ದೇಶ

ಉಗ್ರರ ಬೃಹತ್ ಅಡಗುದಾಣ ಧ್ವಂಸ ಮಾಡಿದ ಸೇನೆ, ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ!

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಭಾರಿ ಕಾರ್ಯಾಚರಣೆ ನಡೆಸಿದ್ದು, ರಜೌರಿಯಲ್ಲಿದ್ದ ಉಗ್ರರ ಬೃಹತ್ ಅಡಗುದಾಣವನ್ನು ಧ್ವಂಸ ಮಾಡಿ ಅಲ್ಲಿದ್ದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದೆ.

ಉಗ್ರರ ಬೃಹತ್ ಅಡಗುದಾಣ ಧ್ವಂಸ ಮಾಡಿದ ಸೇನೆ, ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ!
ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ
Published On :

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಭಾರಿ ಕಾರ್ಯಾಚರಣೆ ನಡೆಸಿದ್ದು, ರಜೌರಿಯಲ್ಲಿದ್ದ ಉಗ್ರರ ಬೃಹತ್ ಅಡಗುದಾಣವನ್ನು ಧ್ವಂಸ ಮಾಡಿ ಅಲ್ಲಿದ್ದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದೆ.

ಮಾರಕ ಕೊರೋನಾ ವೈರಸ್ ಅಟ್ಟಹಾಸದ ನಡುವೆಯೇ ಇತ್ತ ಗಡಿಯಲ್ಲಿ ಪಾಕಿಸ್ತಾನ ಮೂಲದ ಉಗ್ರರ ಉಪಟಳ ಕೂಡ ಮುಂದುವರೆದಿದ್ದು, ಇದಕ್ಕೆ ಭಾರತೀಯ ಸೇನೆ ಖಡಕ್ ತಿರುಗೇಟು ನೀಡಿದೆ. ಕಳೆದ ಕೆಲ ವಾರಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆಯನ್ನು ಸೇನೆ ಮುಂದುವರೆಸಿದ್ದು, ಇಂದು ರಜೌರಿಯಲ್ಲಿದ್ದ ಉಗ್ರರ ರಹಸ್ಯ ಅಡಗುದಾಣದ ಮೇಲೆ ದಾಳಿ ಮಾಡಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ. 

ಸ್ಖಳೀಯ ಪೊಲೀಸರು ಮತ್ತು ಸೇನೆಯ ರಾಷ್ಟ್ರೀಯ ಸಶಸ್ತ್ರ ದಳದ ಸಿಬ್ಬಂದಿ ಇಂದು ರಜೌರಿಯ ಥಾಣಾ ಮಂಡಿ ಪ್ರದೇಶದಲ್ಲಿನ ದರ್ದಾಸನ್ ಗ್ರಾಮದಲ್ಲಿನ ಉಗ್ರರ ಅಡಗುದಾಣ ಮೇಲೆ ದಾಳಿ ಮಾಡಿದ್ದಾರೆ.  ಈ ವೇಳೆ ಉಗ್ರರು ಹುದುಗಿಸಿಟ್ಟದ್ದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಇನ್ನು ಇದೇ ಜಾಗದಲ್ಲಿ ಚೀನಾ ನಿರ್ಮಿತ  ಪಿಸ್ತೂಲ್ ಗಳು, 2 ಬುಲೆಟ್ ಮ್ಯಾಗಜಿನ್ ಗಳು, ಬ್ಯಾರೆಲ್ ಗ್ರೆನೇಡ್ ಗಳು ಮತ್ತು ಲಾಂಚರ್ ಗಳು, 11 ರೈಫಲ್ ಗ್ರೆನೇಡ್ ಗಳು, ಎಕೆ 47 ಬುಲೆಟ್ ನ 14 ಮ್ಯಾಗಜಿನ್ ಗಳು (920), ಚೀನಾ ನಿರ್ಮಿತ ಹ್ಯಾಂಡ್ ಗ್ರೆನೇಡ್ ಗಳು ಪತ್ತೆಯಾಗಿವೆ ಎಂದು ಸೇನಾ ಮೂಲಗಳು ತಿಳಿಸಿವೆ. 

ಇದಲ್ಲದೆ ಐಇಡಿ ಸ್ಫೋಟಕಗಳ ತಯಾರಿಕೆಯಲ್ಲಿ ಬಳಸುವ ವಸ್ತುಗಳು, ಸ್ಫೋಟಕಗಳು, ವೈರಸ್ ಗಳು, ಬ್ಯಾಟರಿಗಳು ಕೂಡ ಲಭ್ಯವಾಗಿವೆ. ಪ್ರಸ್ತುತ ಈ ದಾಳಿಯಲ್ಲಿ ಯಾವುದೇ ಉಗ್ರರೂ ದೊರೆಯದೇ ಇದ್ದರೂ ಉಗ್ರರ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸೇನೆ ವಶಪಡಿಸಿಕೊಂಡಿವೆ. ಅಲ್ಲದೆ ಈ ಅಡಗುದಾಣವನ್ನು ಸೇನೆ ಧ್ವಂಸ ಮಾಡಿದೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.