ತಿಂಗಳಾಂತ್ಯದವರೆಗೆ ಪತ್ತೆಯಾದ ಕೋವಿಡ್ ಪ್ರಕರಣಗಳಲ್ಲಿ ಶೇ.70 ರಷ್ಟು ಬಂದಿದ್ದು 5 ರಾಜ್ಯಗಳಿಂದ!
ಲಾಕ್ ಡೌನ್ ನಿರ್ಬಂಧಗಳನ್ನು ತೆರವುಗೊಳಿಸಿ ಅನ್ ಲಾಕ್ 1.0 ಘೋಷಣೆ ಮಾಡಿದ ಬಳಿಕ ಜೂನ್ ತಿಂಗಳಾಂತ್ಯದವರೆಗೆ ಪತ್ತೆಯಾದ ಒಟ್ಟಾರೆ ಕೋವಿಡ್-19 ಪ್ರಕರಣಗಳ ಪೈಕಿ 5 ರಾಜ್ಯಗಳದ್ದು ಸಿಂಹಪಾಲು ಎಂಬುದು ಅಂಕಿ-ಅಂಶಗಳಿಂದ ತಿಳಿದುಬಂದಿದೆ.

ನವದೆಹಲಿ: ಲಾಕ್ ಡೌನ್ ನಿರ್ಬಂಧಗಳನ್ನು ತೆರವುಗೊಳಿಸಿ ಅನ್ ಲಾಕ್ 1.0 ಘೋಷಣೆ ಮಾಡಿದ ಬಳಿಕ ಜೂನ್ ತಿಂಗಳಾಂತ್ಯದವರೆಗೆ ಪತ್ತೆಯಾದ ಒಟ್ಟಾರೆ ಕೋವಿಡ್-19 ಪ್ರಕರಣಗಳ ಪೈಕಿ 5 ರಾಜ್ಯಗಳದ್ದು ಸಿಂಹಪಾಲು ಎಂಬುದು ಅಂಕಿ-ಅಂಶಗಳಿಂದ ತಿಳಿದುಬಂದಿದೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ಡಾಟಾ ವಿಶ್ಲೇಷಣೆಯ ಪ್ರಕಾರವಾಗಿ ಅನ್ ಲಾಕ್ 1.0 ಘೋಷಣೆಯಾದ ಬಳಿಕ ಜೂನ್ ತಿಂಗಳ 1 ರಂದು ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ತೆಲಂಗಾಣ, ಆಂಧ್ರಪ್ರದೇಶಗಳಲ್ಲಿ ದೇಶದ ಒಟ್ಟಾರೆ ಪ್ರಕರಣಗಳ ಪೈಕಿ ಶೇ.63 ರಷ್ಟು ಸಕ್ರಿಯ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದವು. ಅನ್ ಲಾಕ್-1 ರ ಅಂತ್ಯದ ವೇಳೆಗೆ ಈ ಪ್ರಮಾಣ ಶೇ.70ಕ್ಕೆ ಏರಿಕೆಯಾಗಿತ್ತು. ಜೂನ್ ತಿಂಗಳ ಅವಧಿಯಲ್ಲಿ ಈ 5 ರಾಜ್ಯಗಳಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ ದುಪ್ಪಟ್ಟು ಅಥವಾ ಅದಕ್ಕಿಂತ ಹೆಚ್ಚಾಗಿದೆ.
ಕಳೆದ ತಿಂಗಳು ತೆಲಂಗಾಣ- ಆಂಧ್ರಪ್ರದೇಶಗಳಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳು 7 ಪಟ್ಟು ಹೆಚ್ಚಾಗಿದ್ದರೆ, ತಮಿಳುನಾಡಿನಲ್ಲಿ 4 ಪಟ್ಟು ಹೆಚ್ಚಾಗಿದೆ. ಮತ್ತೊಂದು ಮಾದರಿಯ ಅಂಕಿ-ಅಂಶಗಳ ಪ್ರಕಾರ ತಿಂಗಳ ಎರಡನೇ ಭಾಗದಲ್ಲಿ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ದೆಹಲಿ ಹಾಗೂ ಆಂಧ್ರಪ್ರದೇಶಗಳಲ್ಲಿ ಸೋಂಕು ಪರೀಕ್ಷೆ ಹೆಚ್ಚು ಮಾಡಿಸಿದ್ದರಿಂದ ಹೆಚ್ಚಿನ ಪ್ರಕರಣಗಳು ವರದಿಯಾಗಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಜೂ.08 ರ ಅನ್-ಲಾಕ್ 1.0 ರ ನಂತರ ಅಲ್ಲಿ ದೇವಾಲಯಗಳು, ಶಾಪಿಂಗ್ ಮಾಲ್ ಗಳು, ರೆಸ್ಟೋರೆಂಟ್ ಗಳು, ಹೊಟೆಲ್ ಗಳನ್ನು ಪುನಃ ಪ್ರಾರಂಭಿಸಿದರ ನಂತರ ಪ್ರಕರಣಗಳು ಹೆಚ್ಚಾಗಿ ವರದಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


