ಸತಾನ್ಕುಲಂ ಕಸ್ಟಡಿ ಸಾವು: 5 ನೇ ಆರೋಪಿ ಮುಖ್ಯಪೇದೆ ಬಂಧನ
ತಮಿಳುನಾಡಿನ ತೂತ್ತುಕುಡಿಯ ತಂದೆ–ಮಗ (ಪಿ ಜಯರಾಜ್ ಮತ್ತು ಬೆನಿಕ್ಸ್) ಪೊಲೀಸರ ಕಸ್ಟಡಿಯಲ್ಲಿರುವಾಗಲೇ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 5ನೇ ಆರೋಪಿ ಮುಖ್ಯಪೇದೆ ಯನ್ನು ಬಂಧಿಸಿದ್ದಾರೆ.

ತೂತುಕುಡಿ: ತಮಿಳುನಾಡಿನ ತೂತ್ತುಕುಡಿಯ ತಂದೆ–ಮಗ (ಪಿ ಜಯರಾಜ್ ಮತ್ತು ಬೆನಿಕ್ಸ್) ಪೊಲೀಸರ ಕಸ್ಟಡಿಯಲ್ಲಿರುವಾಗಲೇ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 5ನೇ ಆರೋಪಿ ಮುಖ್ಯಪೇದೆ ಯನ್ನು ಬಂಧಿಸಿದ್ದಾರೆ.
5ನೇ ಆರೋಪಿ ಮುತ್ತುರಾಜ್ ರನ್ನು ಬಂಧಿಸಿರುವ ಪೊಲೀಸರು ತಕ್ಷಣವೇ ಸಿಬಿ-ಸಿಐಡಿ ವಶಕ್ಕೆ ನೀಡಲಿದ್ದಾರೆ ಎಂದು ತೂತುಕುಡಿ ಎಸ್ ಪಿ ಜೆಯಕುಮಾರ್ ತಿಳಿಸಿದ್ದಾರೆ. ಮೂರು ದಿನಗಳ ಸುದೀರ್ಘ ಶೋಧ ಕಾರ್ಯಾಚರಣೆ ನಂತರ ಆರೋಪಿ ಸಿಕ್ಕಿಬಿದ್ದಿದ್ದಾನೆ. ಕುಲತ್ತೂರಿನ ಪೂಸನೂರ್ ನ ಯಾವುದೋ ಕುಗ್ರಾಮದಲ್ಲಿ ಆರೋಪಿ ತಲೆ ಮರೆಸಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.
ಇದುವರೆಗೆ ಎಸ್‌ಐ ರಘು ಗಣೇಶ್, ಇಬ್ಬರು ಕಾನ್ಸ್ ಟೇಬಲ್ ಸೇರಿದಂತೆ ಒಟ್ಟು ನಾಲ್ವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಸಬ್ ಇನ್‌ಸ್ಪೆಕ್ಟರ್ ಬಾಲಕೃಷ್ಣನ್, ಕಾನ್‌ಸ್ಟೇಬಲ್‌ಗಳಾದ ಮುತ್ತುರಾಜ್ ಮತ್ತು ಮುರುಗನ್ ಬಂಧನಕ್ಕೊಳಗಾದ ಇತರರು. ಎಸ್‌ಐ ರಘು ಗಣೇಶ್‌ರನ್ನು ಬಂಧಿಸಿಲಾಗಿದೆ ಎಂಬ ಸುದ್ದಿ ತಿಳಿಯುತ್ತಲೇ ಸತಾನ್ಕುಲಂ ನ ನಿವಾಸಿಗಳು ಸಂಭ್ರಮಾಚರಣೆ ಮಾಡಿದರು. ಪಠಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


