ಯುರೋಪಿನ ಎಲ್ಲಾ ಬಾಹ್ಯಾಕಾಶ ಅಧ್ಯಯನಗಳಿಗೆ ಭಾರತದ ಪ್ರಾಚೀನ ಗ್ರಂಥ'ಸೂರ್ಯ ಸಿದ್ಧಾಂತ' ಆಧಾರ: ಕೇರಳ ರಾಜ್ಯಪಾಲ
ಪ್ರಾಚೀನ ಭಾರತೀಯ ಗ್ರಂಥ 'ಸೂರ್ಯ ಸಿದ್ಧಾಂತ' ಯುರೋಪಿನ ಎಲ್ಲಾ ಬಾಹ್ಯಾಕಾಶ ಅಧ್ಯಯನಗಳಿಗೆ ಆಧಾರವಾಗಿದೆ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.

ತಿರುವನಂತಪುರಂ: ಪ್ರಾಚೀನ ಭಾರತೀಯ ಗ್ರಂಥ 'ಸೂರ್ಯ ಸಿದ್ಧಾಂತ' ಯುರೋಪಿನ ಎಲ್ಲಾ ಬಾಹ್ಯಾಕಾಶ ಅಧ್ಯಯನಗಳಿಗೆ ಆಧಾರವಾಗಿದೆ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.
ಸಾಂಪ್ರದಾಯಿಕ ಭಾರತೀಯ ವಿಜ್ಞಾನವನ್ನು ಪುರಾಣದ ರೂಪದಲ್ಲಿ ದೇಶವಾಸಿಗಳ ಮನಸ್ಸಿನಲ್ಲಿ ಇಳಿಸಲಾಗಿದೆ ಎಂದು ಅವರು ಹೇಳಿದರು.
ಶುಕ್ರವಾರ ತಿರುವನಂತಪುರಂನಲ್ಲಿ ಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಅವರಿಗೆ ಶ್ರೀ ಚಿತಿರಾ ತಿರುನಾಳ್ ಪ್ರಶಸ್ತಿ ಪ್ರದಾನ ಮಾಡಿದ ನಂತರ ರಾಜ್ಯಪಾಲರು ಮಾತನಾಡುತ್ತಿದ್ದರು.
"ಇತ್ತೀಚಿನ ವರ್ಷಗಳಲ್ಲಿ ಣಾವು ನಮ್ಮ ನೀತಿಯೊಡನೆ ಪರಿಚಯವಿಲ್ಲದವರಾಗಿಬಿಟ್ಟಿದ್ದೇವೆ.ಇದರ ಫಲವಾಗಿ ನಮ್ಮ ಪುಸ್ತಕಗಳಲ್ಲಿನ ವೈಜ್ಞಾನಿಕ ಉಲ್ಲೇಖಗಳು ನಮ್ಮ ಮನಸ್ಸಿನಲ್ಲಿರುವ ಪುರಾಣಕಥೆಗಳಾಗಿ ಮಾರ್ಪಡಾಗಿದೆ."
'ಸೂರ್ಯ ಸಿದ್ಧಾಂತ' ವನ್ನು ಬಾಗ್ದಾದ್‌ನ ಅಲ್-ಮನ್ಸೂರ್ ನ್ಯಾಯಾಲಯದ ಮುಂದೆ ಇಡಲಾಗಿತ್ತು. ಅಲ್ಲಿ ಎರಡನೇ ಅಬ್ಬಾಸಿಡ್ ಖಲೀಫನನ್ನು ಕನಕ್ ಎಂಬ ವ್ಯಕ್ತಿ ಕಂಡಿದ್ದನು. ನಂತರ ಖಲೀಫರು ಗಣಿತಜ್ಞ ಇಬ್ರಾಹಿಂ ಅಲ್-ಫಜಾರಿ ಗೆ ಈ ಗ್ರಂಥವನ್ನು ಅರೇಬಿಕ್‌ಗೆ ಭಾಷಾಂತರಿಸಲು ಹೇಳಿದ್ದಾರೆ.. ಅದರ ನಂತರ, ಆಗಿನ ಸ್ಪೇನ್‌ನ ಆಡಳಿತಗಾರನು ಲೇಖಕನಿಗೆ ಭಾರಿ ಲಂಚ ನೀಡುವ ಮೂಲಕ ಪುಸ್ತಕದ ಪ್ರತಿಯನ್ನು ಪಡೆದನು.ಅಂತಿಮವಾಗಿ, ಈ ಪುಸ್ತಕವನ್ನು ಬಹುತೇಕ ಎಲ್ಲಾ ಯುರೋಪಿಯನ್ ಭಾಷೆಗಳಿಗೆ ಅನುವಾದಿಸಲಾಯಿತು ಮತ್ತು ಯುರೋಪಿನ ಎಲ್ಲಾ ಬಾಹ್ಯಾಕಾಶ ಅಧ್ಯಯನಗಳಿಗೆ ಆಧಾರವಾಯಿತು ಎಂದು ರಾಜ್ಯಪಾಲರು ಹೇಳಿದರು.
"ನಮ್ಮ ವಿಜ್ಞಾನಿಗಳಾದ ಡಾ. ಮಾಧವನ್ ನಾಯರ್ ಮತ್ತು ಡಾ. ಶಿವನ್ ಅವರು ನಮಗಾಗಿ ತುಂಬಾ ಸಾಧನೆ ಮಾಡಿದ್ದರಿಂದ ಮಾತ್ರವಲ್ಲ, ನಮ್ಮದೇ ಆದ ಸಂಪ್ರದಾಯಗಳು ಮತ್ತು ನೀತಿಗಳನ್ನು ಪುನರುಜ್ಜೀವನಗೊಳಿಸಿದ್ದಕ್ಕಾಗಿ ನಾವು ಅವರಿಗೆ ಕೃತಜ್ಞರಾಗಿರುತ್ತೇವೆ" ಸಮಾರಂಭದಲ್ಲಿ ಇಸ್ರೋ ಮಾಜಿ ಅಧ್ಯಕ್ಷರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


