'ರಾತ್ರಿ ಜೀವನ' ಪ್ರಸ್ತಾವನೆಗೆ ಠಾಕ್ರೆ ಸಂಪುಟ ಅಸ್ತು, ಜನವರಿ 27ರಿಂದ ಮುಂಬೈ 24X7 ಓಪನ್
ದೇಶದ ವಾಣಿಜ್ಯ ನಗರಿ ಮುಂಬೈನ 'ರಾತ್ರಿ ಜೀವನ'ಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಸಚಿವ ಸಂಪುಟ ಬುಧವಾರ ಅಸ್ತು ಎಂದಿದ್ದು, ಇನ್ಮುಂದೆ ಮಹಾನಗರಿಯ ಮಾಲ್ಗಳು, ಉಪಾಹಾರ ರೆಸ್ಟೋರೆಂಟ್ಗಳು, ಮಲ್ಟಿಫ್ಲೆಕ್ಸ್ಗಳು ಹಾಗೂ ಇತರೆ ಅಂಗಡಿಗಳು ದಿನದ 24 ಗಂಟೆ ತೆರೆದಿರುತ್ತವೆ.

ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈನ 'ರಾತ್ರಿ ಜೀವನ'ಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಸಚಿವ ಸಂಪುಟ ಬುಧವಾರ ಅಸ್ತು ಎಂದಿದ್ದು, ಇನ್ಮುಂದೆ ಮಹಾನಗರಿಯ ಮಾಲ್ಗಳು, ಉಪಾಹಾರ ರೆಸ್ಟೋರೆಂಟ್ಗಳು, ಮಲ್ಟಿಫ್ಲೆಕ್ಸ್ಗಳು ಹಾಗೂ ಇತರೆ ಅಂಗಡಿಗಳು ದಿನದ 24 ಗಂಟೆ ತೆರೆದಿರುತ್ತವೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ 'ಮುಂಬೈ 24x7 ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
ಜನವರಿ 27ರಿಂದ ಮುಂಬೈ ನಗರದಲ್ಲಿ ಮಾಲ್ಗಳು, ರೆಸ್ಟೋರೆಂಟ್ಗಳು, ಮಲ್ಟಿಫ್ಲೆಕ್ಸ್ಗಳು ಹಾಗೂ ಇತರೆ ವಾಣಿಜ್ಯ ಸಂಸ್ಥೆಗಳು ದಿನದ 24 ಗಂಟೆ ತೆರೆದಿರುತ್ತವೆ ಎಂದು ಸಚಿವ ಸಂಪುಟ ಸಭೆಯ ಬಳಿಕ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಮತ್ತು ಗೃಹ ಸಚಿವ ಅನಿಲ್ ದೇಶಮುಖ್ ಅವರು ಹೇಳಿದ್ದಾರೆ.
ಲಂಡನ್ ಹಾಗೂ ಮಧ್ಯಪ್ರದೇಶದ ಇಂದೋರ್ ನ ರಾತ್ರಿ ಜೀವನದ (ನೈಟ್ ಲೈಫ್) ಉದಾಹರಣೆಯನ್ನು ನೀಡಿದ ಆದಿತ್ಯ ಠಾಕ್ರೆ, "ಲಂಡನ್ ನ ನೈಟ್ ಲೈಫ್ ಆರ್ಥಿಕ ಚಟುವಟಿಕೆ ಮೌಲ್ಯವೇ ಐದು ಬಿಲಿಯನ್ ಪೌಂಡ್ ಇದೆ. ಸರ್ಕಾರದ ಈ ನಿರ್ಧಾರ ಆದಾಯ ಮತ್ತು ಉದ್ಯೋಗಾವಕಾಶ ಹೆಚ್ಚಿಸಲು ಸಹಕಾರಿಯಾಗಲಿದೆ. ಸೇವಾ ವಲಯದಲ್ಲಿ ಈಗಾಗಲೇ 5 ಲಕ್ಷ ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ" ಎಂದರು.
ಈ ರೀತಿ ದಿನದ 24 ಗಂಟೆಯೂ ಸವಲತ್ತು ಒದಗಿಸುವಲ್ಲಿ ಮುಂಬೈ ಹಿಂದುಳಿಯಬಾರದು. ನೈಟ್ ಲೈಫ್ ಅಂದರೆ ಮದ್ಯಪಾನ ಸೇವನೆ ಮಾತ್ರ ಅಂದುಕೊಳ್ಳುವುದು ತಪ್ಪು. ಆನ್ ಲೈನ್ ಶಾಪಿಂಗ್ 24 ಗಂಟೆಯೂ ತೆರೆದಿರುತ್ತದೆ ಅಂದರೆ ಮಳಿಗೆ ಮತ್ತು ಸಂಸ್ಥೆಗಳನ್ನು ಏಕೆ ರಾತ್ರಿ ವೇಳೆ ಮುಚ್ಚಬೇಕು? ಎಂದು ಪ್ರಶ್ನಿಸಿದ್ದಾರೆ.
"ರಾತ್ರಿ ವೇಳೆ ಮಳಿಗೆಗಳು, ಶಾಪಿಂಗ್ ಮಾಲ್ಗಳು, ಶಾಪ್ಗಳು ಮತ್ತು ರೆಸ್ಟೋರೆಂಟ್ಗಳು ಕಡ್ಡಾಯವಾಗಿ ತೆರೆದಿರಲೇಬೇಕು ಎಂದೇನಿಲ್ಲ. ಉತ್ತಮ ವ್ಯವಹಾರ ಮಾಡಬಹುದೆಂದು ಭಾವಿಸುವವರು ಮಾತ್ರ ತಮ್ಮ ಅಂಗಡಿ-ಶಾಪ್ ಮತ್ತು ಮಾಲ್ಗಳನ್ನು ಇಷ್ಟಪಟ್ಟು ತೆರೆಯಬಹುದಾಗಿದೆ," ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


