಲಕ ಲಾಗ್ ಇನ್ ಆಗಿ ವೀಕ್ಷಿಸಬಹುದಾಗಿದೆ. ಮಾ.19-31 ವರೆಗೆ ನಡೆಯಬೇಕಿದ್ದ ಪರೀಕ್ಷೆಗಳನ್ನು ಕೊರೋನಾ ಹಿನ್ನೆಲೆಯಲ್ಲಿ ಐಸಿಎಸ್ಇ-ಐಎಸ್ ಸಿ ಮುಂದೂಡಿತ್ತು. ಜೂನ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದ್ದ ಕೇಂದ್ರ ಹಾಗೂ ಸಿಬಿಎಸ್ಇ ಜುಲೈ 1-15 ವರೆಗೆ ನಡೆಯಬೇಕಿದ್ದ 10-12 ನೇ ತರಗತಿಗಳ ಪರೀಕ್ಷೆಯನ್ನು ರದ್ದುಗೊಳಿಸಿರುವುದಾಗಿ ತಿಳಿಸಿತ್ತು. ಪರೀಕ್ಷೆಗಳು ರದ್ದುಗೊಂಡ ಪರಿಣಾಮ ಪರ್ಯಾಯ ಮೌಲ್ಯಮಾಪನ ಯೋಜನೆಯನ್ನು ಕಳೆದ ವಾರ ಘೋಷಿಸಲಾಗಿತ್ತು.
ಐಸಿಎಸ್ಇ, ಐಎಸ್ ಸಿ ಮಂಡಳಿ ಈ ವರೆಗೂ ನಡೆಸಿದ್ದ ಪರೀಕ್ಷೆಗಳ ಪೈಕಿ ಬೆಸ್ಟ್ ಮೂರು ಪರೀಕ್ಷೆಗಳ ಪರ್ಸೆಂಟೇಜ್ ನ್ನು ಪರಿಗಣಿಸಿ, ಆಂತರಿಕ ಮೌಲ್ಯಮಾಪನವನ್ನೂ ಪರಿಗಣಿಸಿ ಫಲಿತಾಂಶ ನೀಡಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


