ದೇಶ

ಮಲೇಷಿಯಾದಲ್ಲಿ ಕೊರೊನಾ ವೈರಸ್ ನಿಂದ ಭಾರತೀಯ ಸಾವು

ಚೈನಾದಲ್ಲಿ ವ್ಯಾಪಕವಾಗಿ ಹಬ್ಬಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಕಾಡುತ್ತಿರುವ ಮಾರಣಾಂತಿಕ ಕೊರೋನಾ ವೈರಸ್ ಸೋಂಕಿಗೆ ಭಾರತೀಯನೊಬ್ಬ ಮಲೇಷಿಯಾದಲ್ಲಿ ಮೃತಪಟ್ಟಿದ್ದಾರೆ.

ಮಲೇಷಿಯಾದಲ್ಲಿ ಕೊರೊನಾ ವೈರಸ್ ನಿಂದ ಭಾರತೀಯ ಸಾವು
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಚೈನಾದಲ್ಲಿ ವ್ಯಾಪಕವಾಗಿ ಹಬ್ಬಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಕಾಡುತ್ತಿರುವ ಮಾರಣಾಂತಿಕ  ಕೊರೋನಾ ವೈರಸ್ ಸೋಂಕಿಗೆ ಭಾರತೀಯನೊಬ್ಬ ಮಲೇಷಿಯಾದಲ್ಲಿ ಮೃತಪಟ್ಟಿದ್ದಾರೆ.

ಭಾರತದ ತ್ರಿಪುರಾ ರಾಜ್ಯದ ವ್ಯಕ್ತಿಯೊಬ್ಬರು ಮಲೇಷ್ಯಾದ ಆಸ್ಪತ್ರೆಯಲ್ಲಿ ಕರೋನ ವೈರಸ್ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆಯುವಾಗ ಸಾವನ್ನಪ್ಪಿದ್ದಾರೆ. 

ತ್ರಿಪುರದ ಪೂರ್ತಾಲ್  ರಾಜ್‌ ನಗರ ಗ್ರಾಮದ ಮನೀರ್ ಹುಸೇನ್,  ೨೦೧೮ ರಲ್ಲಿ  ರೆಸ್ಟೋರೆಂಟ್‌ನಲ್ಲಿ ಉದ್ಯೋಗ ಮಾಡಲು  ಮಲೇಷಿಯಾಗೆ ಪ್ರಯಾಣ ಬೆಳೆಸಿದ್ದರು. ಮಲೇಷ್ಯಾದಲ್ಲಿ ಕರೊನಾ ವೈರಸ್ ಸೋಂಕಿಗೆ ಒಳಗಾಗಿ ಮೊಮ್ಮಗ ಮನೀರ್ ಹುಸೇನ್  ಮೃತಪಟ್ಟಿದ್ದಾನೆ ಎಂದು ಅಲ್ಲಿನ ಅಧಿಕಾರಿಗಳು ತಮಗೆ  ತಿಳಿಸಿದ್ದಾರೆ ಎಂದು ಆತನ ಅಜ್ಜ ಅಬ್ದುಲ್ ರಹೀಮ್ ಹೇಳಿದ್ದಾರೆ. 

ಮಲೇಷ್ಯಾದಲ್ಲಿ ಉದ್ಯೋಗ  ಹುಡುಕಿಕೊಂಡು ಎರಡು ವರ್ಷದ ಹಿಂದೆ ತೆರಳಿದ್ದ ೨೩ ವರ್ಷದ ಮೊಮ್ಮಗ ಕರೋನವೈರಸ್‌ನಿಂದ ಮೃತಪಟ್ಟಿದ್ದಾನೆ ಎಂದು ಅವರ ಅಜ್ಜ ರಹೀಮ್ ತಿಳಿಸಿದ್ದಾರೆ.

ತನ್ನ ಮೊಮ್ಮಗನ  ಮೃತ ದೇಹವನ್ನು ಸ್ವದೇಶಕ್ಕೆ  ರವಾನಿಸಬೇಕೆಂದು ಮಲೇಷಿಯಾ  ಅಧಿಕಾರಿಗಳಿಗೆ ಕೋರಿದ್ದಾರೆ. ಚೀನಾದ ವುಹಾನ್‌ನಲ್ಲಿ ಈಗಾಗಲೇ ೧೭೦ ಜನರು  ಭಯಾನಕ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.