ದೇಶ

ವಿಮಾನದಲ್ಲಿ ಅರ್ನಬ್ ಗೋಸ್ವಾಮಿಗೆ ತರಾಟೆ, ಕಾಮಿಡಿಯನ್ ಕುನಾಲ್ ಕಾಮ್ರಾಗೆ 6 ತಿಂಗಳ ಪ್ರಯಾಣ ನಿರ್ಬಂಧ

ವಿಮಾನದಲ್ಲಿ ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರನ್ನು ಇಂಡಿಗೋ, ಏರ್ ಇಂಡಿಯಾ ಹಾಗೂ ಸ್ಪೈಸ್ ಜೆಟ್ ವಿಮಾನ ಸಂಸ್ಥೆ 6 ತಿಂಗಳುಗಳ ಕಾಲ ಪ್ರಯಾಣ ನಿರ್ಬಂಧ ವಿಧಿಸಿವೆ.

ವಿಮಾನದಲ್ಲಿ ಅರ್ನಬ್ ಗೋಸ್ವಾಮಿಗೆ ತರಾಟೆ, ಕಾಮಿಡಿಯನ್ ಕುನಾಲ್ ಕಾಮ್ರಾಗೆ 6 ತಿಂಗಳ ಪ್ರಯಾಣ ನಿರ್ಬಂಧ
ಕುನಾಲ್ ಕಾಮ್ರಾ
Published On :

ನವದೆಹಲಿ: ವಿಮಾನದಲ್ಲಿ ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರನ್ನು ಇಂಡಿಗೋ, ಏರ್ ಇಂಡಿಯಾ ಹಾಗೂ ಸ್ಪೈಸ್ ಜೆಟ್ ವಿಮಾನ ಸಂಸ್ಥೆ 6 ತಿಂಗಳುಗಳ ಕಾಲ ಪ್ರಯಾಣ ನಿರ್ಬಂಧ ವಿಧಿಸಿವೆ.

ಇತ್ತೀಚಿಗೆ ಮುಂಬೈನಿಂದ ಲಖನೌಗೆ ವಿಮಾನದಲ್ಲಿ ತೆರಳುತ್ತಿದ್ದ ವೇಳೆ ಕುನಾಲ್ ಕಾಮ್ರಾ ಅವರು ಅರ್ನಬ್‌ ಗೋಸ್ವಾಮಿ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಅರ್ನಬ್ ಹಾಸ್ಯ ಕಲಾವಿದನ ಯಾವುದೇ ಪ್ರಶ್ನೆಗೂ ಉತ್ತರಿಸದೆ ಮೌನವಾಗಿದ್ದರು. ಆದರೆ, ಕಾಮ್ರಾ ಮತ್ತಷ್ಟು ಪ್ರಶ್ನೆಗಳನ್ನು ಕೇಳಿದ್ದರು. ಇದರ ವಿಡಿಯೊ ಮಾಡಿದ್ದ ಕಾಮ್ರಾ ಟ್ವೀಟ್ ಕೂಡ ಮಾಡಿದ್ದರು. ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.

ಕಾಮ್ರಾ ಅವರು ಅರ್ನಬ್ ಗೆ ನೀವು ಪತ್ರಕರ್ತರೋ ಅಥವಾ ಹೇಡಿಯೋ? ನೀವು ಸರ್ಕಾರದ ವಕ್ತಾರರಂತೆ ವರ್ತಿಸುತ್ತಿರುವ ನೀವು ನೈಜ ಪತ್ರಕರ್ತರೇ? ಎಂದು ಪ್ರಶ್ನಿಸಿದ್ದರು.

ವಿಮಾನದಲ್ಲಿ ವಿಡಿಯೋ ಮಾಡಿ ಅರ್ನಬ್ ಗೋಸ್ವಾಮಿ ಅವರನ್ನು ಹೀಯಾಳಿಸಿದ ಕುನಾಲ್ ಕಾಮ್ರಾ ಅವರಿಗೆ ವಿಮಾನಯಾನ ಸಂಸ್ಥೆಗಳು ನಿರ್ಬಂಧ ಹೇರಿವೆ.

ಕುನಾಲ್ ಕಾಮ್ರಾ ಅವರ ವಿಮಾನ ಪ್ರಯಾಣಕ್ಕೆ 6 ತಿಂಗಳ ಅವಧಿಗೆ ನಿರ್ಬಂಧ ಹೇರುತ್ತಿದ್ದೇವೆ. ಪ್ರಯಾಣದ ವೇಳೆ ಅವರು ತೋರಿರುವ ವರ್ತನೆ ಸ್ವೀಕಾರಾರ್ಹವಲ್ಲ’ ಎಂದು ವಿಮಾನಯಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನು ತಮ್ಮ ಮೇಲೆ ಇಂಡಿಗೊ ವಿಧಿಸಿರುವ ನಿರ್ಬಂಧವನ್ನು ವ್ಯಂಗ್ಯ ಮಾಡಿರುವ ಕಾಮ್ರಾ, ‘ಆರು ತಿಂಗಳ ಕಾಲ ಅಮಾನತು ಮಾಡಿದ್ದಕ್ಕೆ ಧನ್ಯವಾದಗಳು ಇಂಡಿಗೊ... ಮೋದಿ ಜೀ ಅವರು ಏರ್ ಇಂಡಿಯಾವನ್ನು ಶಾಶ್ವತವಾಗಿ ಅಮಾನತುಗೊಳಿಸುತ್ತಿರಬಹುದು’ ಎಂದು ಟ್ವೀಟ್ ಮಾಡಿದ್ದಾರೆ.

ಬಲ ಪಂಥಿಯರು ಗೋಲಿ ಮಾರೊ ಸಾಲೋನ್ ಕೋ ... ಎಂದರೂ ಅವರು ಉದಾರವಾದಿಗಳು - ಆದರೆ ನಾವು ವಿಮಾನಗಳಲ್ಲಿ ಜನರಿಗೆ ತೊಂದರೆ ಕೊಡಬಾರದು ಮತ್ತು ವ್ಯಕ್ತಿಗಳ ಖಾಸಗಿ ಜಾಗವನ್ನು ಗೌರವಿಸಬೇಕು". ಎಂದು ಕಾಮ್ರಾ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.