ಗಣರಾಜ್ಯೋತ್ಸವ: ಗೂಗಲ್‌ನಿಂದ ವಿಶಿಷ್ಟ ಡೂಡಲ್ ಮೂಲಕ ಆಚರಣೆ
ಭಾರತದ 71ನೇ ಗಣರಾಜ್ಯೋತ್ಸವವನ್ನು ಗೂಗಲ್, ಅತ್ಯಂತ ವಿಶಿಷ್ಟವಾದ ಡೂಡಲ್‌ನೊಂದಿಗೆ ಆಚರಿಸಿದ್ದು, ಏಷ್ಯಾದ ವೈವಿಧ್ಯಮಯ ಉಪಖಂಡವನ್ನು ವ್ಯಾಪಿಸಿರುವ ಮತ್ತು ಒಂದುಗೂಡಿಸುವ ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಿದೆ.

ನವದೆಹಲಿ: ಭಾರತದ 71ನೇ ಗಣರಾಜ್ಯೋತ್ಸವವನ್ನು ಗೂಗಲ್, ಅತ್ಯಂತ ವಿಶಿಷ್ಟವಾದ ಡೂಡಲ್‌ನೊಂದಿಗೆ ಆಚರಿಸಿದ್ದು, ಏಷ್ಯಾದ ವೈವಿಧ್ಯಮಯ ಉಪಖಂಡವನ್ನು ವ್ಯಾಪಿಸಿರುವ ಮತ್ತು ಒಂದುಗೂಡಿಸುವ ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಿದೆ.
ಈ ವರ್ಷದ ಡೂಡಲ್ ಅನ್ನು ಸಿಂಗಾಪುರ ಮೂಲದ ಅತಿಥಿ ಕಲಾವಿದ ಮೆರೂ ಸೇಠ್ ರಚಿಸಿದ್ದಾರೆ. ವಿಶ್ವಪ್ರಸಿದ್ಧ ಹೆಗ್ಗುರುತುಗಳಾದ ತಾಜ್ ಮಹಲ್, ಇಂಡಿಯಾ ಗೇಟ್, ರಾಷ್ಟ್ರೀಯ ಪಕ್ಷಿ (ಭಾರತೀಯ ನವಿಲು), ಶಾಸ್ತ್ರೀಯ ಕಲೆಗಳು, ಜವಳಿ ಮತ್ತು ನೃತ್ಯಗಳು ಮುಂತಾದವುಗಳನ್ನು ಒಳಗೊಂಡಂತೆ ವಿಭಿನ್ನತೆಯಲ್ಲಿ ಏಕತೆಯನ್ನು, ಸಾಮರಸ್ಯವನ್ನು ಪ್ರದರ್ಶಿಸುವ ಮಾದರಿಯಲ್ಲಿ ಡೂಡಲ್ ಅನ್ನು ರಚಿಸಲಾಗಿದೆ.
ಇಂದು ದೇಶಾದ್ಯಂತ 71ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ದೇಶದೆಲ್ಲೆಡೆ ತ್ರಿವರ್ಣ ಧ್ವಜವನ್ನು ಹಾರಿಸಿ ಗಣರಾಜ್ಯೋತ್ಸವದ ಆಚರಣೆ ಮಾಡಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


