ತಂಗಿಯ ಮೇಲಿನ ಅತ್ಯಾಚಾರಕ್ಕೆ ಸೇಡು: ತಿಹಾರ್ ಜೈಲಿನಲ್ಲಿ ಸಹ ಖೈದಿಯ ಹತ್ಯೆ
ತಂಗಿಯ ಮೇಲಿನ ಅತ್ಯಾಚಾರಕ್ಕೆ ಸೇಡು ತೀರಿಸಿಕೊಳ್ಳಲು ದೆಹಲಿಯ ತಿಹಾರ್ ಜೈಲಿನಲ್ಲಿದ್ದ ಖೈದಿ ತನ್ನ ಸಹ ಖೈದಿಯನ್ನು ಹತ್ಯೆ ಮಾಡಿದ್ದಾನೆ.

ನವದೆಹಲಿ: ತಂಗಿಯ ಮೇಲಿನ ಅತ್ಯಾಚಾರಕ್ಕೆ ಸೇಡು ತೀರಿಸಿಕೊಳ್ಳಲು ದೆಹಲಿಯ ತಿಹಾರ್ ಜೈಲಿನಲ್ಲಿದ್ದ ಖೈದಿ ತನ್ನ ಸಹ ಖೈದಿಯನ್ನು ಹತ್ಯೆ ಮಾಡಿದ್ದಾನೆ.
ಜೂ.29 ರಂದು ತಿಹಾರ್ ಕೇಂದ್ರ ಜೈಲ್ ನಲ್ಲಿ 28 ವರ್ಷದ ಮೆಹ್ತಾಬ್ ನ್ನು 22 ವರ್ಷದ ಜಾಕಿರ್ ಎಂಬಾತ ಇರಿದು ಹತ್ಯೆ ಮಾಡಿದ್ದಾನೆ. ಜಾಕಿರ್ ನ್ನು ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. "ತಾನೇ ಮಾಡಿದ ಮೆಟಲ್ ತುಂಡಿನ ಚೂರಿಯಿಂದ ಇರಿದು ಜಾಕಿರ್ ಮೆಹ್ತಾಬ್ ನನ್ನು ಹತ್ಯೆ ಮಾಡಿದ್ದಾನೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಜಾಕಿರ್ ನ ಅಪ್ರಾಪ್ತ ತಂಗಿಯ ಮೇಲೆ ಅತ್ಯಾಚಾರವೆಸಗಿದ್ದ ಪ್ರಕರಣದ ಆರೋಪಿಯಾಗಿದ್ದ ಮೆಹ್ತಾಬ್ ವಿರುದ್ಧ ಐಪಿಸಿ ಸೆಕ್ಷನ್ 376D, 328, 363, 342, 120B ಅಡಿಯಲ್ಲಿ ಹಾಗೂ ಪೋಸ್ಕೋ ಕಾಯ್ದೆಯ ಸೆಕ್ಷನ್ 4 ಅಡಿಯಲ್ಲಿ ಅಂಬೇಡ್ಕರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಜಾಕಿರ್ ಹಾಗೂ ಆತನ ಸಹ ಖೈದಿಗಳ ನಡುವೆ ಸಂಘರ್ಷ ಉಂಟಾಗಿದ್ದ ಕಾರಣ ಆತನನ್ನು ಜೈಲ್ ನಂಬರ್ 8 ರಿಂದ ಗ್ರೌಂಡ್ ಫ್ಲೋರ್ ನಲ್ಲಿದ್ದ ವಾರ್ಡ್ ನಂ.04 ಕ್ಕೆ ಸ್ಥಳಾಂತರಿಸಲಾಗಿತ್ತು. ಮೊದಲ ಮಹಡಿಯ ವಾರ್ಡ್ 4 ರಲ್ಲಿ ಮೆಹ್ತಾಬ್ ಇದ್ದ. ಪ್ರಾರ್ಥನೆಗಾಗಿ ಎಲ್ಲಾ ಖೈದಿಗಳು ಜೂ29 ರಂದು ಬೆಳಿಗ್ಗೆ ಕೊಠಡಿಗಳಿಂದ ಹೊರಗಿದ್ದಾಗ ಜಾಕಿರ್ ಮೊದಲ ಮಹಡಿಯ ವಾರ್ಡ್ 4 ಕ್ಕೆ ತೆರಳಿ ಮೆಹ್ತಾಬ್ ನನ್ನು ಇರಿದು ಹತ್ಯೆ ಮಾಡಿದ್ದಾನೆ. ಜಾಕಿರ್ ವಿರುದ್ಧ ಐಪಿಸಿ ಸೆಕ್ಷನ್ 302 (ಹತ್ಯೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


